KPL ಫಿಕ್ಸಿಂಗ್; ನಾಲ್ವರು ಕ್ರಿಕೆಟಿಗರಿಗೆ CCB ಸಮನ್ಸ್!

By Web DeskFirst Published Sep 22, 2019, 3:56 PM IST
Highlights

ಪ್ರಿಮಿಯರ್ ಲೀಗ್ ಟೂರ್ನಿಗಳಲ್ಲಿ ಕರ್ನಾಟಕ ಇತರ ಎಲ್ಲಾ ರಾಜ್ಯಗಳಿಗಿಂತ ಅಗ್ರಸ್ಥಾನದಲ್ಲಿದೆ. ಆದರೆ ಇದೀಗ ಕರ್ನಾಟಕ ಲೀಗ್ ಟೂರ್ನಿ ಮೇಲೆ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಹೀಗಾಗಿ ಕೆಪಿಎಲ್ ಟೂರ್ನಿಯ ನಾಲ್ವರು ಕ್ರಿಕೆಟಿಗರಿಗೆ ಸಮನ್ಸ್ ನೀಡಲಾಗಿದೆ.

ಬೆಂಗಳೂರು(ಸೆ.22): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ಮ್ಯಾಚ್ ಫಿಕ್ಸಿಂಗ್ ಭೂತ ಅಂಟಿಕೊಂಡಿದೆ.  ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಬುಕ್ಕಿಗಳ ಜೊತೆ ಸೇರಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ನಾಲ್ವರು KPL ಕ್ರಿಕೆಟಿಗರಿಗೆ ಸಮನ್ಸ್ ನೀಡಲಾಗಿದೆ.

ಇದನ್ನೂ ಓದಿ: KPLಗೂ ಅಂಟಿದ ಮ್ಯಾಚ್ ಫಿಕ್ಸಿಂಗ್ ಭೂತ..? ಪ್ರಾಂಚೈಸಿ ಮಾಲೀಕ ವಶಕ್ಕೆ..!

ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅಸ್ಫಾಕ್ ತರ ಬುಕ್ಕಿಗಳ ಜೊತೆ ಸೇರಿ ಪಂದ್ಯ ಫಿಕ್ಸ್ ಮಾಡಿದ್ದಾನೆ. ಮಾಲೀಕನ ಜೊತೆ ಕೆಲ ಕ್ರಿಕೆಟಿಗರು ಕೂಡ ಶಾಮೀಲಾಗಿದ್ದಾರೆ ಅನ್ನೋ ಅಂಶ ತನಿಖೆಯಿಂದ ಬಯಲಾಗಿದೆ. ಈಗಾಗಲೇ ಅಲಿ ಅಸ್ಫಾಕ್ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು, ಇದೀಗ KPL ಟೂರ್ನಿಯ ನಾಲ್ವರು ಕ್ರಿಕೆಟಿಗರಿಗೆ ಸಮನ್ಸ್ ನೀಡಿದೆ. ಆದರೆ ಭದ್ರತೆಯ ದೃಷ್ಟಿಯಿಂದ ನಾಲ್ವರು ಕ್ರಿಕೆಟಿಗರ ಹೆಸರು ಬಹಿರಂಗ ಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಫಿಕ್ಸಿಂಗ್‌: ಪಾಕ್‌ ಮೂಲದ 3 ಅಂತಾರಾಷ್ಟ್ರೀಯ ಕ್ರಿಕೆ​ಟಿ​ಗರು ಬ್ಯಾನ್‌!

ಮ್ಯಾಚ್ ಫಿಕ್ಸಿಂಗ್‌ಗಾಗಿ ಮಾಲೀಕ ಆಲಿ ಇತರ ತಂಡದ ಆಟಗಾರರ ಜೊತೆ ಸಂಪರ್ಕದಲ್ಲಿದ್ದರು. ಹೀಗಾಗಿ ಸಮನ್ಸ್ ನೀಡಲಾಗಿದೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ. ಬಿಸಿಸಿಐ ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಸಹಾಕರ ಬಯುಸುತ್ತಿದ್ದೇವೆ ಎಂದು ಜಂಟಿ ಪೊಲೀಸ್ ಆಯುಕ್ತ(ಕ್ರೈಂ) ಸಂದೀಪ್ ಪಾಟೀಲ್ ಹೇಳಿದ್ದಾರೆ. ಇತ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಂಪೂರ್ಣ ಸಹಕಾರ ನೀಡುವುದಾಗಿ ಸ್ಪಷ್ಟಪಡಿಸಿದೆ.

click me!