
ಕೊಲೊಂಬೊ(ಆ.09): ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ಗೆ ವಿಶ್ವದೆಲ್ಲಡೆ ಅಭಿಮಾನಿಗಳಿದ್ದಾರೆ. ಫ್ಯಾನ್ಸ್‌ನಿಂದ ಅತೀ ಹೆಚ್ಚು ಗೌರವ ಸಂಪಾದಿಸಿರುವ ಹಾಲಿ ಕ್ರಿಕೆಟಿಗರ ಪೈಕಿ ವಿಲಿಯಮ್ಸನ್‌ಗೆ ಮೊದಲ ಸ್ಥಾನ. ಆನ್ ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್‌ನಲ್ಲಿ ವಿಲಿಯಮ್ಸನ್ ಜಂಟ್ಲಮೆನ್. ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಅಭ್ಯಾಸ ಪಂದ್ಯ ನಡುವೆ ವಿಲಿಯಮ್ಸನ್ ಲಂಕಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಇದನ್ನೂ ಓದಿ: ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!
ಅಭ್ಯಾಸ ಪಂದ್ಯ ಆಡುತ್ತಿದ್ದ ವೇಳೆ ಲಂಕಾ ಅಭಿಮಾನಿಗಳು ಕೇಕ್ ಜೊತೆಗೆ ಆಗಮಿಸಿದ್ದರು. ಕಾರಣ ಆಗಸ್ಟ್ 8 ವಿಲಿಯಮ್ಸನ್ ಹುಟ್ಟಹಬ್ಬದ ದಿನ. ಹೀಗಾಗಿ ಫೀಲ್ಡಿಂಗ್ ಮಾಡುತ್ತಿದ್ದ ವಿಲಿಯಮ್ಸನ್‌ಗೆ ಕೇಕ್ ಕತ್ತರಿಸುವಂತೆ ಕೂಗಿ ಹೇಳಿದ್ದಾರೆ. ಅಭಿಮಾನಿಗಳ ಕೂಗಿ ಕೇಳಿಸಿದ ತಕ್ಷಣ ವಿಲಿಯಮ್ಸನ್ ಪ್ರೇಕ್ಷಕರ ಗ್ಯಾಲರಿಯತ್ತ ವಿಲಿಯಮ್ಸನ್ ಓಡೋಡಿ ಬಂದು, ಕೇಕ್ ಕತ್ತರಿಸಿದರು. ಅಭಿಮಾನಿಗಳ ಜೊತೆ ತಮ್ಮ 29ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಲಂಕಾ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡ ವಿಲಿಯಮ್ಸನ್ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳ ಜೊತೆಗಿನ ಹುಟ್ಟು ಹಬ್ಬ ಆಚರಣೆಗೆ ಹರ್ಭಜನ್ ಸಿಂಗ್, ಶಿಖರ್ ಧವನ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಸಲಾಂ ಹೇಳಿದ್ದಾರೆ. ಆಗಸ್ಟ್ 14ರಿಂದ ಶ್ರೀಲಂಕಾ- ನ್ಯೂಜಿಲೆಂಡ್ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.