ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಸಾಕಷ್ಟು ಬೆವರು ಹರಿಸುತ್ತಿದೆ. ಈ ವೇಳೆ ರಾಹುಲ್ ದ್ರಾವಿಡ್ ಭೇಟಿ ನೀಡಿ ಆಟಗಾರರಿಗೆ ಕೆಲವೊಂದು ಉಪಯುಕ್ತ ಟಿಪ್ಸ್ ನೀಡಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.21]: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ 7 ವಿಕೆಟ್ಗಳಿಂದ ಗೆದ್ದ ಭಾರತ, ಭಾನುವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಟಿ-20 ಪಂದ್ಯಕ್ಕಾಗಿ ಶುಕ್ರವಾರ ಬೆಳಗಿನಿಂದಲೇ ಕಠಿಣ ಅಭ್ಯಾಸ ನಡೆಸಿತು.
Test team members , and gearing up in the nets at the NCA pic.twitter.com/9myWS0SmUp
— BCCI (@BCCI)When two greats of Indian Cricket meet 🤝 pic.twitter.com/Vj3bAeGr8y
— BCCI (@BCCI)ದೆಹಲಿ ತಂಡ ತೊರೆದ ಮತ್ತೊರ್ವ ಸ್ಟಾರ್ ಕ್ರಿಕೆಟರ್!
undefined
ಈ ವೇಳೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಕ್ರಿಕೆಟ್ ಮುಖ್ಯಸ್ಥ ರಾಹುಲ್ ದ್ರಾವಿಡ್ ಮೈದಾನಕ್ಕೆ ಭೇಟಿ ನೀಡಿ ಭಾರತ ತಂಡದ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರ ಜೊತೆ ಸಮಾಲೋಚನೆ ನಡೆಸಿದರು. ಎರಡೂ ತಂಡಗಳ ಆಟಗಾರರು ಅಭ್ಯಾಸ ನಡೆಸಿದರು. ನಾಯಕ ಕೊಹ್ಲಿ, ಬುಮ್ರಾ, ಶಿಖರ್ ಧವನ್, ಮನೀಶ್ ಪಾಂಡೆ, ರೋಹಿತ್ ಶರ್ಮಾ ಸೇರಿದಂತೆ ಇತರೆ ಆಟಗಾರರು ನೆಟ್ಸ್‌ನಲ್ಲಿ ಬೆವರು ಸುರಿಸಿದರು.
ದಿಗ್ಗಜ ದ್ರಾವಿಡ್ ಜೊತೆ ರವಿ ಶಾಸ್ತ್ರಿ ಹೋಲಿಸಬೇಡಿ; BCCIಗೆ ಅಭಿಮಾನಿಗಳ ಕ್ಲಾಸ್!
3 ಪಂದ್ಯಗಳ ಟಿ20 ಸರಣಿಯಲ್ಲಿ ಧರ್ಮಶಾಲಾದಲ್ಲಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಮೊಹಾಲಿಯಲ್ಲಿ ನಡೆದ 2ನೇ ಪಂದ್ಯ ಗೆದ್ದ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದಿದ್ದು, ಕೊನೆಯ ಪಂದ್ಯವನ್ನು ಗೆದ್ದು, ಸರಣಿ ಗೆಲ್ಲುವ ವಿಶ್ವಾಸದಲ್ಲಿ ಭಾರತ ತಂಡವಿದೆ.