ಡೇವಿಸ್‌ ಕಪ್‌: ಭಾರತದ ಪಾಕ್‌ ಪ್ರವಾಸ ರದ್ದು?

By Web DeskFirst Published Aug 9, 2019, 12:15 PM IST
Highlights

ಕಾಶ್ಮೀರ ಗಡಿಯಲ್ಲಿ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹೆಚ್ಚುತ್ತಿರುವುದು ಕ್ರೀಡೆಯ ಮೇಲೂ ಪರಿಣಾಮ ಬೀರಿದ್ದು, ಪಾಕಿಸ್ತಾನದಲ್ಲಿ ನಡೆಯಲಿರುವ ಡೇವಿಸ್ ಕಪ್ ಟೂರ್ನಿ ಆಡಲು ಭಾರತ ಹಿಂದೇಟು ಹಾಕುವ ಸಾಧ್ಯತೆ ಇದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ(ಆ.09): ಪಾಕಿಸ್ತಾನದ ಜತೆಗಿನ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, ಭಾರತ ಟೆನಿಸ್‌ ತಂಡ ಏಷ್ಯಾ/ಓಷಿಯಾನಿಯಾ ಗುಂಪು ಹಂತದ ಡೇವಿಸ್ ಕಪ್ ಪಂದ್ಯವನ್ನಾಡಲು ಇಸ್ಲಾಮಾಬಾದ್‌ಗೆ ತೆರಳುವ ಸಾಧ್ಯತೆ ಕಡಿಮೆಯಾಗಿದೆ. 

ಡೇವಿಸ್ ಕಪ್: ಪಾಕಿಸ್ತಾನ ಪ್ರವಾಸಕ್ಕೆ ಭಾರತ ತಂಡ ಪ್ರಕಟ!

ಅಖಿಲ ಭಾರತೀಯ ಟೆನಿಸ್‌ ಸಂಸ್ಥೆ (ಎಐಟಿಎ) ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌)ಗೆ ಮನವಿ ಮಾಡಲು ಚಿಂತಿಸುತ್ತಿದೆ. ಸೆ.14 ಹಾಗೂ 15ರಂದು ಪಾಕ್‌ ರಾಜಧಾನಿಯಲ್ಲಿ ಪಂದ್ಯ ನಡೆಯಬೇಕಿದ್ದು, ಸಂಸ್ಥೆ ಈಗಾಗಲೇ ವೀಸಾ ಪ್ರಕ್ರಿಯೆ ಆರಂಭಿಸಿದೆ. 

ಡೇವಿಸ್ ಕಪ್: 55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ, ಭದ್ರತೆ ಭರವಸೆ!

‘ಅವರು ವೀಸಾ ನೀಡದಿದ್ದರೆ, ನಾವು ಪಾಕಿಸ್ತಾನಕ್ಕೆ ಹೋಗುವುದು ಹೇಗೆ?. ಒಂದೊಮ್ಮೆ ವೀಸಾ ನೀಡಿದರೂ ನಮಗೆ ಸೂಕ್ತ ಭದ್ರತೆ ಸಿಗಲಿದೆ ಎನ್ನುವುದಕ್ಕೆ ಖಾತರಿ ಏನು?’ ಎಂದು ಎಐಟಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತ ಡೇವಿಸ್‌ ಕಪ್‌ ತಂಡ 1964ರ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!