ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!

By Web DeskFirst Published Sep 9, 2019, 10:13 PM IST
Highlights

ಕಾಡಿ ಬೇಡಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಒಪ್ಪಿಸಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಯೋಜನೆಗೆ ಮುಂದಾಗಿದ್ದ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗಿದೆ. ನರಕಕ್ಕೆ ಪ್ರವಾಸ ಮಾಡಲು ಶ್ರೀಲಂಕಾ ಕ್ರಿಕೆಟಿಗರು ನಿರಾಕರಿಸಿದ್ದಾರೆ. 

ಕೊಲೊಂಬೊ(ಸೆ.09):  ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ಆಯೋಜನೆಗೆ ಭರದ ಸಿದ್ಧತೆ ಮಾಡಿಕೊಂಡಿರುವ ಪಾಕ್ ಕ್ರಿಕೆಟ್ ಮಂಡಳಿಗೆ ಭಾರಿ ಹಿನ್ನಡೆಯಾಗಿದೆ. ಸೆಪ್ಟೆಂಬರ್ 27 ರಿಂದ ಆರಂಭಗೊಳ್ಳಲಿರುವ ಸರಣಿಗಾಗಿ ಪಾಕಿಸ್ತಾನ ಎದುರುನೋಡುತ್ತಿತ್ತು. ಆದರೆ ಶ್ರೀಲಂಕಾ ಟಿ20 ನಾಯಕ ಲಸಿತ್ ಮಾಲಿಂಗ, ಹಿರಿಯ ಆಲ್ರೌಂಡರ್ ಎಂಜಲೋ ಮ್ಯಾಥ್ಯೂಸ್ ಸೇರಿದಂತೆ 10 ಕ್ರಿಕೆಟಿಗರು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ: ಮಾಲಿಂಗ ವಿದಾಯದ ಬೆನ್ನಲ್ಲೇ ಜ್ಯೂನಿಯರ್ ಮಾಲಿಂಗ ಪ್ರತ್ಯಕ್ಷ!

ಸೆಪ್ಟೆಂಬರ್ 27 ರಿಂದ ಆಕ್ಟೋಬರ್ 9 ರವರೆಗೆ ಪಾಕಿಸ್ತಾನದಲ್ಲಿ 3 ಏಕದಿನ ಹಾಗೂ 3 ಟಿ20 ಸರಣಿ ಆಯೋಜಿಸಲಾಗಿದೆ. ಕಳೆದ 6 ತಿಂಗಳಿಂದ ಲಂಕಾ ಕ್ರಿಕೆಟ್ ಮಂಡಳಿಯನ್ನು ಕಾಡಿ ಬೇಡಿ ಒಪ್ಪಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಟೂರ್ನಿ ಆರಂಭಕ್ಕೆ 18 ದಿನ ಬಾಕಿ ಇರುವಾದಲೇ ಆಘಾತವಾಗಿದೆ. 

ಮಾಲಿಂಗ, ಮ್ಯಾಥ್ಯೂಸ್ ಜೊತೆ ನಿರೋಶನ್ ಡಿಕ್‌ವೆಲ್ಲಾ, ಕುಸಾಲ್ ಪರೇರಾ, ಧನಂಜಯ್ ಡಿ ಸಿಲ್ವಾ, ಅಕಿಲ ದನಂಜಯ, ಸುರಂಗಾ ಲಕ್ಮಾಲ್, ದಿನೇಶ್ ಚಾಂಡಿಮಾಲ್ ಹಾಗೂ ದಿಮುತ್ ಕರುಣಾರತ್ನೆ  ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದಾರೆ. ಪಾಕ್ ಪ್ರವಾಸ ಹಾಗೂ ಭದ್ರತೆ ಕುರಿತು ಲಂಕಾ ಕ್ರಿಕೆಟಿಗರಿಗೆ ವಿವರಿಸಲಾಗಿದೆ. ಪ್ರವಾಸ ಕೈಗೊಳ್ಳೋ ಆಯ್ಕೆಯನ್ನು ಆಟಗಾರರಿಗೆ ಬಿಡಲಾಗಿತ್ತು. ಈ ಆಯ್ಕೆಯಲ್ಲಿ 10 ಕ್ರಿಕೆಟಿಗರು ನಿರಾಕರಿಸಿದರೆ, ಬ್ಯಾಟ್ಸ‌ಮನ್ ದನುಷ್ಕಾ ಗುಣತಿಲಕ ಪ್ರವಾಸ ಮಾಡೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: 2025ರಲ್ಲಿ ಕೊಹ್ಲಿ ಪಾಕ್ ತಂಡದ ಆರಂಭಿಕ; ನೆಟ್ಟಿಗರ ಅತಿರೇಕಕ್ಕೆ ಆಕ್ರೋಶ!

2009ರಲ್ಲಿ ಪಾಕಿಸ್ತಾನ ಪ್ರವಾಸ ಮಾಡಿದ್ದ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಲಂಕಾದ ಹಲವು ಕ್ರಿಕೆಟಿಗರು ಗಾಯಗೊಂಡಿದ್ದರು. ಈ ಘಟನೆ ಬಳಿಕ ಶ್ರೀಲಂಕಾ ಮಾತ್ರವಲ್ಲ ಇತರ ಯಾವುದೇ ತಂಡ ಕೂಡ ಪಾಕಿಸ್ತಾನ ಪ್ರವಾಸ ನಿರಾಕರಿಸಿತ್ತು. 2015ರಲ್ಲಿ ಜಿಂಬಾಬ್ವೆ ಹಾಗೂ 2017ರಲ್ಲಿ ಟಿ20 ಸರಣಿಗಾಗಿ ಶ್ರೀಲಂಕಾ ತಂಡ ಪಾಕ್ ಪ್ರವಾಸ ಮಾಡಿತ್ತು. ಇದೀಗ ಮತ್ತೆ ಪಾಕ್ ತೆರಳಲು ಲಂಕಾ ನಿರಾಕರಿಸಿದೆ. ಹೀಗಾಗಿ ಸೆಪ್ಟೆಂಬರ್ 27 ರಿಂದ ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಸರಣಿ ಆಯೋಜನೆಯಾಗುವುದೇ ಅನುಮಾನವಾಗಿದೆ.

click me!