ಜಿಯೋ ಗ್ರಾಹಕರಿಗೆ ಇದೀಗ ಭರ್ಜರಿ ಆಫರ್ ಘೋಷಿಸಲಾಗಿದೆ. ಭಾರತ ಹಾಗೂ ಸೌತ್ ಆಫ್ರಿಕಾ ಕ್ರಿಕೆಟ್ ಸರಣಿಯನ್ನು ಉಚಿತವಾಗಿ ನೀಡಲು ಜಿಯೋ ನಿರ್ಧರಿಸಿದೆ. ಇದಕ್ಕೇನು ಮಾಡಬೇಕು? ಇಲ್ಲಿದೆ ವಿವರ.
ಬೆಂಗಳೂರು(ಸೆ.13): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸರಣಿ ಸೆ.15 ರಿಂದ ಆರಂಭಗೊಳ್ಳುತ್ತಿದೆ. ಆರಂಭದಲ್ಲಿ 3 ಟಿ20, ನಂತರ 3 ಟೆಸ್ಟ್ ಪಂದ್ಯದ ಸರಣಿ ಆಯೋಜಿಸಲಾಗಿದೆ. ಸರಣಿಯ ಪಂದ್ಯಗಳ ಲೈವ್ ವಿಕ್ಷೀಸಲು ಜಿಯೋ ಟಿವಿ ಭರ್ಜರಿ ಆಫರ್ ನೀಡಿದೆ. ಭಾರತ-ಸೌತ್ ಆಫ್ರಿಕಾ ನಡುವಿನ ಕ್ರಿಕೆಟ್ ಸರಣಿಯನ್ನು ಜಿಯೋ ಗ್ರಾಹಕರು ಉಚಿತವಾಗಿ ವೀಕ್ಷಿಸಬಹುದು.
ಇದನ್ನೂ ಓದಿ: ಬ್ರಾಡ್‌ಬ್ಯಾಂಡ್ ಮಾರುಕಟ್ಟೆಗೆ ಜಿಯೋ ದಾಳಿ; ಉಚಿತ ಟಿವಿ ಕೂಡಾ ತಗೊಳ್ಳಿ!
ಜಿಯೋ ಬಳಕೆದಾರರು ಮೂರು ಟಿ 20 ಹಾಗೂ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಉಚಿತವಾಗಿ ನೋಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಉಚಿತ HD ಸ್ಟ್ರೀಮಿಂಗ್ ಜೊತೆಗೆ, ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಟದ ಹೊಸ ಸಂಯೋಜಿತ ಇಂಟರ್ಫೇಸ್ ಅನ್ನು ಸಹ ಜಿಯೋ ತರುತ್ತಿದೆ.
ಇದನ್ನೂ ಓದಿ: ಏರ್‌ಟೆಲ್ ಹಿಂದಿಕ್ಕಿ ನಂ. 2 ಸ್ಥಾನಕ್ಕೆ ಜಿಯೋ!
ಜಿಯೋ ಟಿವಿ ಯಲ್ಲಿ HD ಸ್ಟ್ರೀಮಿಂಗ್ ಅವಕಾಶ:
ಸರಣಿಯ ಲೈವ್ ಸ್ಟ್ರೀಮಿಂಗ್ ನೀಡುವ ಭಾರತದ ಪ್ರಮುಖ ಪ್ರಸಾರಕರಾದ ಸ್ಟಾರ್ ಇಂಡಿಯಾದೊಂದಿಗೆ ಜಿಯೋ 5 ವರ್ಷಗಳ ಪಾಲುದಾರಿಕೆಯ ಭಾಗವಾಗಿ, ಭಾರತ ಆಡುವ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ಭಾರತದ ಜಿಯೋ ಟಿವಿ ಮತ್ತು ಹಾಟ್‌ಸ್ಟಾರ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು ಒಪ್ಪಿಕೊಂಡಿದ್ದಾರೆ.