ಭಾರತ-ಸೌತ್ ಆಫ್ರಿಕಾ ಸರಣಿ; ಯಾರು ಮರೆತಿಲ್ಲ 4 ಅತಿ ದೊಡ್ಡ ವಿವಾದ!

By Web DeskFirst Published Sep 13, 2019, 10:16 PM IST
Highlights

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕ್ರಿಕೆಟ್ ಆರಂಭಕ್ಕೆ ಇನ್ನೆರಡು ದಿನ ಬಾಕಿ. ಎಲ್ಲರೂ ಚುಟುಕು ಸರಣಿಗಾಗಿ ಕಾಯುತ್ತಿದ್ದಾರೆ. ಉಭಯ ದೇಶಗಳ ಆಟಗಾರರು ಜೊತೆಯಾಗಿ ಐಪಿಎಲ್ ಟೂರ್ನಿ ಆಡಿ ಹೆಚ್ಚು ಆತ್ಮೀಯರಾಗಿದ್ದಾರೆ.  ಆದರೆ ಈ ಹಿಂದಿನ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿ ಹಲವು ವಿವಾದಕ್ಕೆ ಗುರಿಯಾಗಿದೆ. ಇಂಡೋ-ಆಫ್ರಿಕಾ ಸರಣಿಯಲ್ಲಿನ ಪ್ರಮುಖ  4 ವಿವಾದಗಳು ವಿಶ್ವ ಕ್ರಿಕೆಟನ್ನೇ ಬೆಚ್ಚಿ ಬೀಳಿಸಿವೆ. ಇದಕ್ಕಾಗಿ ಪ್ರತಿಭಟನೆಗಳು ಕೂಡ ನಡೆದಿದೆ. ಇಂತಹ  4 ವಿವಾದಗಳ ವಿವರ ಇಲ್ಲಿದೆ.

ಬೆಂಗಳೂರು(ಸೆ.13): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಕ್ರಿಕೆಟ್ ಮುಖಾಮುಖಿ ರೋಚಕ. ಕಾರಣ ಭರ್ಜರಿ ಸಿಕ್ಸರ್, ಅದ್ಭುತ ಬೌಲಿಂಗ್ ದಾಳಿ ಸರಣಿಯ ಹೈಲೈಟ್ಸ್. ಇದೀಗ ಸೆ.15 ರಿಂದ ಇಂಡೋ-ಆಫ್ರಿಕಾ ಸರಣಿ ಆರಂಭವಾಗುತ್ತಿದೆ. 3 ಟಿ20 ಹಾಗೂ 3 ಟೆಸ್ಟ್ ಪಂದ್ಯದ ಸರಣಿ ತೀವ್ರ ಕುತೂಹಲ ಕೆರಳಿಸಿದೆ. ಈ ಹಿಂದಿನ ಮುಖಾಮುಖಿಗಳಲ್ಲಿ 4 ವಿವಾದಗಳನ್ನು ಯಾರು ಮರೆತಿಲ್ಲ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸೇರಿದಂತೆ ಟೀಂ ಇಂಡಿಯಾ ಮೇಲೆ ವಿವಾದಗಳು ಸುತ್ತಿಕೊಂಡಿತ್ತು.

ಇದನ್ನೂ ಓದಿ: ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ರಾಹುಲ್‌ಗೆ ಆಘಾತ!

1)ತೆಂಡುಲ್ಕರ್ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ!
2001ರಲ್ಲಿ ನಡೆದ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ. ಇದು ಇಂಡೋ-ಆಫ್ರಿಕಾ ಸರಣಿಯ ಅತ್ಯಂತ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಈ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಬಾಲ್ ಟ್ಯಾಂಪರಿಂಗ್ ನಡೆಸಿದ್ದಾರೆ ಎಂದು ಮ್ಯಾಚ್ ರೆಫ್ರಿ ಮೈಕ್ ಡೆನ್ಸೆನಸ್ ವರದಿ ನೀಡಿದರು. ತ್ವರಿತ ತನಿಖೆ ನಡೆಸಿದ ಐಸಿಸಿ ತೆಂಡುಲ್ಕರ್‌ಗೆ ಪಂದ್ಯದ ಸಂಭಾವನೆಯ ಶೇಕಡಾ 75ರಷ್ಟು ದಂಡ ಹಾಗೂ ಒಂದು ಟೆಸ್ಟ್ ಪಂದ್ಯದಿಂದ ನಿಷೇಧಿಸಲಾಯಿತು. ಆದರೆ ಐಸಿಸಿ ನಿರ್ಧಾರ ಭಾರತದ ಸಂಸತ್ತಿನಲ್ಲೂ ಪ್ರತಿಧ್ವನಿಸಿತು. ಐಸಿಸಿ ತಾರತಮ್ಯ ಮಾಡುತ್ತಿದೆ ಎಂದು ಭಾರತದಲ್ಲಿ ಪ್ರತಿಭಟನೆಗಳು ಆರಂಭಗೊಂಡಿತು. ಹೀಗಾಗಿ ಐಸಿಸಿ ಸಚಿನ್ ತೆಂಡುಲ್ಕರ್‌ಗೆ ಕ್ಲೀನ್ ಚಿಟ್ ನೀಡಿತು.

ಇದನ್ನೂ ಓದಿ: ಮುಂಬೈ ಮಾಜಿ ಕ್ರಿಕೆಟಿಗ ಈಗ ಸೌತ್ ಆಫ್ರಿಕಾ ಬ್ಯಾಟಿಂಗ್ ಕೋಚ್!

2)ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿದ ಕೋಚ್ ಚಾಪೆಲ್!
ನಾಯಕ ಸೌರವ್ ಗಂಗೂಲಿ ಹಾಗೂ ಕೋಚ್ ಗ್ರೇಗ್ ಚಾಪೆಲ್ ನಡುವಿನ ಜಗಳ ಭಾರತೀಯರಿಗೆ ಹೊಸದೇನಲ್ಲ. 2005ರಲ್ಲಿ ಸೌತ್ ಆಫ್ರಿಕಾ ವಿರುದ್ದದ ಸರಣಿ ಸೌರವ್ ಗಂಗೂಲಿಗೆ ಕೊಕ್ ನೀಡಲಾಗಿತ್ತು. ಚಾಪೆಲ್ ನಿರ್ಧಾರದಿಂದ ರೋಚ್ಚಿಗೆದ್ದ ಅಭಿಮಾನಿಗಳು, 3ನೇ ಏಕದಿನ ಪಂದ್ಯಕ್ಕಾಗಿ ಕೋಲ್ಕತಾಗೆ ಆಗಮಿಸಿದ ಭಾರತೀಯ ತಂಡದ ಬಸ್‌ಗೆ ಮುತ್ತಿಗೆ ಹಾಕಿದ್ದರು. ಇಷ್ಟೇ ಅಲ್ಲ ಚಾಪೆಲ್ ವಿರುದ್ಧ  ಪ್ರತಿಭಟನೆ ನಡೆಸಿದರು. ಇತ್ತ ಚಾಪೆಲ್ ಮಧ್ಯದ ಬೆರಳು ತೋರಿಸಿ ಅಭಿಮಾನಿಗಳ ಕೋಪಕ್ಕೆ ಮತ್ತಷ್ಟು ತುಪ್ಪ ಸುರಿದರು. ಚಾಪೆಲ್ ನಡೆತ ವಿರೋಧಿಸಿದ ಭಾರತೀಯ ಅಭಿಮಾನಿಗಳು 3ನೇ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದರು.  ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವು ಸಾಧಿಸಿತು.

ಇದನ್ನೂ ಓದಿ: ಭಾರ​ತಕ್ಕೆ ಬಂದಿ​ಳಿದ ದಕ್ಷಿಣ ಆಫ್ರಿಕಾ ತಂಡ

3) ಮ್ಯಾಚ್ ಫಿಕ್ಸಿಂಗ್ ಮಾಡಿದ ಹ್ಯಾನ್ಸಿ ಕ್ರೋನಿಯೆ
ಎಪ್ರಿಲ್ 7, 2000ದಲ್ಲಿ ಸೌತ್ ಆಫ್ರಿಕಾ ನಾಯಕ ಹ್ಯಾನ್ಸಿ ಕ್ರೋನಿಯೇ ವಿರುದ್ಧ ದೆಹಲಿ ಪೊಲೀಸರು ಮ್ಯಾಚ್ ಫಿಕ್ಸಿಂಗ್ ದೂರು ದಾಖಲಿಸಿದರು. ಆರಂಭದಲ್ಲಿ ನಿರಾಕರಿಸಿದ ಕ್ರೋನಿಯೆ ವಿಚಾರಣೆಯಲ್ಲಿ ಕೆಲ ಮಾಹಿತಿಗಳನ್ನು ಸೋರಿಕೆ ಮಾಡಿದ್ದೇನೆ, ಆದರೆ ಮ್ಯಾಚ್ ಫಿಕ್ಸ್ ಮಾಡಿಲ್ಲ ಎಂದು ಒಪ್ಪಿಕೊಂಡರು.  ತಕ್ಷಣವೇ ಕ್ರೋನಿಯೆ ಅವರನ್ನು ಅಮಾನತು ಮಾಡಲಾಯಿತು. ಇದರ ಬೆನ್ನಲ್ಲೇ ವಿದಾಯ ಹೇಳಿದ ಕ್ರೋನಿಯೇ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದರು. ಟೀಂ ಇಂಡಿಯಾ ನಾಯಕ ಮೊಹಮ್ಮದ ಅಜರುದ್ದೀನ್ ತನಗೆ ಬುಕ್ಕಿ ಪರಿಚಯ ಮಾಡಿಸಿದರು ಅನ್ನೋ ಮಾಹಿತಿ ಬಹಿರಂಗ ಪಡಿಸಿದರು. ಇದು ಭಾರತೀಯ ಕ್ರಿಕೆಟ್‌ನ್ನು ಅಲ್ಲೋಲ ಕಲ್ಲೋಲ ಮಾಡಿತು.

ಇದನ್ನೂ ಓದಿ: ಸೆ.15 ರಿಂದ ಭಾರತ-ಸೌತ್ಆಫ್ರಿಕಾ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

4) ಕಪಿಲ್ ದೇವ್ ಮಂಕಡಿಂಗ್!
ಡಿಸೆಂಬರ್ 9, 1992ರಲ್ಲಿ ನಡೆದ ಭಾರತ ಸೌತ್ ಆಫ್ರಿಕಾ ನಡುವಿನ ಫ್ರೆಂಡ್ಲಿ ಪಂದ್ಯ ವಿವಾದಕ್ಕೆ ಕಾರಣವಾಯಿತು. ಸೌತ್ ಆಫ್ರಿಕಾ ಬ್ಯಾಟ್ಸ್‌ಮನ್ ಪೀಟರ್ ಕರ್ಸ್ಟನ್ ಕ್ರೀಸ್ ಬಿಟ್ಟ ಕಾರಣಕ್ಕೆ ಆಲ್ರೌಂಡರ್ ಕಪಿಲ್ ದೇವ್ ಮಂಕಡಿಂಗ್ ಮೂಲಕ ರನೌಟ್ ಮಾಡಿದ್ದರು. ಕಪಿಲ್ ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿ ನಡೆದುಕೊಂದ್ದಾರೆ ಎಂದು ವಿವಾದ ಹುಟ್ಟಿಕೊಂಡಿತು. ಆದರೆ ಕಪಿಲ್ ದೇವ್ 2 ಬಾರಿ ಬ್ಯಾಟ್ಸ್‌ಮನ್‌ಗೆ ಎಚ್ಚರಿಕೆ ನೀಡಿ 3ನೇ ಬಾರಿ ರನೌಟ್ ಮಾಡಿದ್ದರು.

click me!