ಭಾರತದ ಯುವ ಶಟ್ಲರ್‌ಗಳು ಕೇವಲ 2 ದಿನಗಳ ಅಂತರದಲ್ಲಿ ಮೂರು ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಸೆ.16]: ಯುವ ಶಟ್ಲರ್‌ಗಳ ಸಾಹಸದಿಂದ ಕಳೆದೆರಡು ದಿನಗಳಲ್ಲಿ ಭಾರತ 3 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಬ್ಯಾಡ್ಮಿಂಟನ್ ತರಬೇತಿಗೆ Infosys 16 ಕೋಟಿ ನೆರವು; ಪಡುಕೋಣೆ ಅಕಾಡೆಮಿ ಜತೆ ಒಪ್ಪಂದ!
ಸೌರಭ್ ವರ್ಮಾ ವಿಯೆಟ್ನಾಂ ಓಪನ್, ಲಕ್ಷ್ಯಾ ಸೇನ್ ಬೆಲ್ಜಿಯಂ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಮುತ್ತಿಕ್ಕಿದರೆ, ಕೌಶಲ್ ಧರ್ಮಮರ್ ಮ್ಯಾನ್ಮಾರ್ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!
ಭಾನುವಾರ ಫೈನಲ್‌ನಲ್ಲಿ ಚೀನಾದ ಸುನ್ ಫೈ ಸಿಯಾಂಗ್ ವಿರುದ್ಧ ಸೌರಭ್ 21-12, 17-21, 21-14 ಗೇಮ್‌ಗಳಲ್ಲಿ ಜಯಿಸಿದರು. ಶನಿವಾರ ನಡೆದ ಫೈನಲ್‌ನಲ್ಲಿ ಲಕ್ಷ್ಯಾ, ಡೆನ್ಮಾರ್ಕ್ನ ವಿಕ್ಟರ್ ಸೆಂಡ್ಸನ್ ವಿರುದ್ಧ 21-14, 21-15 ಗೇಮ್‌ಗಳಲ್ಲಿ ಗೆಲುವು ಪಡೆದರು. ಇದೇ ವೇಳೆ ಮ್ಯಾನ್ಮಾರ್ ಅಂತಾರಾಷ್ಟ್ರೀಯ ಟೂರ್ನಿಯ ಫೈನಲ್‌ನಲ್ಲಿ ಭಾರತದ ಕೌಶಲ್ ಧರ್ಮಮರ್, ಇಂಡೋನೇಷ್ಯಾದ ಕರೊನೊರನ್ನು 18-21, 21-14, 21-11ರಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದರು.