ಟೆಸ್ಟ್‌ಗೆ ಸರ್ಫರಾಜ್ ನಾಯಕತ್ವ ಬೇಡವೆಂದ ಅಫ್ರಿದಿ

By Web DeskFirst Published Sep 21, 2019, 12:23 PM IST
Highlights

ಪಾಕಿಸ್ತಾನ ಟೆಸ್ಟ್ ತಂಡದ ನಾಯಕತ್ವದಿಂದ ಸರ್ಫರಾಜ್ ಅಹಮ್ಮದ್ ಕೆಳಗಿಳಿಯುವುದು ಸೂಕ್ತವೆಂದು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕರಾಚಿ[ಸೆ.21]: ಸರ್ಫರಾಜ್ ಅಹಮ್ಮದ್ ಟೆಸ್ಟ್ ನಾಯಕರಾಗುವುದು ಬೇಡ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ. 

ನೆಚ್ಚಿನ ಕ್ರಿಕೆಟಿಗನ ಹೆಸರು ಬಹಿರಂಗ ಪಡಿಸಿದ ಕಾಜಲ್ ಅಗರ್ವಾಲ್!

ಸರ್ಫರಾಜ್ ಟೆಸ್ಟ್ ನಾಯಕರಾಗದೇ ಇದ್ದರೇ ಒಳಿತು. ಮೂರು ಮಾದರಿಯಲ್ಲಿ  ನಾಯಕತ್ವದ ಜವಾಬ್ದಾರಿ  ನಿರ್ವಹಿಸುವುದು ಸರ್ಫರಾಜ್ ಗೆ ಹೊರೆಯಾಗಲಿದೆ. ಸೀಮಿತ ಓವರ್ ಗಳ ಕ್ರಿಕೆಟ್’ನಲ್ಲಿ ಸರ್ಫರಾಜ್ ಯಶಸ್ವಿ ನಾಯಕರಾಗಬಹುದು ಎಂದು ಅಫ್ರಿದಿ ಹೇಳಿದ್ದಾರೆ.ಇನ್ನು ಮತ್ತೋರ್ವ ಪಾಕ್ ಮಾಜಿ ನಾಯಕ ಜಹೀರ್ ಅಬ್ಬಾಸ್, ದೀರ್ಘಾವಧಿ ಮಾದರಿಯಲ್ಲಿ ನಾಯಕನಾಗಿ ಒತ್ತಡ ನಿರ್ವಹಿಸುವುದು ಕಷ್ಟ. ಸರ್ಫರಾಜ್ ಏಕದಿನ, ಟಿ20 ಮೇಲಷ್ಟೇ ಗಮನ ಹರಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ವಿದಾಯದಿಂದ ಹೊರಬಂದ ರಾಯುಡು; ಭಾರತದ ಶಾಹಿದಿ ಆಫ್ರಿದಿ ಎಂದ ಫ್ಯಾನ್ಸ್!

ಸರ್ಫರಾಜ್ ಅಹಮ್ಮದ್ ನೇತೃತ್ವದ ಪಾಕಿಸ್ತಾನ ತಂಡವು 2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು.   


 

click me!