10 ಮಂದಿ ಕ್ಲೀನ್ ಬೋಲ್ಡ್, 4 ರನ್ನಿಗೆ ತಂಡ ಆಲೌಟ್- ಕ್ರಿಕೆಟ್ ಇತಿಹಾಸದಲ್ಲೇ ಮೊದಲು!

By Web DeskFirst Published May 16, 2019, 12:46 PM IST
Highlights

ಕ್ರಿಕೆಟ್ ಇತಿಹಾಸದಲ್ಲೇ ಅಪರೂದ ಘಟನೆ ನಡೆದಿದೆ. 10 ಆಟಗಾರರ ಶೂನ್ಯಕ್ಕೆ ಔಟಾಗೋ ಮೂಲಕ ತಂಡ ಕೇವಲ 4 ರನ್ನಿಗೆ ಆಲೌಟ್ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಈ ಪಂದ್ಯ ಯಾವುದು? ಇಲ್ಲಿದೆ ಹೆಚ್ಚಿನ ವಿವರ.

ಕೊಚ್ಚಿ(ಮೇ.16): ಒಬ್ಬರಲ್ಲ, ಇಬ್ಬರಲ್ಲ ತಂಡದ ಎಲ್ಲಾ ಆಟಗಾರ್ತಿಯರೂ ಶೂನ್ಯಕ್ಕೆ ಔಟ್. ಅದೂ ಕೂಡ ಕ್ಲೀನ್ ಬೋಲ್ಡ್. ತಂಡ ಕೇವಲ 4 ರನ್ನಿಗೆ ಆಲೌಟ್. ಇದು ಮಲಪ್ಪುರಂನಲ್ಲಿ ನಡೆದ ಅಂತರ್ ಜಿಲ್ಲಾ ಅಂಡರ್ 19 ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಕಾಸರಗೋಡು ತಂಡದ ಪರಿಸ್ಥಿತಿ. 10 ಆಟಗಾರರೂ ಶೂನ್ಯಕ್ಕೆ ಔಟಾಗಿರೋದು ಕ್ರಿಕೆಟ್ ಇತಿಹಾಸದಲ್ಲೇ ಮೊದಲು.

ಇದನ್ನೂ ಓದಿ: ಫಿಟ್ನೆಸ್‌ಗಾಗಿ ಯೋಗದ ಮೊರೆ ಹೋದ ಕ್ರಿಸ್ ಗೇಲ್!

ವಯನಾಡ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಾಸರಗೋಡು ರನ್ ಖಾತೆ ತೆರೆಯದೆ. ಆಲೌಟ್ ಆಗಿದೆ. ಎಲ್ಲಾ ಆಟಗಾರ್ತಿಯರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ಎಲ್ಲರೂ ಶೂನ್ಯಕ್ಕೆ ಔಟಾಗಿದ್ದಾರೆ. 11ನೇ ಆಟಗಾರ್ತಿ ಯಾವುದೇ ರನ್ ಸಿಡಿಸಿದೇ ಅಜೇಯರಾಗಿದ್ದಾರೆ. ವೈಡ್ ಎಸೆತದಲ್ಲಿ ಕಾಸರಗೋಡು 4ರನ್ ಸಂಪಾದಿಸಿದೆ. 

ಇದನ್ನೂ ಓದಿ: ಪಂತ್ ಬದಲು ದಿನೇಶ್ ಕಾರ್ತಿಕ್- ವಿಶ್ವಕಪ್ ಆಯ್ಕೆ ಸೀಕ್ರೆಟ್ ಬಿಚ್ಚಿಟ್ಟ ಕೊಹ್ಲಿ!

5 ರನ್ ಟಾರ್ಗೆಟ್ ಪಡೆದ ವಯನಾಡ್ ತಂಡ ಒಂದೇ ಓವರ್‌ನಲ್ಲಿ ಟಾರ್ಗೆಟ್ ಚೇಸ್ ಮಾಡಿದೆ. 10 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ವಯನಾಡ್ ತಂಡ ಇತಿಹಾಸ ನಿರ್ಮಿಸಿದೆ. ಆದರೆ ಕಾಸರಗೋಡು ತಂಡ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಜಿಲ್ಲಾ ಮಟ್ಟದ ಕ್ರಿಕೆಟ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

click me!