ಇಂದು ರಾಷ್ಟ್ರೀಯ ಕ್ರೀಡಾ ದಿನ; ಸಂಜೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ

Published : Aug 29, 2019, 11:01 AM IST
ಇಂದು ರಾಷ್ಟ್ರೀಯ ಕ್ರೀಡಾ ದಿನ; ಸಂಜೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ

ಸಾರಾಂಶ

ಭಾರತ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸಂಜೆ ಕ್ರೀಡಾ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವ​ದೆ​ಹ​ಲಿ[ಆ.29]: ಹಾಕಿ ದೇವರು ಎಂದೇ ಕರೆ​ಸಿ​ಕೊ​ಳ್ಳುವ ಧ್ಯಾನ್‌ಚಂದ್‌ ಹುಟ್ಟುಹ​ಬ್ಬದ ಅಂಗ​ವಾಗಿ ಆ.29ರಂದು ರಾಷ್ಟ್ರೀಯ ಕ್ರೀಡಾ ದಿನ​ವನ್ನು ಆಚ​ರಿ​ಸ​ಲಾ​ಗು​ತ್ತದೆ. 

#FitIndia ಆಂದೋಲನಕ್ಕೆ ಮೋದಿ ಗ್ರೀನ್‌ ಸಿಗ್ನಲ್‌!

ಗುರು​ವಾರ ಇಲ್ಲಿನ ರಾಷ್ಟ್ರ​ಪತಿ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯ​ಕ್ರಮ ನಡೆ​ಯ​ಲಿದ್ದು, ರಾಷ್ಟ್ರ​ಪತಿ ರಾಮ್‌ನಾಥ್‌ ಕೋವಿಂದ್‌ ಖೇಲ್‌ ರತ್ನ, ಅರ್ಜುನ, ದ್ರೋರ್ಣಾ​ಚಾರ್ಯ, ಧ್ಯಾನ್‌ಚಂದ್‌ ಪ್ರಶ​ಸ್ತಿ​ಗ​ಳನ್ನು ಸಾಧಕರಿಗೆ ಪ್ರದಾನ ಮಾಡ​ಲಿ​ದ್ದಾರೆ.

'ಖೇಲ್ ರತ್ನ: ರಾಜೀವ್ ಧ್ಯಾನ ಬಿಡಿ, ಧ್ಯಾನ್ ಚಂದ್ ಹೆಸರು ಕೊಡಿ'

ಕುಸ್ತಿ​ಪಟು ಭಜ​ರಂಗ್‌ ಪೂನಿಯಾ ಹಾಗೂ ಪ್ಯಾರಾ ಅಥ್ಲೀಟ್‌ ದೀಪಾ ಮಲಿಕ್‌ಗೆ ಖೇಲ್‌ ರತ್ನ ಪ್ರಶಸ್ತಿ ದೊರೆ​ತಿದ್ದು, ಕ್ರಿಕೆ​ಟಿಗ ರವೀಂದ್ರ ಜಡೇಜಾ ಸೇರಿ​ದಂತೆ 19 ಕ್ರೀಡಾ​ಪ​ಟು​ಗ​ಳು ಅರ್ಜುನ ಪ್ರಶ​ಸ್ತಿಗೆ ಆಯ್ಕೆಯಾಗಿ​ದ್ದಾರೆ. ಈ ಪೈಕಿ ರಾಜ್ಯದ ಈಕ್ವೆ​ಸ್ಟ್ರಿ​ಯನ್‌ ಪಟು ಫೌವಾದ್‌ ಮಿರ್ಜಾ ಸಹ ಇದ್ದಾರೆ.

’ಸದೃಢ ಭಾರತ ಅಭಿಯಾನ’ ಇಂದು ಬಿಎಸ್‌ವೈ ಚಾಲ​ನೆ

ಬೆಂಗಳೂರು: ರಾಷ್ಟ್ರೀಯ ಕ್ರೀಡಾ ದಿನದಂದು, ಪ್ರಧಾನಿ ನರೇಂದ್ರ ಮೋದಿ ‘ಫಿಟ್‌ ಇಂಡಿಯಾ ಅಭಿಯಾನ’ಕ್ಕೆ ಚಾಲನೆ ನೀಡಲಿದ್ದಾರೆ. ಅದರಂತೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡ ರಾಜ್ಯದಲ್ಲಿ ‘ಸದೃಢ ಭಾರತ ಅಭಿಯಾನ’ಕ್ಕೆ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ. 

ಫಿಟ್ನೆಸ್‌ ಬಗ್ಗೆ ಜನ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ವಿಧಾನಸೌಧ ಮುಂಭಾಗ ಬೆಳಗ್ಗೆ 9.30ರಿಂದ ಕಾರ್ಯ​ಕ್ರಮ ಅಯೋ​ಜಿ​ಸ​ಲಾ​ಗಿದೆ. ಈ ವೇಳೆ ರಾಜ್ಯ ಕ್ರೀಡಾ ಇಲಾಖೆ ಹಾಕಿ, ಬಾಕ್ಸಿಂಗ್‌, ಯೋಗಾ, ಬಾಸ್ಕೆಟ್‌ಬಾಲ್‌, ವಾಲ್‌ ಕ್ಲೈಂಬಿಂಗ್‌ ಹಾಗೂ ಸೈಕ್ಲಿಂಗ್‌ ಸೇರಿದಂತೆ ಇತರೆ ಕ್ರೀಡೆಗಳನ್ನು ಪ್ರಾಯೋಗಿಕವಾಗಿ ಆಡಿಸಲಿದೆ. 

ಕಾರ್ಯ​ಕ್ರ​ಮದ ವೇಳೆ ಎನ್‌ಎಸ್‌ಎಸ್‌ನ 1000 ಸಿಬ್ಬಂದಿಗಳು ಹಾಗೂ ಕ್ರೀಡಾ ಹಾಸ್ಟೆಲ್‌ನ 200 ವಿದ್ಯಾರ್ಥಿಗಳು ಹಾಜರಿರಲಿದ್ದಾರೆ ಎಂದು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್‌. ರಮೇಶ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?