ತಮಿ​ಳುನಾಡು ಕ್ರಿಕೆಟ್‌ಗೆ ಶ್ರೀನಿ ಪುತ್ರಿ ಅಧ್ಯಕ್ಷೆ?

By Kannadaprabha News  |  First Published Sep 22, 2019, 4:09 PM IST

ಐಪಿಎಲ್ ಬೆಟ್ಟಿಂಗ್‌ ಪ್ರಕರಣದ ರೂವಾರಿ ಗುರುನಾಥನ್‌ ಮೇಯಪ್ಪನ್‌ ಪತ್ನಿ ರೂಪಾ ಗುರುನಾಥ್‌ ಇದೀಗ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ಚೆನ್ನೈ[ಸೆ.22]: ತಮಿಳುನಾಡು ಕ್ರಿಕೆಟ್‌ ಸಂಸ್ಥೆ (ಟಿಎನ್‌ಸಿಎ) ಚುನಾವಣೆಗೆ ಸುಪ್ರೀಂ ಕೋರ್ಟ್‌ ಆದೇಶ ಅನುವು ಮಾಡಿದ್ದು, ಸಂಸ್ಥೆಯಲ್ಲಿ ಎನ್‌.ಶ್ರೀನಿವಾಸನ್‌ ಪ್ರಭಾವ ಮುಂದುವರಿಯುವ ನಿರೀಕ್ಷೆಯಿದೆ.

ಧೋನಿ IPL ಭವಿಷ್ಯ; CSK ಮಾಲೀಕ ಬಿಚ್ಚಿಟ್ಟ ಸೀಕ್ರೆಟ್!

Tap to resize

Latest Videos

undefined

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಇಂಡಿಯಾ ಸಿಮೆಂಟ್ಸ್‌ ಮಾಲಿಕ ಎನ್‌.ಶ್ರೀನಿವಾಸ್‌ ಪುತ್ರಿ ಹಾಗೂ ಬೆಟ್ಟಿಂಗ್‌ ಪ್ರಕರಣದ ರೂವಾರಿ ಗುರುನಾಥನ್‌ ಮೇಯಪ್ಪನ್‌ ಪತ್ನಿ ರೂಪಾ ಗುರುನಾಥ್‌ ಅವರನ್ನೇ ನೂತನ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡ​ಬೇಕು ಎಂದು ಸಂಸ್ಥೆ ಪ್ರತಿ​ನಿ​ಧಿ​ಗಳು ಬಯ​ಸಿ​ದ್ದಾರೆ. ಅವ​ರಿಗೆ ಪ್ರತಿ​ಸ್ಪರ್ಧಿಯೇ ಇಲ್ಲದ ಕಾರಣ, ಸೋಮ​ವಾರ ಅವ​ರನ್ನು ಅಧ್ಯಕ್ಷೆಯನ್ನಾಗಿ ಘೋಷಿ​ಸುವ ಸಾಧ್ಯತೆ ಇದೆ. 

CSK ಬಳಿಕ ತಮಿಳುನಾಡುಗೆ ಮತ್ತೊಂದು ಕಳಂಕ; ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌?

ಒಂದೊಮ್ಮೆ ರೂಪ ಅಧ್ಯಕ್ಷ ಗಾದಿ​ಗೇ​ರಿ​ದರೆ, ಬಿಸಿ​ಸಿ​ಐನಿಂದ ಮಾನ್ಯತೆ ಹೊಂದಿ​ರುವ ರಾಜ್ಯ ಕ್ರಿಕೆಟ್‌ ಸಂಸ್ಥೆಯೊಂದರ ಮುಖ್ಯಸ್ಥರಾದ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಪಾತ್ರ​ರಾ​ಗ​ಲಿ​ದ್ದಾರೆ.

click me!