ಬಂಡಾಯ ಕಬಡ್ಡಿ ಲೀಗ್: ಪುಣೆ ವಿರುದ್ಧ ಮುಗ್ಗರಿಸಿದ ಬೆಂಗಳೂರು!

IIPKL ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಬೆಂಗಳೂರು ರೈನೋಸ್ ದ್ವಿತೀಯ ಪಂದ್ಯದಲ್ಲಿ ಮುಗ್ಗರಿಸಿದೆ. ಪುಣೆ ವಿರುದ್ಧ ಅಂತಿಮ ಹಂತದಲ್ಲಿ ಅಂಕಗಳನ್ನು ಬಿಟ್ಟುಕೊಟ್ಟು ಸೋಲು ಕಂಡಿದೆ.


ಪುಣೆ(ಮೇ.16): ಲೀಗ್‌ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಬೆಂಗಳೂರು ರೈನೋಸ್ ತಂಡ, ೨ನೇ ಪಂದ್ಯದಲ್ಲಿ ಆತಿಥೇಯ ಪುಣೆ ಪ್ರೈಡ್ ವಿರುದ್ಧ ಸೋಲುಂಡಿದೆ. ಬುಧವಾರ ಇಲ್ಲಿನ ಬಾಲೆವಾಡಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ೨ನೇ ಪಂದ್ಯದಲ್ಲಿ ಬೆಂಗಳೂರು ತಂಡ 29-32 ರಿಂದ ಪರಾಭವ ಹೊಂದಿತು. ಎರಡೂ ತಂಡಗಳ ಆಟಗಾರರು ಪಂದ್ಯದುದ್ದಕ್ಕೂ ಜಿದ್ದಾಜಿದ್ದಿನ ಹೋರಾಟ ನಡೆಸಿದರು. 

ಇದನ್ನೂ ಓದಿ: ನಮ್ಮೂರ ಹುಡುಗರು: ಕಬಡ್ಡಿಯಲ್ಲಿ ತಿರಂಗಾ ಎತ್ತಿ ಹಿಡಿದರು!

Latest Videos

ಜಯಕ್ಕಾಗಿ ತೀವ್ರ ಕಾದಾಟ ಕಂಡು ಬಂದ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ 12-1 ರಿಂದ ಮುನ್ನಡೆ ಸಾಧಿಸಿದ ಬೆಂಗಳೂರು, ನಂತರದ 3 ಕ್ವಾರ್ಟರ್‌ನಲ್ಲಿ ಪುಣೆ ವಿರುದ್ಧ ಹಿನ್ನಡೆ ಅನುಭವಿಸಿತು. ಇದರ ಪರಿಣಾಮವಾಗಿ ಬೆಂಗಳೂರು ಸೋಲುಂಡಿತು. 

ಪಾಂಡಿಚೇರಿಗೆ ಜಯ: ಸೋಲಿನ ರುಚಿ ಕಂಡಿದ್ದ ಪಾಂಡಿಚೇರಿ ಪ್ರೇಡಟರ್ಸ್, ಬುಧವಾರದ ಪಂದ್ಯದಲ್ಲಿಹರ್ಯಾಣ ಹೀರೋಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತು. ಇಲ್ಲಿ ನಡೆಯುತ್ತಿರುವ ಮೊದಲ ಆವೃತ್ತಿಯ ಇಂಡೋ ಇಂಟರ್ ನ್ಯಾಷನಲ್ ಕಬಡ್ಡಿ  5ನೇ ಪಂದ್ಯದಲ್ಲಿ ಪಾಂಡಿಚೇರಿ ಪ್ರೇಡಟರ್ಸ್, ಹರ್ಯಾಣ ಹೀರೋಸ್ ವಿರುದ್ಧ 52-38 ಅಂಕಗಳಿಂದ ಜಯ ಸಾಧಿಸಿತು. ಮೊದಲ ಕ್ವಾರ್ಟರ್‌ನಲ್ಲಿ 12-6 ರಿಂದ ಮುನ್ನಡೆ ಸಾಧಿಸಿದ ಪಾಂಡಿಚೇರಿ ಈ ಅಂತರವನ್ನು ಕೊನೆಯ ಕ್ವಾರ್ಟರ್ ವರೆಗೂ ಕಾಯ್ದುಕೊಂಡಿತು.

ಇದನ್ನೂ ಓದಿ:ಬಂಡಾಯ ಕಬಡ್ಡಿ ಲೀಗ್- ಹರ್ಯಾಣ ವಿರುದ್ಧ ಪುಣೆಗೆ ಜಯ!

ಪಾಂಡಿಚೇರಿ ಆಟಗಾರರ ರೈಡಿಂಗ್ ಮತ್ತು ಡಿಫೆನ್ಸ್‌ಗೆ ಬೆದರಿದ ಹರ್ಯಾಣ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿತು. ಕೊನೆಯ 2 ಕ್ವಾರ್ಟರ್‌ನಲ್ಲಿ ಹರ್ಯಾಣ ಆಟಗಾರರು ಜಯಕ್ಕಾಗಿ ತೀವ್ರ ಸರ್ಕಸ್ ನಡೆಸಿದರು.  ಆದರೆ ಗೆಲುವು  ಸಿಗಲಿಲ್ಲ.

click me!