ಧೋನಿ IPL ಭವಿಷ್ಯ; CSK ಮಾಲೀಕ ಬಿಚ್ಚಿಟ್ಟ ಸೀಕ್ರೆಟ್!

By Web Desk  |  First Published Sep 16, 2019, 3:13 PM IST

ಟೀಂ ಇಂಡಿಯಾಗೆ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತು ಬಲವಾಗಿ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಐಪಿಎಲ್ ಟೂರ್ನಿ ಭವಿಷ್ಯ ಹೊರಬಿದ್ದಿದೆ. CSK ಫ್ರಾಂಚೈಸಿ , ಧೋನಿ ಕರಿಯರ್ ಕುರಿತು ಸೀಕ್ರೆಟ್ ಬಹಿರಂಗ ಪಡಿಸಿದೆ.


ಚೆನ್ನೈ(ಸೆ.16): ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ನಡೆಯುತ್ತಿರುವ ಸೌತ್ ಆಫ್ರಿಕಾ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಆದರೆ ಧೋನಿ ನಿವೃತ್ತಿ ಹೇಳಲಿದ್ದಾರೆ. ಸುದ್ದಿಗೋಷ್ಠಿ ಮೂಲಕ ವಿದಾಯ ಹೇಳಲಿದ್ದಾರೆ ಅನ್ನೋ ಮಾಹಿತಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ನಿವೃತ್ತಿ ಮಾತಿನ ಬೆನ್ನಲ್ಲೇ ಐಪಿಎಲ್ ಟೂರ್ನಿಯಲ್ಲಿನ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ, ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಇದೀಗ ಧೋನಿ ಐಪಿಎಲ್ ಕರಿಯರ್ ಕುರಿತು ಮೌನ ಮುರಿದಿದ್ದಾರೆ.

ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿ ಬರೀ ಹೆಸರಲ್ಲ...!

Tap to resize

Latest Videos

undefined

ಎಂ.ಎಸ್.ಧೋನಿ ಟೀಂ ಇಂಡಿಯಾ ಕರಿಯರ್ ಸಾಕಷ್ಟು ಬಾಕಿ ಇದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ ಸೇವೆ ಮುಂದುವರಿಯಲಿದೆ. ನಾಯಕನಾಗಿ ಮುಂದಿನ ಐಪಿಎಲ್ ಆವೃತ್ತಿಗಳಲ್ಲಿ ಧೋನಿ ಆಡಲಿದ್ದಾರೆ ಎಂದು ಶ್ರೀನಿವಾಸನ್ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

ಬೆಟ್ಟಿಂಗ್ ಆರೋಪದಿಂದ 2 ವರ್ಷ ನಿಷೇಧ ಅನುಭವಿಸಿದ ಚೆನ್ನೈ ಸೂಪರ್ ಕಿಂಗ್ಸ್, 2018ರಲ್ಲಿ ಐಪಿಎಲ್ ಟೂರ್ನಿಗೆ ಕಮ್‌ಬ್ಯಾಕ್ ಮಾಡಿತ್ತು. ಧೋನಿ ನಾಯಕತ್ವದ ಸಿಎಸ್‌ಕೆ ಚಾಂಪಿಯನ್ ಆಗಿ ಮೆರೆದಾಡಿತ್ತು. 2019ರಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ. ಕಳೆದ 12 ಆವೃತ್ತಿಗಳಲ್ಲಿ ಚೆನ್ನೈ ತಂಡ 8 ಬಾರಿ ಫೈನಲ್ ಪ್ರವೇಶಿಸಿದೆ. ಈ ಮೂಲಕ ಗರಿಷ್ಠ ಬಾರಿ ಪ್ರಶಸ್ತಿ ಸುತ್ತಿನ ಹೋರಾಟ ಪ್ರವೇಶಿಸಿದ ತಂಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

click me!