ಬೆಂಗಳೂರಿನಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾದ ಕೊಹ್ಲಿ!

By Web Desk  |  First Published Sep 22, 2019, 3:29 PM IST

ಸೌತ್ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಟಿ20 ಮಾದರಿಯಲ್ಲಿ ಯಾರೂ ಮಾಡದ ದಾಖಲೆಗೆ ವಿರಾಟ್ ಪಾತ್ರರಾಗಲಿದ್ದಾರೆ. ಹಾಗಾದರೆ ಕೊಹ್ಲಿ ನಿರ್ಮಿಸಲಿರುವ ವಿನೂತನ ದಾಖಲೆ ಯಾವುದು? ಇಲ್ಲಿದೆ ವಿವರ.


ಬೆಂಗಳೂರು(ಸೆ.22): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸದ್ಯ ಬೆಂಗಳೂರು ತವರು ನೆಲ. ಕೊಹ್ಲಿ ದೆಹಲಿ ಮೂಲದವರಾದರೂ ರಣಜಿ, ವಿಜಯ್ ಹಜಾರೆ ಸೇರಿದಂತೆ ಯಾವುದೇ ದೇಸಿ ಟೂರ್ನಿಗಳಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸುತ್ತಿಲ್ಲ. ಆದರೆ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ಕೊಹ್ಲಿಗೆ ಬೆಂಗಳೂರೇ ಇದೀಗ ಮೊದಲ ತವರು. ಈ ಸ್ಮರಣೀಯ ಮೈದಾನದಲ್ಲಿ ಕೊಹ್ಲಿ ಎರಡು ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಆಟೋಗ್ರಾಫ್‌ಗೆ ಮುಗಿಬಿದ್ದ ಬೆಂಗಳೂರು ಫ್ಯಾನ್ಸ್!

Tap to resize

Latest Videos

undefined

ಭಾರತದ ಹಾಗೂ ಸೌತ್ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದೇ ಕ್ರೀಡಾಂಗಣದಲ್ಲಿ ಬೌಂಡರಿ ಮೂಲಕ 1000 ರನ್ ಪೂರೈಸಲು ಕೊಹ್ಲಿ ತುದಿಗಾಲಲ್ಲಿ ನಿಂತಿದ್ದಾರೆ. ಟಿ20 ಮಾದರಿಯಲ್ಲಿ(ಅಂತಾರಾಷ್ಟ್ರೀಯ ಹಾಗೂ ಐಪಿಎಲ್) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ 249 ಬೌಂಡರಿ ಮೂಲಕ 996 ರನ್ ಸಿಡಿಸಿದ್ದಾರೆ. ಇದೀಗ ಸೌತ್ ಆಫ್ರಿಕಾ ವಿರುದ್ದ 1 ಬೌಂಡರಿ ಸಿಡಿಸಿದರೆ ಒಂದೇ ಮೈದಾನದಲ್ಲಿ ಸಾವಿರ ರನ್ ಪೂರೈಸಿದ ಏಕೈಕ ಕ್ರಿಕೆಟಿಗ ಅನ್ನೋ ದಾಖಲೆ ಬರೆಯಲಿದ್ದಾರೆ.

ಇದನ್ನೂ ಓದಿ: ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಪ್ರಕಟಿಸಿದ ಆಫ್ರಿದಿ; ನಾಲ್ವರಲ್ಲಿ ಒರ್ವ ಭಾರತೀಯನಿಗೆ ಸ್ಥಾನ !

ಬೌಂಡರಿ ದಾಖಲೆ ಜೊತೆಗೆ ಅರ್ಧಶತಕದಲ್ಲೂ ದಾಖಲೆ ಬರಯೆಲಿದ್ದಾರೆ. ಟಿ20 ಮಾದರಿಯಲ್ಲಿ ಒಂದೇ ಮೈದಾನದಲ್ಲಿ ಕೊಹ್ಲಿ ಈಗಾಲೇ 19 ಅರ್ಧಶತಕ ಸಿಡಿಸಿದ್ದಾರೆ. ಇದೀಗ ಹರಿಗಣಗಳ ವಿರುದ್ಧ ಮತ್ತೊಂದು ಹಾಫ್ ಸೆಂಚುರಿ ಸಿಡಿಸಿದರೆ 20 ಅರ್ಧಶತಕ ಸಿಡಿಸಿದ ಸಾಧನೆ ಮಾಡಲಿದ್ದಾರೆ. ಈ ಮೂಲಕ ಒಂದೇ ಮೈದಾನದಲ್ಲಿ 20 ಹಾಫ್ ಸೆಂಚುರಿ ಸಿಡಿಸಿದ ಏಕೈಕ ಟಿ20 ಬ್ಯಾಟ್ಸ್‌ಮನ್ ದಾಖಲೆ ಬರೆಯಲಿದ್ದಾರೆ. 

ಇದನ್ನೂ ಓದಿ: ದ್ರಾವಿಡ್ ಭೇಟಿಯಾದ ಕೊಹ್ಲಿ; ನಿಜವಾದ ದಿಗ್ಗಜರ ಸಮಾಗಮ ಎಂದ ಫ್ಯಾನ್ಸ್! 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(ಟಿ20 ಮಾದರಿಯಲ್ಲಿ) ಗರಿಷ್ಠ ಶತಕ  ಸಿಡಿಸಿದ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಹಾಗೂ ವಿರಾಟ್ ಕೊಹ್ಲಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗೇಲ್ 3 ಶತಕ ಸಿಡಿಸಿದ್ದರೆ, ಕೊಹ್ಲಿ ಕೂಡ 3 ಶತಕ ಸಿಡಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಕೊಹ್ಲಿ ಸೆಂಚುರಿ ಸಿಡಿಸಿದರೆ, ಗೇಲ್ ದಾಖಲೆಯನ್ನು ಮುರಿಯಲಿದ್ದಾರೆ.
 

click me!