
ಮುಂಬೈ(ಜು.31]: ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಯ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಅಕ್ಟೋಬರ್ 19ರ ಬದಲು ಪಂದ್ಯಾವಳಿ ಅ.5ರಿಂದ ಆರಂಭಗೊಳ್ಳಲಿದೆ. ಫೈನಲ್ 2019ರ ಜನವರಿ 5ರಂದು ನಿಗದಿಯಾಗಿದೆ. ಈ ಮೊದಲು ಫೈನಲ್ ಪಂದ್ಯ ಜ.29, 2019ಕ್ಕೆ ನಡೆಯಲಿದೆ ಎಂದು ಘೋಷಿಸಲಾಗಿತ್ತು.
ಇದನ್ನು ಓದಿ: PKL6: ಹರಾಜಿನ ಬಳಿಕ ಪ್ರೊಕಬಡ್ಡಿ ಲೀಗ್‌ನ 12 ತಂಡಗಳು ಹೇಗಿದೆ ಗೊತ್ತಾ?
ಕಳೆದ ವರ್ಷದಂತೆ ಈ ಬಾರಿಯೂ ಪಂದ್ಯಾವಳಿ 13 ವಾರಗಳ ಕಾಲ ನಡೆಯಲಿದ್ದು, 12 ತಂಡಗಳಿರುವ ಲೀಗ್‌ನಲ್ಲಿ ಒಟ್ಟು 138 ಪಂದ್ಯಗಳು ನಡೆಯಲಿವೆ. ಇನ್ನೆರಡು ವಾರಗಳಲ್ಲಿ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಪ್ರೊ ಕಬಡ್ಡಿ ಹರಾಜು- ಯಾರು ಯಾವ ತಂಡಕ್ಕೆ ಸೇಲ್?
ಪ್ರೊ ಕಬಡ್ಡಿ ಆರಂಭಕ್ಕೂ ಮುನ್ನ ಆಗಸ್ಟ್ 19ರಿಂದ ಏಷ್ಯನ್ ಕಬಡ್ಡಿ ಟೂರ್ನಿ ಆರಂಭವಾಗಲಿದ್ದು, ಕಬಡ್ಡಿ ಮಾಸ್ಟರ್ಸ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಅಜಯ್ ಠಾಕೂರ್ ಏಷ್ಯನ್ ಕಬಡ್ಡಿ ಟೂರ್ನಿಯಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನು ಓದಿ: ಪ್ರೋ ಕಬಡ್ಡಿ: ಮುಂಬೈನಲ್ಲಿ ಈ ಬಾರಿ ನಡೆಯಲ್ಲ ಕಬಡ್ಡಿ ಪಂದ್ಯ?
ಆರನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಹರಿಯಾಣ ಸ್ಟೀಲರ್ಸ್ ತಂಡ ಮೋನು ಗೋಯೆತ್’ರನ್ನು 1.5 ಕೋಟಿ ರೂಪಾಯಿಗೆ ಖರೀದಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.