#BigBreaking ಫಿರೋಜ್ ಶಾ ಕೋಟ್ಲಾ ಮೈದಾನ ಇನ್ಮುಂದೆ ಅರುಣ್ ಜೇಟ್ಲಿ ಸ್ಟೇಡಿಯಂ..!

By Web DeskFirst Published Aug 27, 2019, 4:55 PM IST
Highlights

ಭಾರತದ ಐತಿಹಾಸಿಕ ಕ್ರಿಕೆಟ್ ಮೈದಾನಗಳಲ್ಲಿ ಒಂದು ಎನಿಸಿರುವ ಫಿರೋಜ್ ಶಾ ಕೋಟ್ಲಾ ಮೈದಾನ ಇನ್ಮುಂದೆ ಅರುಣ್ ಜೇಟ್ಲಿ ಮೈದಾನ ಎಂದು ಕರೆಸಿಕೊಳ್ಳಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ನವದೆಹಲಿ[ಆ.27]: ಭಾರತದ ಅತ್ಯಂತ ಹಳೆಯ ಮೈದಾನಗಳಲ್ಲಿ ಒಂದು ಎನಿಸಿದ್ದ ಫಿರೋಜ್ ಶಾ ಕೊಟ್ಲಾ ಮೈದಾನದ ಹೆಸರನ್ನು ಬದಲಾಯಿಸಲು ಡೆಲ್ಲಿ ಕ್ರಿಕೆಟ್ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದ್ದು, ಇನ್ಮುಂದೆ ಕೋಟ್ಲಾ ಮೈದಾನ ಅರುಣ್ ಜೇಟ್ಲಿ ಮೈದಾನ ಎಂದು ಕರೆಸಿಕೊಳ್ಳಲಿದೆ.

ಜೇಟ್ಲಿ ನಿಧನ: ಕಣ್ಮರೆಯಾದ ಅತ್ಯುತ್ತಮ ಗೆಳೆಯನಿಗೆ ಗಣ್ಯರ ಸಂತಾಪ

ಹೌದು, ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದ ಅರುಣ್ ಜೇಟ್ಲಿ ಆಗಸ್ಟ್ 24ರಂದು ಕೊನೆಯುಸಿರೆಳೆದಿದ್ದರು. ಜೇಟ್ಲಿಗೆ ಗೌರವ ಸೂಚಕವಾಗಿ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಪುನರ್ ನಾಮಕರಣ ಮಾಡಲು ಇದೀಗ ಡೆಲ್ಲಿ ಕ್ರಿಕೆಟ್ ಸಂಸ್ಥೆ ತೀರ್ಮಾನಿಸಿದೆ. ಈ ಮೊದಲೇ ತೀರ್ಮಾನಿಸಿದಂತೆ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಉದ್ಘಾಟನಾಗೊಳ್ಳಲಿರುವ ದಿನವಾದ ಸೆಪ್ಟೆಂಬರ್ 12ರಂದೇ ಅರುಣ್ ಜೇಟ್ಲಿ ಮೈದಾನ  ಎಂದು ನಾಮಕರಣಗೊಳ್ಳಲಿದೆ ಎಂದು ಡೆಲ್ಲಿ ಕ್ರಿಕೆಟ್ ಸಂಸ್ಥೆ ಟ್ವೀಟ್ ಮೂಲಕ ಖಚಿತಪಡಿಸಿದೆ.

ಜೇಟ್ಲಿ ಸಹಾಯದಿಂದ ಟೀಂ ಇಂಡಿಯಾ ಪ್ರತಿನಿಧಿಸಿದೆ; ವಿರೇಂದ್ರ ಸೆಹ್ವಾಗ್

ಅರುಣ್ ಜೇಟ್ಲಿ ಸಹಕಾರ ಹಾಗೂ ಪ್ರೋತ್ಸಾಹದಿಂದಲೇ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಆಶಿಶ್ ನೆಹ್ರಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಅವರಂತಹ ಪ್ರತಿಭಾನ್ವಿತರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಹೇಳಿದ್ದಾರೆ.

ಕೊಹ್ಲಿ ಸಾಧನೆಗೆ ಮತ್ತೊಂದು ಗರಿ; ಕೋಟ್ಲಾ ಮೈದಾನದಲ್ಲಿ ಕೊಹ್ಲಿ ಹೆಸರು..!

ಅರುಣ್ ಜೇಟ್ಲಿ 1999ರಿಂದ 2013ರವರೆಗೆ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಆಸನ ವ್ಯವಸ್ಥೆ, ವಿಶ್ವ ಮಟ್ಟದ ಡ್ರೆಸ್ಸಿಂಗ್ ರೂಂ, ಅತ್ಯಾಧುನಿಕ ಸೌಲಭ್ಯ ಒದಗಿಸುವ ಮೂಲಕ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಹೊಸ ಲುಕ್ ಬರುವಂತೆ ಮಾಡಿದ್ದರು. 

ಪುನರ್ ನಾಮಕರಣ ಸಮಾರಂಭವು ಜವಹರ್ ಲಾಲ್ ಮೈದಾನದಲ್ಲಿ ನಡೆಯಲಿದ್ದು, ಗೃಹ ಸಚಿವ ಅಮಿತ್ ಶಾ, ಕ್ರೀಡಾ ಸಚಿವ ಕಿರಣ್ ರಿಜಿಜು ಉಪಸ್ಥಿತರಿರಲಿದ್ದಾರೆ.         

click me!