
ಕೋಲ್ಕತಾ(ಸೆ.10): ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಅರೆಸ್ಟ್ ವಾರೆಂಟ್ ಪಡೆದಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಅಮೇರಿಕಾದಲ್ಲಿರುವ ಶಮಿ ಬಂಧನಕ್ಕೆ 2 ತಿಂಗಳು ಬ್ರೇಕ್ ಹಾಕಲಾಗಿದೆ. ಶಮಿ ವಕೀಲರ ಸತತ ಹೋರಾಟದಿಂದ ಇದೀಗ ಅಲಿಪೋರ್ ನ್ಯಾಯಾಲಯ ಶಮಿ ಬಂಧನಕ್ಕೆ 2 ತಿಂಗಳ ತಡೆಯೊಡ್ಡಿದೆ.
ಇದನ್ನೂ ಓದಿ: ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿ ಶಮಿ; ಸೆ.12ಕ್ಕೆ ತವರಿಗೆ!
ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದ ಮೊಹಮ್ಮದ್ ಶಮಿಗೆ ಅಲಿಪೋರ್ ನ್ಯಾಯಾಲಯವೇ 15 ದಿನದೊಳಗೆ ಶರಣಾಗುವಂತೆ ವಿಂಡೀಸ್ ಪ್ರವಾಸದಲ್ಲಿದ್ದ ಶಮಿಗೆ ಆದೇಶಿಸಿತ್ತು. ಆದರೆ ಜಿಲ್ಲಾ ನ್ಯಾಯಮೂರ್ತಿ ಜಸ್ಟಿಸ್ ರಾಯ್ ಚಟ್ಟೋಪಧ್ಯಾಯ್ ಶಮಿ ಬಂಧನಕ್ಕೆ ತಡೆಯೊಡ್ಡಿದ್ದು, ನ.2ಕ್ಕೆ ನ್ಯಾಯಾಲಯ ಹೆಚ್ಚುವರಿ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: "ಅಸರಾಂ, ರಾಮ್ ರಹೀಮ್‌ರನ್ನೇ ಕಾನೂನು ಬಿಡಲಿಲ್ಲ, ಶಮಿ ಯಾವ ಲೆಕ್ಕ"?
ಶಮಿ ವಿರುದ್ಧ ಪತ್ನಿ ಹಸಿನ್ ಜಹಾನ್ ಕೌಟುಂಬಿಕ ಹಿಂಸಾಚಾರ ದೂರು ದಾಖಲಿಸಿದ್ದರು. ಕಳೆದೊಂದು ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿರುವ ಹಸಿನ್ ಜಹಾನ್, ಶಮಿಗೆ ಬಂಧನ ವಾರೆಂಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಅಸರಾಂ ಬಾಪು, ರಾಮ್ ರಹೀಮ್ ಅವರೇ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಶಮಿ ಯಾವ ಲೆಕ್ಕ ಎಂದು ಪ್ರತಿಕ್ರಿಯೆ ನೀಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.