US ಓಪನ್ 2019: ನಡಾಲ್‌ಗೆ ಸುಲಭ ಜಯ!

Published : Aug 29, 2019, 11:33 AM IST
US ಓಪನ್ 2019: ನಡಾಲ್‌ಗೆ ಸುಲಭ ಜಯ!

ಸಾರಾಂಶ

ನಿರೀಕ್ಷೆಯಂತೆ 18 ಗ್ರ್ಯಾಂಡ್‌ಸ್ಲಾಂ ಒಡೆಯ ರಾಫೆಲ್‌ ನಡಾಲ್‌ ಯುಎಸ್ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಅದರಂತೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆಲ ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಈ ಕುರಿತಾದ ವರದಿ ಇಲ್ಲಿದೆ ನೊಡಿ... 

ನ್ಯೂಯಾರ್ಕ್[ಆ.29]: 18 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್‌ ನಡಾಲ್‌, ಯುಎಸ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿ​ಯಲ್ಲಿ ಶುಭಾ​ರಂಭ ಮಾಡಿ​ದ್ದಾರೆ. 

ಟೆನಿಸ್ ದಿಗ್ಗಜ ಫೆಡರರ್ ಹೃದಯ ನಿಲ್ಲಿಸಿದ್ದ ಭಾರತದ ನಗಾಲ್!

4ನೇ ಯುಎಸ್‌ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿ​ರುವ ನಡಾಲ್‌, ಪುರು​ಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯ​ದಲ್ಲಿ ಆಸ್ಪ್ರೇ​ಲಿ​ಯಾದ ಜಾನ್‌ ಮಿಲ್ಮನ್‌ ವಿರುದ್ಧ 6-3, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿ​ಸಿ​ದರು. 2ನೇ ಸುತ್ತಿನಲ್ಲಿ ನಡಾಲ್‌ಗೆ ಆಸ್ಪ್ರೇ​ಲಿ​ಯಾದ ಥಾನಾಸಿ ಕೊಕ್ಕಿ​ನಾಕಿಸ್‌ ಎದು​ರಾ​ಗ​ಲಿ​ದ್ದಾರೆ.

ಅಗ್ರ 10ರಲ್ಲಿ ನಾಲ್ವರು ಔಟ್‌: ಇದೇ ವೇಳೆ ಪುರು​ಷರ ಸಿಂಗಲ್ಸ್‌ನಲ್ಲಿ ಅಗ್ರ 10 ಶ್ರೇಯಾಂಕ ಪಡೆದ ಆಟ​ಗಾ​ರರ ಪೈಕಿ ನಾಲ್ವರು ಮೊದಲ ಸುತ್ತಿ​ನಲ್ಲೇ ಆಘಾತ ಅನು​ಭ​ವಿ​ಸಿ​ದರು. 4ನೇ ಶ್ರೇಯಾಂಕಿತ ಡೊಮಿ​ನಿಕ್‌ ಥೀಮ್‌, 8ನೇ ಶ್ರೇಯಾಂಕಿತ ಸ್ಟೆಫಾನೋ ಸಿಟ್ಸಿ​ಪಾಸ್‌, 9ನೇ ಶ್ರೇಯಾಂಕಿತ ಕರೆನ್‌ ಖಚ​ನೊವ್‌ ಹಾಗೂ 10ನೇ ಶ್ರೇಯಾಂಕಿತ ರೊಬೆರ್ಟೊ ಬಟಿಸ್ಟಾಅಗುಟ್‌ ಸೋಲುಂಡು ಟೂರ್ನಿ​ಯಿಂದ ಹೊರ​ಬಿ​ದ್ದರು.

US ಓಪನ್ 2019: 2ನೇ ಸುತ್ತಿಗೆ ಪ್ಲಿಸ್ಕೋವಾ

ಸ್ಟೀಫನ್ಸ್‌ಗೆ ಸೋಲು: 2017ರ ಯುಎಸ್‌ ಓಪನ್‌ ಮಹಿಳಾ ಸಿಂಗಲ್ಸ್‌ ಚಾಂಪಿ​ಯನ್‌ ಸ್ಲೋನ್‌ ಸ್ಟೀಫನ್ಸ್‌, ಮೊದಲ ಸುತ್ತಿ​ನಲ್ಲೇ ಆಘಾತ ಅನು​ಭ​ವಿ​ಸಿ​ದರು. ರಷ್ಯಾದ ಶ್ರೇಯಾಂಕ ರಹಿತ ಆಟ​ಗಾರ್ತಿ ಅನ್ನಾ ಕಲಿ​ಸ್ಕಾಯಾ ವಿರುದ್ಧ 3-6, 4-6 ನೇರ ಸೆಟ್‌ಗಳಲ್ಲಿ ಪರಾ​ಭ​ವ​ಗೊಂಡು ಹೊರ​ಬಿ​ದ್ದರು. 

ಇದೇ ವೇಳೆ 5ನೇ ಶ್ರೇಯಾಂಕಿ​ತೆ ಉಕ್ರೇನ್‌ನ ಎಲೆನಾ ಸ್ವಿಟೋ​ಲಿನಾ ಹಾಗೂ 6ನೇ ಶ್ರೇಯಾಂಕಿತೆ ಚೆಕ್‌ ಗಣ​ರಾ​ಜ್ಯದ ಪೆಟ್ರಾ ಕ್ವಿಟೋವಾ ಮೊದಲ ಸುತ್ತಿ​ನಲ್ಲಿ ಸುಲಭ ಗೆಲುವು ಸಾಧಿಸಿ, 2ನೇ ಸುತ್ತಿ​ಗೇ​ರಿ​ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?