ಆರ್‌ಸಿಬಿ ತಂಡದ ಕೋಚಿಂಗ್ ಸ್ಟಾಫ್ ಗೇಟ್‌ಪಾಸ್ ಫಿಕ್ಸ್?
ಸಂಜಯ್ ಬಂಗಾರ್ ಹಾಗೂ ಮೈಕ್ ಹೆಸನ್‌ಗೆ ಅವರನ್ನು ಆರ್‌ಸಿಬಿ ಕೈಬಿಡುವ ಸಾಧ್ಯತೆ
ಯಾರಾಗಬಹುದು ಆರ್‌ಸಿಬಿ ತಂಡದ ನೂತನ ಹೆಡ್‌ಕೋಚ್?
ಬೆಂಗಳೂರು(ಜು.18): ರಾಯಲ್ ಚಾಲೆಂಜರ್ಸ್ ಬೆಂಗಳೂರು, ರೆಡ್ ಅರ್ಮಿ ಪಡೆ, ಬೆಂಗಳೂರು ತಂಡ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳೋ RCBಗೆ ಲಕ್ಕೇ ಇಲ್ಲ ಕಂಡ್ರಿ. ಕಳೆದ 16 ಸೀಸನ್ನಲ್ಲಿ ಒಮ್ಮೆಯೋ ಚಾಂಪಿಯನ್ ಆಗಿಲ್ಲ. ಮೂರು ಬಾರಿ ಫೈನಲ್ಗೇರಿ ರನ್ನರ್ ಅಪ್ ಆಗಿದ್ದೇ ರೆಡ್ ಆರ್ಮಿ ಪಡೆಯ ಸಾಧನೆ. ಆಟಗಾರರನ್ನ ಬದಲಿಸಿದ್ದಾಯ್ತು, ಕ್ಯಾಪ್ಟನ್ಗಳನ್ನ ಚೇಂಜ್ ಮಾಡಿದ್ದು ಆಯ್ತು, ಕೋಚ್ಗಳನ್ನ ಬದಲಿಸಿದ್ದು ಆಯ್ತು.. ಆದ್ರೂ RCB ನಸೀಬು ಮಾತ್ರ ಬದಲಾಗಲಿಲ್ಲ.
ಈ ವರ್ಷ ಚಾಂಪಿಯನ್ ಆಗಲು ವಿಫಲವಾದ ಬೆನ್ನಲ್ಲೇ ಕೋಚ್ ಮತ್ತು ಮೆಂಟರ್ ಚೇಂಜ್ ಮಾಡಲು RCB ಫ್ರಾಂಚೈಸಿ ಮುಂದಾಗಿದೆ. ಮುಂದಿನ ವರ್ಷವಾದ್ರೂ ಐಪಿಎಲ್ ಕಪ್ ಗೆಲ್ಲಬೇಕು ಅನ್ನೋ ಹಠಕ್ಕೆ ಬಿದ್ದಿರುವ ರೆಡ್ ಆರ್ಮಿ ಪಡೆ, ಕೋಚ್-ಮೆಂಟರ್ ಜೊತೆ ಕೆಲ ಪ್ಲೇಯರ್ಸ್ಗೂ ಕೊಕ್ ಕೊಡಲಿದೆ. ಹಾಗಾದ್ರೆ RCB ತಂಡದ ಮುಂದಿನ ಕೋಚ್ ಯಾರಾಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಹುಟ್ಟಿಕೊಳ್ಳೋದು ಸಹಜ ಅಲ್ವಾ..? ಕೋಚ್ ರೇಸ್ನಲ್ಲಿ ತ್ರಿಮೂರ್ತಿಗಳಿದ್ದಾರೆ. ಈ ಮೂವರಲ್ಲಿ ಒಬ್ಬರು ರೆಡ್ ಆರ್ಮಿ ಪಡೆಯ ಗುರುಗಳಾಗಲಿದ್ದಾರೆ.
ರವಿಶಾಸ್ತ್ರಿ:
ಟೀಂ ಇಂಡಿಯಾದ ಯಶಸ್ವಿ ಕೋಚ್ ಎನಿಸಿಕೊಂಡಿರುವ ರವಿಶಾಸ್ತ್ರಿ, RCB ಕೋಚ್ ಆಗೋ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. 2019ರ ಒನ್ಡೇ ವರ್ಲ್ಡ್ಕಪ್ ಬಳಿಕ ಭಾರತದ ಕೋಚ್ ಸ್ಥಾನ ತ್ಯಜಿಸಿರುವ ಶಾಸ್ತ್ರಿ, ಸದ್ಯ ಕಾಮೆಂಟ್ರಿ ಮಾಡ್ತಿದ್ದಾರೆ. ಟೀಂ ಇಂಡಿಯಾ ಕೋಚ್ ಆಗಿ ಐಸಿಸಿ ಟೂರ್ನಿ ಗೆದ್ದಿಲ್ಲ ಅನ್ನೋದು ಬಿಟ್ರೆ ದ್ವಿಪಕ್ಷೀಯ ಸರಣಿಗಳನ್ನ ಗೆದ್ದಿದ್ದಾರೆ. ವಿದೇಶದಲ್ಲಿ.. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಸತತ ಎರಡು ಸಲ ಭಾರತ ಟೆಸ್ಟ್ ಸರಣಿ ಗೆದ್ದಿರುವುದು ಶಾಸ್ತ್ರಿ ಕೋಚ್ ಅವಧಿಯಲ್ಲೇ. ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಕಾಂಬಿನೇಷನ್ ಎಷ್ಟು ಡೇಂಜರಸ್ ಅನ್ನೋದು ಕ್ರಿಕೆಟ್ ಜಗತ್ತಿಗೆ ಈಗಾಗ್ಲೇ ತಿಳಿದಿದೆ. ಈ ಜೋಡಿ ಮತ್ತೆ ಒಂದಾದ್ರೆ RCB ಐಪಿಎಲ್ ಟ್ರೋಫಿ ಗೆಲ್ಲಲಿದೆ ಅನ್ನೋದು ಫ್ರಾಂಚೈಸಿಗಳ ಆಶಯ.
ದುಲೀಪ್ ಟ್ರೋಫಿಯಲ್ಲಿ ಕನ್ನಡದ ತ್ರಿಮೂರ್ತಿಗಳ ಕಮಾಲ್..! ಕರ್ನಾಟಕದಲ್ಲಿ ಮತ್ತೆ ವೇಗಿಗಳ ಉದಯ?
ರಾಹುಲ್ ದ್ರಾವಿಡ್:
ಸದ್ಯ ಟೀಂ ಇಂಡಿಯಾ ಕೋಚ್ ಆಗಿರುವ ರಾಹುಲ್ ದ್ರಾವಿಡ್, ಅಕ್ಟೋಬರ್-ನವೆಂಬರ್ನಲ್ಲಿ ನಡೆಯುವ ಏಕದಿನ ವಿಶ್ವಕಪ್ ಬಳಿಕ ತಮ್ಮ ಸ್ಥಾನವನ್ನು ತ್ಯಜಿಸಲಿದ್ದಾರೆ. ಆ ಬಳಿಕ ಅವರ ಫ್ಯೂಚರ್ ಪ್ಲಾನ್ ಬಗ್ಗೆ ನಿರ್ಧರಿಸಲಿದ್ದಾರೆ. ಆರಂಭದ ಮೂರು ವರ್ಷ RCB ಪರ ಆಡಿದ್ದ ದ್ರಾವಿಡ್, ಕ್ಯಾಪ್ಟನ್ ಸಹ ಆಗಿದ್ದರು. ಟೀಂ ಇಂಡಿಯಾ ಕೋಚ್, ಅಂಡರ್-19 ಕೋಚ್, ರಾಜಸ್ಥಾನ ರಾಯಲ್ಸ್ನಲ್ಲೂ ಕೋಚ್ ಆಗಿ ಕೆಲಸ ಮಾಡಿರುವ ಅನುಭವವಿದೆ. ಸದ್ಯ ಕೊಹ್ಲಿ-ದ್ರಾವಿಡ್ ಬಾಡಿಂಗ್ ಚೆನ್ನಾಗಿದೆ. ಹೀಗಾಗಿ ಅವರನ್ನೇ ಕೋಚ್ ಆಗಿ ನೇಮಿಸಲು RCB ಫ್ರಾಂಚೈಸಿ ಪ್ಲಾನ್ ಮಾಡುತ್ತಿದೆ.
ಅನಿಲ್ ಕುಂಬ್ಳೆ:
ಆರ್‌ಸಿಬಿ ತಂಡವನ್ನ ಮೊದಲ ಬಾರಿಗೆ 2009ರಲ್ಲಿ ಐಪಿಎಲ್ ಫೈನಲ್ಗೇರಿಸಿದ ಕ್ಯಾಪ್ಟನ್ ಅನಿಲ್ ಕುಂಬ್ಳೆ. ಟೀಂ ಇಂಡಿಯಾ ಕೋಚ್ ಮತ್ತು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಕೋಚ್, ಮುಂಬೈ ಇಂಡಿಯನ್ಸ್ ತಂಡದಲ್ಲೂ ಕೆಲಸ ಮಾಡಿದ ಅನುಭವವಿದೆ. ಜೊತೆಗೆ RCB ಕೋಚ್ ಆಗುವ ಇಚ್ಚೆಯನ್ನೂ ಅವರು ವ್ಯಕ್ತಪಡಿಸಿದ್ದರು. ಹೀಗಾಗಿ ಸ್ಥಳೀಯ ಆಟಗಾರನಿಗೆ ಕೋಚ್ ಜವಾಬ್ದಾರಿ ಸಿಕ್ಕರೂ ಆಶ್ಚರ್ಯವಿಲ್ಲ. ಆದ್ರೆ ಕುಂಬ್ಳೆ ಮತ್ತು ಕೊಹ್ಲಿ ನಡುವಿನ ಸಂಬಂಧ ಉತ್ತಮವಾಗಿಲ್ಲ. ಪಂಜಾಬ್ ಕೋಚ್ ಆಗಿ ಜಂಬೋ ವಿಫಲವಾಗಿದ್ದಾರೆ. ಈ ಎರಡು ಕುಂಬ್ಳೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಅಳಿಯ ಕೆ ಎಲ್ ರಾಹುಲ್‌ಗೆ ವಾರ್ನಿಂಗ್ ಕೊಟ್ಟ ಮಾವ ಸುನಿಲ್ ಶೆಟ್ಟಿ..!
2008-09ರಲ್ಲಿ ವೆಂಕಟೇಶ್ ಪ್ರಸಾದ್, 2010ರಿಂದ 13ರವರೆಗೆ ರೇ ಜನ್ನಿಂಗ್ಸ್, 2014ರಿಂದ 18ರವರೆಗೆ ಡೇನಿಯಲ್ ವೆಟ್ಟೋರಿ, 2019ರಲ್ಲಿ ಗ್ಯಾರಿ ಕಸ್ಟರ್ನ್, 2020-21ರಲ್ಲಿ ಸೈಮನ್ ಕ್ಯಾಟಿಚ್, 2022-23ರಲ್ಲಿ ಸಂಜಯ್ ಬಂಗಾರ್, ಕಳೆದ 16 ಸೀಸನ್ನಲ್ಲಿ ಆರು ಮಂದಿ ಕೋಚ್ಗಳಿಂದ RCBಯನ್ನ ಚಾಂಪಿಯನ್ ಮಾಡಲು ಆಗಿಲ್ಲ. ಈಗ ಹೊಸ ಕೋಚ್, ಚಾಂಪಿಯನ್ ಮಾಡ್ತಾರಾ..? ಅದಕ್ಕೆ ಕಾಲವೇ ಉತ್ತರ ನೀಡಬೇಕು..?