
ಮುಂಬೈ(ಸೆ.16): ಟೀಂ ಇಂಡಿಯಾ ಕ್ರಿಕೆಟಿಗರು ವಿಶ್ವ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಯಾಲರಿ ಪಡೆಯುತ್ತಿರುವ ಆಟಗಾರರು. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಆಟಗಾರರಿಗೆ ಕೋಟಿ ಕೋಟಿ ಸಂಬಳ ನೀಡುತ್ತಿದೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಕೋಚ್ ಆಗಿ ಮರು ಆಯ್ಕೆಯಾದ ರವಿ ಶಾಸ್ತ್ರಿಗೆ 10 ಕೋಟಿ ರೂಪಾಯಿ ವೇತನ ನಿಗದಿ ಪಡಿಸಲಾಗಿದೆ. ಇನ್ನು ಆಟಗಾರರು ಕೂಡ ಕೋಟಿ ಕೋಟಿ ರೂಪಾಯಿಯಲ್ಲೇ ವೇತನ ಪಡೆಯುತ್ತಿದ್ದಾರೆ. ಆದರೆ ಭಾರತದ ಮೂವರು ಕ್ರಿಕೆಟಿಗರು ವಾರ್ಷಿಕ 7 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: 2007 to 2019: ಇಲ್ಲಿದೆ ಟೀಂ ಇಂಡಿಯಾ ಕೋಚ್ ಸ್ಯಾಲರಿ ಸ್ಲಿಪ್!
ಬಿಸಿಸಿಐ ಪ್ರತಿ ವರ್ಷ ಸೆಪ್ಟೆಂಬರ್ ಅಂತ್ಯದಲ್ಲಿ ಆಟಗಾರರ ವೇತನ ಒಪ್ಪಂದವನ್ನು ನವೀಕರಿಸುತ್ತದೆ. 2018-19ರ ಸಾಲಿನ ಒಪ್ಪಂದ ಈ ಸೆಪ್ಟೆಂಬರ್ 30ಕ್ಕೆ ಅಂತ್ಯವಾಗಲಿದೆ. ಪ್ರಸಕ್ತ ಒಪ್ಪಂದದಲ್ಲಿ ನಾಯಕ ವಿರಾಟ್ ಕೊಹ್ಲಿ, ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ವಾರ್ಷಿಕ 7 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಈ ಮೂವರು ಕ್ರಿಕೆಟಿಗರು A+ ಗ್ರೇಡ್ ಪಡೆದಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಸ್ಯಾಲರಿ ಪಟ್ಟಿ ಇಲ್ಲಿದೆ.
ವಾರ್ಷಿಕ 7 ಕೋಟಿ ರೂ. ವೇತನ ಪಡೆಯುತ್ತಿರುವ ಕ್ರಿಕೆಟಿಗರು
ವಾರ್ಷಿಕ 5 ಕೋಟಿ ರೂ. ವೇತನ ಪಡೆಯುತ್ತಿರುವ ಕ್ರಿಕೆಟಿಗರು
ವಾರ್ಷಿಕ 3 ಕೋಟಿ ರೂ. ವೇತನ ಪಡೆಯುತ್ತಿರುವ ಕ್ರಿಕೆಟಿಗರು
ವಾರ್ಷಿಕ 1 ಕೋಟಿ ರೂ. ವೇತನ ಪಡೆಯುತ್ತಿರುವ ಕ್ರಿಕೆಟಿಗರು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.