ಅಖಿಲ ಭಾರತ ಹಾಕಿ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ: ನಿಕ್ಕಿನ್ ತಿಮ್ಮಯ್ಯ ನಾಯಕ!

By Web DeskFirst Published Aug 9, 2019, 8:49 PM IST
Highlights

ಬೆಂಗಳೂರು ಕಪ್ ಹಾಕಿ ಟೂರ್ನಿಗೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ನಿಕ್ಕಿನ್ ತಿಮ್ಮಯ್ಯ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹಾಕಿ ಕರ್ನಾಟಕ 18 ಸದಸ್ಯರ ತಂಡ ಪ್ರಕಟಿಸಲಾಗಿದೆ. ತಂಡದ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು(ಆ.09): ಅಖಿಲ ಭಾರತ  ಡೋಲೋ - 650 ಬೆಂಗಳೂರು ಕಪ್ ಹಾಕಿ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಬೆಂಗಳೂರಿನಲ್ಲಿ ಆಯೋಜನೆಯಾಗುತ್ತಿರುವ ಪ್ರತಿಷ್ಠಿತ ಟೂರ್ನಿ ಆಗಸ್ಟ್ 10 ರಿಂದ ಆರಂಭಗೊಳ್ಳಲಿದೆ. ಹಾಕಿ ಕರ್ನಾಟಕ ಸೇರಿದಂತೆ ಭಾರತದ ಪ್ರಮುಖ 8 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಇದೀಗ 18 ಸದಸ್ಯರ ಹಾಕಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಕಪ್; ಅಖಿಲ ಭಾರತ ಹಾಕಿ ಟೂರ್ನಿಗೆ ಕೌಂಟ್‌ಡೌನ್!

ಕೊಡಗಿನ ವೀರ ನಿಕ್ಕಿನ್ ತಿಮ್ಮಯ್ಯ ಹಾಕಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಗೋಲ್‌ಕೀಪರ್ ಜಗದೀಪ್ ದಯಾಲ್, ಹಾಕಿ ಇಂಡಿಯಾ ಕ್ಯಾಂಪ್ ಸೇರಿಕೊಂಡಿದ್ದಾರೆ. ಹೀಗಾಗಿ ಎಸಿ ಸುಬ್ರಮನಿ ಗೋಲ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಡಿಫೆಂಡರ್‌ಗಳಾಗಿ ಸಿಎ ಪೊನ್ನಣ್ಣ, ದೀಕ್ಷಿತ್ ಎಸ್‌ಪಿ, ಅಭಿಷೇಕ್ ಹೆಚ್ಎಸ್, ವೀರಣ್ಣ ಗೌಡ ಆಯ್ಕೆಯಾಗಿದ್ದಾರೆ.

ಮಿಡ್ ಫೀಲ್ಡರ್‌ಗಳಾಗಿ ಪ್ರಧಾನ್ ಸೋಮ್ಮಣ್ಣ, ಕೆಆರ್ ಭರತ್, ಪುನೀತ್ ಆರ್, ಕೆಪಿ ಸೊಮಯ್ಯ ಹಾಗೂ ಅಚ್ಚಯ್ಯ ಡಿಎಮ್ ಆಯ್ಕೆಯಾಗಿದ್ದಾರೆ. ಫಾರ್ವಡ್ ಆಟಗಾರರಾಗಿ, ನಾಯಕ ನಿಕ್ಕಿನ್ ತಿಮ್ಮಯ್ಯ, ಮೋಕ್ಷಿತ್ ಉತ್ತಪ್ಪ, ಹರೀಶ್ ಮತ್ಗರ್, ಪವನ್ ಮಡಿವಾಳರ್, ಪೃಥ್ವಿ ರಾಜ್, ರಾಜೇಂದ್ರ ಹಾಗೂ ಮಂಜೀತ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ:  ಭಾರತ ಹಾಕಿ ತಂಡಕ್ಕೆ ಕನ್ನಡಿಗ ಸುನಿಲ್‌ ವಾಪಸ್‌

ಅಂತಾರಾಷ್ಟ್ರೀಯ ಮಾಜಿ ಹಾಕಿ ಪಟು ಕೆಕೆ ಪೂನಚ ಹಾಕಿ ಕರ್ನಾಟಕ ತಂಡದ ಕೋಚ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಓಮನ್ ರಾಷ್ಟ್ರೀಯ ಹಾಕಿ ತಂಡ ಮಾಜಿ ಕೋಚ್ ಪಿಎ ಅಯ್ಯಪ್ಪ, ತಂಡದ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ. 

click me!