ವಿಶ್ವ ಬಾಕ್ಸಿಂಗ್‌ ಕೂಟ: ಭಾರ​ತೀಯ​ರಿಗೆ ಯಶ​ಸ್ಸು

By Web Desk  |  First Published Sep 14, 2019, 1:03 PM IST

ಭಾರತೀಯ ಬಾಕ್ಸರ್‌ಗಳು ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಮೊದಲ ದಿನ ಅದ್ಭುತ ಪ್ರದರ್ಶನ ತೋರುವ ಮೂಲಕ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ರಷ್ಯಾ(ಸೆ.14): ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬಾಕ್ಸರ್‌ಗಳ ಗೆಲು​ವಿನ ಓಟ ಆರಂಭ​ವಾ​ಗಿದೆ. ಎಲ್ಲಾ 8 ಬಾಕ್ಸರ್‌ಗಳು ಅಂತಿಮ 32ರ ಸುತ್ತು ಪ್ರವೇಶಿಸಿದ್ದಾರೆ. 

ಪದ್ಮವಿಭೂಷಣ ಪ್ರಶಸ್ತಿಗೆ ಬಾಕ್ಸರ್ ಮೇರಿ ಕೋಮ್ ಹೆಸರು ಶಿಫಾರಸು

Tap to resize

Latest Videos

ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ ದುರ್ಯೋಧನ್‌ ಸಿಂಗ್‌ ನೇಗಿ (69 ಕೆ.ಜಿ) ಶುಕ್ರ​ವಾರ ನಡೆದ ಮೊದಲ ಸುತ್ತಿನ ಪಂದ್ಯ​ದಲ್ಲಿ ಅರ್ಮೇನಿಯಾ ಎದುರಾಳಿ ಕೊರ್ಯುನ್‌ ಅಸ್ಟೊಯನ್‌ರನ್ನು 4-1ರಿಂದ ಸೋಲಿಸಿ 2ನೇ ಸುತ್ತಿ​ಗೇ​ರಿ​ದರು. 

ಮುಯೆ ಥಾಯ್ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಕನ್ನಡಿಗ ನಿತಿನ್ ಆಂಜನೇಯಗೆ ಚಿನ್ನ!

ಇನ್ನು ಕಾಮನ್’ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಮನೀಶ್‌ ಕೌಶಿಕ್‌ (63 ಕೆ.ಜಿ) ಹಾಗೂ ಬ್ರಿಜೇಶ್‌ ಯಾದವ್‌ (81 ಕೆ.ಜಿ) ಈಗಾಗಲೇ ಶುಭಾರಂಭ ಮಾಡಿದ್ದು, 2ನೇ ಸುತ್ತಿಗೇ​ರಿ​ದ್ದಾರೆ. ಪ್ರವೇಶಿಸಿದರು. ಅಮಿತ್‌ ಪಂಗಲ್‌ (52 ಕೆ.ಜಿ), ಕವೀಂದರ್‌ ಸಿಂಗ್‌ (57 ಕೆ.ಜಿ) ಹಾಗೂ ಆಶಿಶ್‌ ಕುಮಾರ್‌ (75 ಕೆ.ಜಿ) 2ನೇ ಸುತ್ತಿಗೆ ಬೈ ಪಡೆದಿದ್ದರು.
 

click me!