
ಲಂಡನ್(ಆ.27): ಕ್ರಿಕೆಟಿಗರು 30 ದಾಟಿದರೆ ನಿವೃತ್ತಿ ಮಾತುಗಳು ಕೇಳಿಬರುತ್ತೆ. ಅದರಲ್ಲೂ ವೇಗಿಗಳು ಬಹುಬೇಗನೆ ನಿವೃತ್ತಿಯಾಗುತ್ತಾರೆ. ಆದರೆ ವೆಸ್ಟ್ ಇಂಡೀಸ್ ವೇಗಿ ಸೆಸಿಲ್ ರೈಟ್ ಕಳೆದ 60 ವರ್ಷಗಳಿಂದ ಸತತ ಕ್ರಿಕೆಟ್ ಆಡಿ, ಇದೀಗ ತಮ್ಮ 85ನೇ ವಯಸ್ಸಿನಲ್ಲಿ ನಿವೃತ್ತಿ ಹೇಳಿದ್ದಾರೆ. ಈ ಮೂಲಕ ಸುದೀರ್ಘ ಸಮಯ ಕರಿಯರ್ ಹೊಂದಿದ ಕ್ರಿಕೆಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳಿದ RCB ಮಾಜಿ ಕ್ರಿಕೆಟಿಗ..!
ವೆಸ್ಟ್ ಇಂಡೀಸ್ ವೇಗಿ ಸಿಸಿಲ್ ರೈಟ್ 1959ರ ವರೆಗೆ ವೆಸ್ಟ್ ಇಂಡೀಸ್‌ನಲ್ಲಿ ಕ್ರಿಕೆಟ್ ಆಡಿದ್ದಾರೆ. ರಿಚರ್ಡ್ಸ್ ಹಾಗೂ ಜೊಯೆಲ್ ಗಾರ್ನರ್ ಜೊತೆ ಜಮೈಕಾ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದ ರೈಟ್ 1960ರಲ್ಲಿ ಇಂಗ್ಲೆಂಡ್‌ಗೆ ತೆರಳಿ, ಅಲ್ಲಿ ಕ್ರಿಕೆಟ್ ಮುಂದುವರಿಸಿದರು. ಸರಿ ಸುಮಾರು 60 ವರ್ಷಗಳ ಕ್ರಿಕೆಟ್ ಕರಿಯರ್‌ನಲ್ಲಿ 7,000 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: ಲಸಿತ್ ಮಾಲಿಂಗ ವಿದಾಯ; ಭಾವುಕರಾದ ತೆಂಡುಲ್ಕರ್, ಬುಮ್ರಾ!
ವಿಶೇಷ ಅಂದರೆ 85ನೇ ವಯಸ್ಸಿನಲ್ಲೂ ಸೆಸಿಲ್ ರೈಟ್ ಕ್ರಿಕೆಟ್ ಆಡುತ್ತಿದ್ದರು. ಇಂಗ್ಲೆಂಡ್‌ನಲ್ಲೇ ಸೆಟ್ಲ್ ಆಗಿರುವ ಸೆಸಿಲ್ ರೈಟ್ ಮುಂದಿನ ದಿನಗಳಲ್ಲಿ ಯುವ ಕ್ರಿಕೆಟಿಗರು ಮಾರ್ಗದರ್ಶನ ಮಾಡುವ ಆಲೋಚನೆಯಲ್ಲಿದ್ದಾರೆ. ವಯಸ್ಸು 85 ದಾಟಿದರೂ ಕ್ರಿಕೆಟ್ ಬಿಟ್ಟು ಒಂದು ದಿನ ಇರುವುದಿಲ್ಲ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.