ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಸ್ಪಿನ್ ದಿಗ್ಗಜ ಶೇನ್ ವಾರ್ನ್ ಇದೀಗ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸಿರುವ ವಾರ್ನ್ ಇದೀಗ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.
ಲಾರ್ಡ್ಸ್(ಆ.09): ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇದೀಗ ಕೋಚ್ ಆಗಿ ನೇಮಕಗೊಂಡಿದ್ದಾರೆ. ಲಾರ್ಡ್ಸ್ ಮೂಲದ ದಿ ಹಂಡ್ರೆಡ್ ತಂಡದ ಕೋಚ್ ಆಗಿ ವಾರ್ನ್‌ಗೆ ಆಯ್ಕೆಯಾಗಿದ್ದಾರೆ. ಟೂರ್ನಿಯಲ್ಲಿ ದಿ ಹಂಡ್ರೆಡ್, ಮಿಡ್ಲ್‌ಸೆಕ್ಸ್, ಎಸೆಕ್ಸ್ ಹಾಗೂ ನಾರ್ಥಾಂಪ್ಟನ್‌ಶೈರ್ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಈ ಟೂರ್ನಿಯಲ್ಲಿ ವಾರ್ನ್, ದಿ ಹಂಡ್ರೆಡ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ನಾಯಕನಿಂದ 1.4 ಕೋಟಿ ಆಮಿಷ - ಶೇನ್ ವಾರ್ನ್ ಗಂಭೀರ ಆರೋಪ!
ಕೋಚ್ ಆಗಿ ನೇಮಕವಾಗಿರುವುದು ಸಂತಸ ತಂದಿದೆ. ಕೋಚ್ ಆಗಿ ಸವಾಲು ಸ್ವೀಕರಿಸಲು ಸಜ್ಜಾಗಿದ್ದೇನೆ. ಮಹತ್ವದ ಟೂರ್ನಿಯನ್ನು ಎದುರುನೋಡುತ್ತಿದ್ದೇನೆ ಎಂದು ವಾರ್ನ್ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸಿರುವ ವಾರ್ನ್, ಇದೀಗ ಹೆಡ್ ಕೋಚ್ ಆಗಿ ಲಾರ್ಡ್ಸ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಇದನ್ನೂ ಓದಿ: ಐಪಿಎಲ್ ಬಗೆಗಿನ ಗಾಳಿಸುದ್ದಿಗೆ ತೆರೆಯೆಳೆದ ವಾರ್ನ್..!
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಕೌಂಟಿ ಮಟ್ಟದ ಟೂರ್ನಿಯಲ್ಲಿ ವಿಶ್ವಕಪ್ ಟೂರ್ನಿಯ ಸ್ಟಾರ್ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ.