ಅಂಡರ್‌ 19 ಏಷ್ಯಾಕಪ್‌: ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

By Kannadaprabha NewsFirst Published Sep 8, 2019, 12:24 PM IST
Highlights

ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೆದುರು ಭಾರತ ಭರ್ಜರಿ ಜಯ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮೊರಟುವಾ(ಸೆ.08): ಆರಂಭಿಕ ಅರ್ಜುನ್‌ ಅಜಾದ್‌ ಹಾಗೂ ತಿಲಕ್‌ ವರ್ಮಾ ಭರ್ಜರಿ ಶತಕದ ನೆರವಿನಿಂದ ಅಂಡರ್‌ 19 ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡ, ಬದ್ಧ ವೈರಿ ಪಾಕಿಸ್ತಾನ ವಿರುದ್ಧ 60 ರನ್‌ಗಳ ಗೆಲುವು ದಾಖಲಿಸಿದೆ. 

Well done, boys! 👏🏾

India U19 registered a comfortable 60-run win over Pakistan U19 and are now through to the semi-final of Arjun Azad (121) and Tilak Varma (110) hit centuries while Atharva Ankolekar took 3/36 pic.twitter.com/yWdi9P0cTr

— BCCI (@BCCI)

36ರ ಹರೆಯದಲ್ಲಿ ಮಾಲಿಂಗ ಹ್ಯಾಟ್ರಿಕ್; ಸಾಧನೆ ಕೊಂಡಾಡಿದ ಫ್ಯಾನ್ಸ್!

ಭಾರತ ನೀಡಿದ ಬೃಹತ್‌ ಗುರಿ ಬೆನ್ನತ್ತಿದ ಪಾಕಿಸ್ತಾನ, ನಾಯಕ ರೊಹೈಲ್‌ ನಜೀರ್‌ (117), ಮೊಹಮದ್‌ ಹ್ಯಾರೀಸ್‌ (43) ಹೋರಾ​ಟದ ಹೊರ​ತಾ​ಗಿಯೂ 46.4 ಓವರಲ್ಲಿ 245 ರನ್‌ಗಳಿಗೆ ಆಲೌಟ್‌ ಆಯಿತು. 

ಚಂದ್ರಯಾನ 2: ISRO ಬೆನ್ನಿಗೆ ನಿಂತ ಟೀಂ ಇಂಡಿಯಾ ಕ್ರಿಕೆಟರ್ಸ್!

ಭಾರತದ ಪರ ಅಥರ್ವ 3, ಕರ್ನಾ​ಟ​ಕದ ವಿದ್ಯಾಧರ್‌ ಪಾಟೀಲ್‌, ಸುಶಾಂತ್‌ ಮಿಶ್ರಾ ತಲಾ 2 ವಿಕೆಟ್‌ ಪಡೆದರು. ಇದಕ್ಕೂ ಮುನ್ನ ಭಾರತ ಅರ್ಜುನ್‌ (121), ತಿಲಕ್‌ (110) ಶತ​ಕ​ದ ನೆರವಿನಿಂದ 50 ಓವರಲ್ಲಿ 9 ವಿಕೆಟ್‌ಗೆ 305 ರನ್‌ ಗಳಿಸಿತ್ತು.

ಸ್ಕೋರ್‌: ಭಾರತ 305/9, ಪಾಕಿಸ್ತಾನ 245/10
 

click me!