ಭಾರ​ತಕ್ಕೆ ಬಂದಿ​ಳಿದ ದಕ್ಷಿಣ ಆಫ್ರಿಕಾ ತಂಡ

Published : Sep 08, 2019, 01:02 PM IST
ಭಾರ​ತಕ್ಕೆ ಬಂದಿ​ಳಿದ ದಕ್ಷಿಣ ಆಫ್ರಿಕಾ ತಂಡ

ಸಾರಾಂಶ

ಭಾರತ ವಿರುದ್ಧದ ಮೂರು ಟಿ20 ಹಾಗೂ 3 ಟೆಸ್ಟ್ ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್ ಆಡಲು ಕ್ವಿಂಟನ್ ಡಿ ಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದಿಳಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವ​ದೆ​ಹ​ಲಿ(ಸೆ.08): ಕ್ವಿಂಟನ್‌ ಡಿ ಕಾಕ್‌ ನೇತೃ​ತ್ವದ ದಕ್ಷಿಣ ಆಫ್ರಿಕಾ ತಂಡ ಶನಿ​ವಾರ ಭಾರ​ತ​ಕ್ಕೆ ಬಂದಿ​ಳಿ​ಯಿತು. ಸೆ.15ರಿಂದ ಟೀಂ ಇಂಡಿಯಾ ವಿರುದ್ಧ ದ.ಆ​ಫ್ರಿಕಾ ತಂಡ 3 ಪಂದ್ಯ​ಗಳ ಟಿ20 ಸರ​ಣಿ​ಯನ್ನು ಆಡಲಿದೆ. 

ಸೆ.15 ರಿಂದ ಭಾರತ-ಸೌತ್ಆಫ್ರಿಕಾ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ಮೊದಲ ಪಂದ್ಯ ಧರ್ಮ​ಶಾ​ಲಾ​ದಲ್ಲಿ ನಡೆ​ಯ​ಲಿದ್ದು, ಸೆ.18ರಂದು ಮೊಹಾ​ಲಿ​ಯಲ್ಲಿ 2ನೇ ಪಂದ್ಯ ನಡೆ​ಯ​ಲಿದೆ. ಸೆ.22ಕ್ಕೆ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬೆಂಗ​ಳೂರು ಆತಿಥ್ಯ ವಹಿ​ಸ​ಲಿದೆ. 

ವಿಂಡೀಸ್ ಮಣಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ಟಿ20 ಬಳಿಕ 3 ಪಂದ್ಯ​ಗಳ ಟೆಸ್ಟ್‌ ಸರ​ಣಿ​ಯಲ್ಲಿ ಭಾರತ-ದ.ಆ​ಫ್ರಿಕಾ ತಂಡ​ಗಳು ಮುಖಾ​ಮುಖಿಯಾಗಲಿವೆ. ಅ.2ರಿಂದ ವಿಶಾ​ಖ​ಪ​ಟ್ಟಣಂನಲ್ಲಿ ಮೊದಲ ಟೆಸ್ಟ್‌ ನಡೆ​ಯ​ಲಿದ್ದು, ಅ.10ರಿಂದ ಪುಣೆಯಲ್ಲಿ 2ನೇ ಪಂದ್ಯ ನಡೆ​ಯ​ಲಿದೆ. ಅ.19ರಿಂದ ರಾಂಚಿ​ಯಲ್ಲಿ 3ನೇ ಪಂದ್ಯ ಆರಂಭ​ಗೊ​ಳ್ಳ​ಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇನ್ನೂ ಮರೆತಿಲ್ಲ ಟ್ರ್ಯಾವಿಸ್ ಹೆಡ್ ಮೇಲಿನ ಸೇಡು! ಆಸೀಸ್ ಆಟಗಾರನ ಮೇಲೆ ಕೊಹ್ಲಿ ಕಿಡಿಕಾರಿದ್ದೇಕೆ? ವಿಡಿಯೋ ವೈರಲ್
ಈ ಸಲ IPL ಕಪ್ ಗೆಲ್ಲೋದು ಯಾರು? ಅಚ್ಚರಿ ಭವಿಷ್ಯ ನುಡಿದ Google Gemini..! ಹೊಸ ಇತಿಹಾಸ ನಿರ್ಮಾಣ?