Wrestlers sexual harassment case: ಬ್ರಿಜ್‌ಭೂಷಣ್‌ಗೆ ತಾತ್ಕಾಲಿಕ ರಿಲೀಫ್..! ಮಧ್ಯಂತರ ಜಾಮೀನು ಮಂಜೂರು

By Naveen KodaseFirst Published Jul 18, 2023, 5:49 PM IST
Highlights

WFI ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ಗೆ ತಾತ್ಕಾಲಿಕ ಜಾಮೀನು ಮಂಜೂರು
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್‌
ಎರಡು ದಿನಗಳ ಮಟ್ಟಿಗೆ ಬಂಧನ ಭೀತಿಯಿಂದ ಪಾರಾದ ಬಿಜೆಪಿ ಸಂಸದ

ನವದೆಹಲಿ(ಜು.18): ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್‌ ಸಿಂಗ್‌ಗೆ ಡೆಲ್ಲಿ ರೂಸೋ ಅವಿನ್ಯೂ ಕೋರ್ಟ್‌ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡುವ ಮೂಲಕ ತಾತ್ಕಾಲಿಕ ರಿಲೀಫ್ ನೀಡಿದೆ. ಬ್ರಿಜ್‌ಭೂಷಣ್ ಸಿಂಗ್ ಹಾಗೂ ವಿನೋದ್ ತೋಮರ್‌ಗೆ ಎರಡು ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ಜಾಮೀನು ಮಂಜೂರು ಮಾಡಲಾಗಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್‌ ಮ್ಯಾಜಿಸ್ಟ್ರೇಟ್‌ ಹರ್ಜಿತ್ ಸಿಂಗ್ ಜಸ್ಪಾಲ್‌, 25,000 ರುಪಾಯಿ ಬೇಲ್‌ ಬಾಂಡ್‌ ಪಡೆದು, ಬ್ರಿಜ್‌ಭೂಷಣ್ ಸಿಂಗ್ ಅವರಿಗೆ ಜಾಮೀನು ನೀಡಿದೆ. ಇನ್ನು ಬ್ರಿಜ್‌ಭೂಷಣ್ ಸಿಂಗ್ ಮೇಲಿರುವ ವಿಚಾರಣೆಯನ್ನು ಎರಡು ದಿನಗಳ ಬಳಿಕ ಅಂದರೆ ಜುಲೈ 20, 2023ರಲ್ಲಿ ಕೈಗೆತ್ತಿಕೊಳ್ಳಲಿದೆ.

Latest Videos

ಬ್ರಿಜ್‌ಭೂಷಣ್ ಸಿಂಗ್ ಪರ ವಕೀಲರಾದ ರಾಜಿವ್ ಮೋಹನ್‌, ವಿಚಾರಣೆಯ ವೇಳೆ ಮೀಡಿಯಾ ಟ್ರಯಲ್ ಕುರಿತಂತೆ ಮಾತನಾಡಿದಾಗ ನ್ಯಾಯಾದೀಶರು ಹೈಕೋರ್ಟ್‌ ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದರು. 

ಏಷ್ಯಾಡ್‌ ಫುಟ್ಬಾಲ್‌ ಆಡಲು ಅವಕಾಶ ಕೊಡಿಸುವಂತೆ ಪ್ರಧಾನಿಗೆ ಸ್ಟಿಮಾಕ್‌ ಮನವಿ

ಕಳೆದ ಏಪ್ರಿಲ್‌ನಲ್ಲಿ ಅಪ್ರಾಪ್ತೆ ಸೇರಿ​ದಂತೆ 7 ಮಂದಿ ನೀಡಿದ್ದ ದೂರಿಗೆ ಸಂಬಂಧಿ​ಸಿ​ದಂತೆ ದೆಹಲಿ ಪೊಲೀ​ಸರು ಬ್ರಿಜ್‌​ಭೂ​ಷಣ್‌ ವಿರುದ್ಧ ಪೋಕ್ಸೋ ಸೇರಿ 2 ಎಫ್‌​ಐ​ಆರ್‌ ದಾಖ​ಲಿ​ಸಿ​ದ್ದರು. ಈ ಬಗ್ಗೆ 5 ದೇಶ​ಗಳಲ್ಲಿ ನಡೆದಿದ್ದ ಕುಸ್ತಿ ಕೂಟಗಳ ವೇಳೆ ದಾಖಲಾಗಿದ್ದ ಸಿಸಿಟೀವಿ ದೃಶ್ಯಗಳ ಪರಿ​ಶೀ​ಲ​ನೆ, ಕುಸ್ತಿ​ಪ​ಟು​ಗ​ಳು, ರೆಫ್ರಿ ಹಾಗೂ ಕೋಚ್‌​ಗಳು ಸೇರಿ​ದಂತೆ 180ಕ್ಕೂ ಹೆಚ್ಚು ಮಂದಿಯ ಹೇಳಿಕೆ ದಾಖ​ಲಿಸಿಕೊಂಡಿದ್ದ ಪೊಲೀ​ಸರು ತನಿಖೆ ಪೂರ್ಣಗೊಳಿಸಿ ದೆಹಲಿ ಮ್ಯಾಜಿಸ್ಪ್ರೇಟ್‌ ಕೋರ್ಚ್‌ಗೆ 1500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು

ವಿವಿಧ ಸೆಕ್ಷ​ನ್‌​ಗ​ಳಡಿ ಚಾರ್ಜ್‌ಶೀ​ಟ್‌

ಬ್ರಿಜ್‌ ವಿರುದ್ಧ ಪೋಕ್ಸೋ ಕೇಸ್‌ ರದ್ದು​ಗೊ​ಳಿ​ಸಲು ಶಿಫಾ​ರಸು ಮಾಡ​ಲಾ​ಗಿ​ದ್ದರೂ ಇತರರ ದೂರು​ಗ​ಳಿಗೆ ಸಂಬಂಧಿ​ಸಿ​ದಂತೆ ವಿವಿಧ ಸೆಕ್ಷ​ನ್‌​ಗ​ಳಡಿ ಚಾರ್ಜ್‌​ಶೀಟ್‌ ಸಲ್ಲಿ​ಕೆ​ಯಾ​ಗಿದೆ. ಐಪಿಸಿ 354(ಮಹಿಳೆಯರ ಮೇಲೆ ಹಲ್ಲೆ), 354ಎ(ಲೈಂಗಿಕ ಕಿರುಕುಳ), 354ಡಿ(ಹಿಂಬಾಲಿಸುವಿಕೆ) ಹಾಗೂ 506(ಬೆದರಿಕೆ) ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪ ಪಟ್ಟಿಸಲ್ಲಿ​ಸ​ಲಾ​ಗಿದೆ. ಇದರ ಜೊತೆಗೆ ಈಗಾ​ಗಲೇ ಅಮ​ನ​ತು​ಗೊಂಡಿ​ರುವ ಡಬ್ಲ್ಯು​ಎ​ಫ್‌​ಐನ ಹೆಚ್ಚು​ವರಿ ಕಾರ‍್ಯ​ದ​ರ್ಶಿ ವಿನೋದ್‌ ತೋಮರ್‌ ವಿರು​ದ್ಧ ಐಪಿಸಿ 109, 354, 354ಎ ಹಾಗೂ 506 ಸೆಕ್ಷ​ನ್‌​ಗ​ಳಡಿ ಚಾರ್ಜ್‌​ಶೀಟ್‌ ಸಲ್ಲಿ​ಕೆ​ಯಾ​ಗಿದೆ.

ಅಳಿಯ ಕೆ ಎಲ್ ರಾಹುಲ್‌ಗೆ ವಾರ್ನಿಂಗ್ ಕೊಟ್ಟ ಮಾವ ಸುನಿಲ್ ಶೆಟ್ಟಿ..!

ಬ್ರಿಜ್‌ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್‌ ರದ್ದು ಏಕೆ?

ಅಪ್ರಾ​ಪ್ತೆಯ ದೂರಿ​ನಂತೆ ಬ್ರಿಜ್‌ಭೂಷಣ್‌ ವಿರುದ್ಧ ಪೋಕ್ಸೋ ಕೇಸ್‌ ದಾಖ​ಲಾ​ಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡು ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಇತ್ತೀಚೆಗೆ ದೂರುದಾರ ಅಪ್ರಾಪ್ತೆಯ ತಂದೆಯೇ ತಾವು ಸಿಟ್ಟಿನಲ್ಲಿ ಸುಳ್ಳು ಮಾಹಿತಿ ನೀಡಿದ್ದಾಗಿ ಸ್ಪಷ್ಟೀಕರಣ ನೀಡಿದ್ದರು. ಅಪ್ರಾಪ್ತೆಯೂ ತಾವು ಮೊದಲು ನೀಡಿದ್ದ ಹೇಳಿಕೆಯನ್ನು ಬದಲಿಸಿದ್ದರು. ಇದರ ಜೊತೆಗೆ ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳವಾಗಿದೆ ಎನ್ನುವುದಕ್ಕೆ ಪೂರಕ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಪೋಕ್ಸೋ ಕೇಸ್‌ ರದ್ದುಪಡಿಸುವಂತೆ ದೆಹಲಿ ಸೆಷನ್ಸ್‌ ನ್ಯಾಯಾಲಯಕ್ಕೆ ಶಿಫಾರಸು ಮಾಡಿದ್ದಾರೆ. ಒಂದು ವೇಳೆ ಪೋಕ್ಸೋ ಕೇಸ್‌ನಲ್ಲಿ ಆರೋಪ ಸಾಬೀತಾದರೆ ಕನಿಷ್ಠ 3 ವರ್ಷ ಜೈಲು ಶಿಕ್ಷೆಯಾಗಲಿದೆ.

click me!