ಆ್ಯಷಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ತಿರುಗೇಟು ನೀಡುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿದೆ. ಜೋಫ್ರಾ ಆರ್ಚರ್ ದಾಳಿಗೆ ತತ್ತರಿಸಿದ ಆಸೀಸ್ ಕೇವಲ 225 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲಂಡನ್[ಸೆ.14]: ಆಸ್ಪ್ರೇಲಿಯಾ ವಿರುದ್ಧ ಆ್ಯಷಸ್ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 294 ರನ್‌ಗಳಿಗೆ ಆಲೌಟ್ ಆದ ಇಂಗ್ಲೆಂಡ್, 2ನೇ ದಿನವಾದ ಶುಕ್ರವಾರ ಆಸ್ಪ್ರೇಲಿಯಾವನ್ನು 225 ರನ್‌ಗಳಿಗೆ ಆಲೌಟ್ ಮಾಡಿ 69 ರನ್‌ಗಳ ಮುನ್ನಡೆ ಪಡೆಯಿತು. ಜೋಫ್ರಾ ಆರ್ಚರ್ 6 ವಿಕೆಟ್ ಕಬಳಿಸಿ ಮಿಂಚಿದರು. ಮೊದಲ ದಿನ 8 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್, ಜೋಸ್ ಬಟ್ಲರ್ ಅರ್ಧಶತಕದ ನೆರವಿನಿಂದ 294 ರನ್ ಗಳಿಸಿತು.
ಅಬ್ಬಾ! ಅನುಷ್ಕಾ-ವಿರಾಟ್ ಮನೆಗೆ ಇಷ್ಟೊಂದು ರೆಂಟಾ?
ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸೀಸ್ 14 ರನ್‌ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಡೇವಿಡ್ ವಾರ್ನರ್ (5) ಹಾಗೂ ಮಾರ್ಕಸ್ ಹ್ಯಾರಿಸ್ (3) ಇಬ್ಬರೂ ಜೋಫ್ರಾ ಆರ್ಚರ್‌ಗೆ ಬಲಿಯಾದರು.
ಸ್ಮಿತ್ ರ‍್ಯಾಂಕಿಂಗ್‌ನಲ್ಲಿ ಮತ್ತಷ್ಟು ಮುಂದೆ, ಕೊಹ್ಲಿಗೆ 2ನೇ ಸ್ಥಾನವೇ ಫಿಕ್ಸ್..?
ಸ್ಮಿತ್ ಆಸರೆ: ತಂಡಕ್ಕೆ ಮತ್ತೊಮ್ಮೆ ಸ್ಟೀವ್ ಸ್ಮಿತ್ ಆಸರೆಯಾದರು. 3ನೇ ವಿಕೆಟ್‌ಗೆ ಮಾರ್ನಸ್ ಲಬುಶೇನ್ ಜತೆ ಅರ್ಧಶತಕದ ಜೊತೆಯಾಟವಾಡಿದ ಸ್ಮಿತ್, 5ನೇ ವಿಕೆಟ್‌ಗೆ ಮಾರ್ಷ್ ಜತೆ 42 ರನ್ ಸೇರಿಸಿದರು. ಚಹಾ ವಿರಾಮಕ್ಕೆ 147 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಆಸೀಸ್, 3ನೇ ಅವಧಿಯಲ್ಲಿ ದಿಢೀರ್ ಕುಸಿಯಿತು. ಸ್ಮಿತ್ 80 ರನ್ ಗಳಿಸಿ ಔಟಾದರು.
2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 2ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದ್ದು ಒಟ್ಟು 78 ರನ್ ಮುನ್ನಡೆ ಪಡೆದಿದೆ.
ಸತತ 10 ಇನ್ನಿಂಗ್ಸ್‌ನಲ್ಲಿ 50+ ರನ್: ಸ್ಮಿತ್ ದಾಖಲೆ!
ಸ್ಟೀವ್ ಸ್ಮಿತ್ ಕಳೆದ 10 ಆ್ಯಷಸ್ ಇನ್ನಿಂಗ್ಸ್‌ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದು, ಒಂದು ಎದುರಾಳಿ ವಿರುದ್ಧ ಬ್ಯಾಟ್ಸ್‌ಮನ್‌ವೊಬ್ಬ ಈ ರೀತಿ ಸಾಧನೆ ಮಾಡಿದ್ದು ಇದೇ ಮೊದಲು. ಸ್ಮಿತ್, ಇಂಗ್ಲೆಂಡ್ ವಿರುದ್ಧ ಕಳೆದ 10 ಇನ್ನಿಂಗ್ಸ್‌ಗಳಲ್ಲಿ 5 ಶತಕ, 5 ಅರ್ಧಶತಕ ಸಿಡಿಸಿದ್ದಾರೆ. ಅಲ್ಲದೇ ಈ ಆ್ಯಷಸ್ ಸರಣಿಯಲ್ಲಿ ಅವರು 700ಕ್ಕೂ ಹೆಚ್ಚು ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ.
ಸ್ಕೋರ್:
ಇಂಗ್ಲೆಂಡ್ 294 ಹಾಗೂ 9/0
ಆಸ್ಪ್ರೇಲಿಯಾ 225