ದುಲೀಪ್ ಟ್ರೋಫಿಯಲ್ಲಿ ಕನ್ನಡದ ತ್ರಿಮೂರ್ತಿಗಳ ಕಮಾಲ್..! ಕರ್ನಾಟಕದಲ್ಲಿ ಮತ್ತೆ ವೇಗಿಗಳ ಉದಯ?

By Suvarna News  |  First Published Jul 18, 2023, 3:56 PM IST

ವೇಗಿಗಳ ನಾಡಲ್ಲಿ ಮರೆಯಾಗಿದ್ದ ವೇಗಿಗಳು..!
ಕರ್ನಾಟಕದಲ್ಲಿ ಮತ್ತೆ ಉದಯಿಸ್ತಿದ್ದಾರೆ ಫಾಸ್ಟ್ ಬೌಲರ್ಸ್
ದುಲೀಪ್ ಟ್ರೋಫಿಯಲ್ಲಿ ತ್ರಿಮೂರ್ತಿಗಳು ಕಮಾಲ್​..!
 


ಬೆಂಗಳೂರು(ಜು.18) ಕರ್ನಾಟಕ, ಟೀಂ ಇಂಡಿಯಾಗೆ ಬ್ಯಾಟರ್ಸ್ ಮತ್ತು ಸ್ಪಿನ್ ಬೌಲರ್​ಗಳನ್ನ ಹೇಗೆ ಕೊಡುಗೆಯಾಗಿ ನೀಡಿದ್ಯೋ ಹಾಗೆ ವೇಗದ ಬೌಲರ್​ಗಳನ್ನೂ ನೀಡಿದೆ. ವೇಗಿಗಳ ನಾಡು ಕರ್ನಾಟಕ ಅಂದ್ರೆ ತಪ್ಪಲ್ಲ. ಜಾವಗಲ್ ಶ್ರೀನಾಥ್​, ವೆಂಕಟೇಶ್ ಪ್ರಸಾದ್​, ಡೇವಿಡ್ ಜಾನ್ಸನ್, ದೊಡ್ಡ ಗಣೇಶ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಎಸ್​. ಅರವಿಂದ್​ ಹೀಗೆ ಸಾಕಷ್ಟು ವೇಗದ ಬೌಲರ್ಸ್​ ಕರ್ನಾಟಕದಿಂದ ಟೀಂ ಇಂಡಿಯಾ ಪ್ರತಿನಿಧಿಸಿದ್ದಾರೆ. ಇದರಲ್ಲಿ ಬಹುತೇಕರು ಮಿಂಚಿದ್ದಾರೆ.

ಸದ್ಯ ಟೀಂ ಇಂಡಿಯಾದಲ್ಲಿ ಕರ್ನಾಟಕದ ಒಬ್ಬೇ ಒಬ್ಬ ಫಾಸ್ಟ್ ಬೌಲರ್ ಇಲ್ಲ. ಪ್ರತಿ ಎರಡು-ಮೂರು ವರ್ಷಕ್ಕೆ ಒಬ್ಬ ವೇಗದ ಬೌಲರ್ ಕರ್ನಾಟಕದಿಂದ ರಾಷ್ಟ್ರೀಯ ತಂಡ ಸೇರಿಕೊಳ್ಳುತ್ತಿದ್ದರು. ಆದ್ರೆ ಇತ್ತೀಚೆಗೆ ಕರ್ನಾಟಕದ ಯಾವ್ದೇ ಫಾಸ್ಟ್ ಬೌಲರ್​ ಟೀಂ ಇಂಡಿಯಾ ಪರ ಆಡಿಲ್ಲ. ವೇಗಿಗಳ ನಾಡಿನಲ್ಲಿ ವೇಗಿಗಳೇ ಇಲ್ಲದಂತಾಗಿತ್ತು. ಕರ್ನಾಟಕದಲ್ಲಿನ ಬತ್ತಳಿಕೆಗಳು ಮುಗಿದಿವೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದ್ರೆ ಈಗ ದಿಢೀರನೇ ಒಂದಲ್ಲ ಎರಡಲ್ಲ ಮೂರು ಬತ್ತಳಿಕೆಗಳು ರೆಡಿಯಾಗಿವೆ. ಅರ್ಥಾತ್​ ಮೂವರು ವೇಗಿಗಳ ಉಗಮವಾಗಿದೆ. ಅದು ದುಲೀಪ್ ಟ್ರೋಫಿ ಮೂಲಕ.

Tap to resize

Latest Videos

ಧೋನಿ ಮನೆಯಲ್ಲಿನ ಬೈಕ್-ಕಾರು ಕಲೆಕ್ಷನ್‌ಗೆ ಮನಸೋತ ವೆಂಕಟೇಶ್ ಪ್ರಸಾದ್‌..!

ಹೌದು, ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿಯಲ್ಲಿ ಕರ್ನಾಟಕದ ವೇಗದ ಬೌಲರ್​ಗಳು ಮಿಂಚಿದ್ದಾರೆ. ಸೌತ್ ಝೋನ್ ತಂಡಕ್ಕೆ ದುಲೀಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದೇ ಕನ್ನಡದ ಮೂವರು ಫಾಸ್ಟ್ ಬೌಲರ್ಸ್​. ಚಿನ್ನಸ್ವಾಮಿ ಸ್ಟೇಡಿಯಂನ ಬೌನ್ಸಿ ಪಿಚ್​ನಲ್ಲಿ ಈ ತ್ರಿಮೂರ್ತಿಗಳು ಮಾರಕ ಬೌಲಿಂಗ್ ದಾಳಿ ನಡೆಸಿದ್ರು. ಪರಿಣಾಮ ಪಶ್ಚಿಮ ವಲಯ ತಂಡ ತತ್ತರಸಿ ಹೋಯ್ತು. ವೆಸ್ಟ್ ಝೋನ್ ತಂಡದಲ್ಲಿ ಏನು ಡಮ್ಮಿ ಬ್ಯಾಟರ್ಸ್ ಇರಲಿಲ್ಲ. ಪೂಜಾರ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್, ಪ್ರಿಯಾಂಕ್ ಪಾಂಚಾಲ್ ಹೀಗೆ ಘಟಾನುಘಟಿ ಬ್ಯಾಟರ್​ಗಳಿಗೆ ಎರೆಡೆರಡು ಬಾರಿ ಪೆವಿಲಿಯನ್ ದಾರಿ ತೋರಿಸಿದ್ದೇ ಕರ್ನಾಟಕದ ವೇಗಿಗಳು.

40ರಲ್ಲಿ 33 ವಿಕೆಟ್​ಗಳು ಕನ್ನಡಿಗರ ಪಾಲು..!

ದುಲೀಪ್ ಟ್ರೋಫಿಯ ಸೆಮಿಫೈನಲ್ & ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆದವು. ಸೆಮಿಸ್​ನಲ್ಲಿ ಉತ್ತರ ವಲಯ ಹಾಗೂ ಫೈನಲ್​ನಲ್ಲಿ ಪಶ್ಚಿಮ ವಲಯ ತಂಡಗಳನ್ನ ಸೋಲಿಸಿದ ದಕ್ಷಿಣ ವಲಯ ತಂಡ ದುಲೀಪ್ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಸೌತ್ ಝೋನ್​ಗೆ ಕನ್ನಡಿಗರು ದುಲೀಪ್ ಟ್ರೋಫಿ ಗೆಲ್ಲಿಸಿಕೊಟ್ಟರು ಅಂದ್ರೆ ತಪ್ಪಲ್ಲ. ಎದುರಾಳಿಯ 40ರಲ್ಲಿ 33 ವಿಕೆಟ್​ಗಳನ್ನ ಕರ್ನಾಟಕದ ವೇಗದ ಬೌಲರ್​ಗಳೇ ಪಡೆದಿದ್ದಾರೆ. ಕೊಡಗಿನ ಕುವರ ವಿದ್ಯುತ್​ ಕಾವೇರಪ್ಪ ಬರೋಬ್ಬರಿ 15 ವಿಕೆಟ್ ಪಡೆದಿದ್ದಾರೆ. ಇನ್ನು  ವಾಸುಕಿ ಕೌಶಿಕ್ ಮತ್ತು ವೈಶಾಕ್ ವಿಜಯ್​ಕುಮಾರ್ ಎರಡು ಮ್ಯಾಚ್​ನಿಂದ ತಲಾ 9 ವಿಕೆಟ್​ಗಳನ್ನ ಉರುಳಿಸಿದ್ರು. ಅಲ್ಲಿಗೆ ನೀವೇ ಊಹಿಸಿ ಈ ತ್ರಿವಳಿ ವೇಗಿಗಳು ಎದುರಾಳಿಯನ್ನ ಹೇಗೆ ಕಾಡಿದ್ದಾರೆ ಅಂತ.

ಇವರೇ ನೋಡಿ ಅತಿಹೆಚ್ಚು ಟ್ಯಾಕ್ಸ್‌ ಕಟ್ಟುವ ಭಾರತದ ಕ್ರಿಕೆಟಿಗ..! ಆದ್ರೆ ಇವರು ಕೊಹ್ಲಿ, ಸಚಿನ್,ಯುವಿ ಅಲ್ಲವೇ ಅಲ್ಲ..!

ಟೀಂ ಇಂಡಿಯಾಗೆ ಎಂಟ್ರಿಕೊಡ್ತಾರಾ ತ್ರಿವಳಿಗಳು..?

ಈ ತ್ರಿವಳಿ ಫಾಸ್ಟ್ ಬೌಲರ್ಸ್​ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಆಯ್ಕೆಗಾರರ ಗಮನವನ್ನೂ ಸೆಳೆದಿದ್ದಾರೆ. ಇವರು ಪ್ರದರ್ಶನ ಹೀಗೆ ಮುಂದುವರೆದ್ರೆ ಸದ್ಯದಲ್ಲೇ ಟೀಂ ಇಂಡಿಯಾಗೆ ಎಂಟ್ರಿಕೊಡಲಿದ್ದಾರೆ. ಭಾರತ ತಂಡದಲ್ಲೂ ವೇಗದ ಬೌಲರ್​ಗಳ ಕೊರತೆ ಇದೆ. ಅದನ್ನ ಈ ತ್ರಿವಳಿ ವೇಗಿಗಳು ನೀಗಿಸ್ತಾರಾ..? ಕಾದು ನೋಡ್ಬೇಕು.

click me!