ವಿಶ್ವ ಬ್ಯಾಡ್ಮಿಂಟನ್: ಭಾರತೀಯರ ಶುಭಾರಂಭ

By Web Desk  |  First Published Jul 31, 2018, 8:04 AM IST

ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಮನು ಅತ್ರಿ ಮತ್ತು ಸುಮಿತ್ ರೆಡ್ಡಿ ಜೋಡಿ, ಬಲ್ಗೇರಿಯಾದ ಡೇನಿಯಲ್ ನಿಕೊಲೊವ್ ಮತ್ತು ಇವಾನ್ ರುಸೆವ್ ಜೋಡಿ ವಿರುದ್ಧದ 21-13, 21-18 ಗೇಮ್‌ಗಳಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಮುಂದಿನ ಸುತ್ತು ಪ್ರವೇಶಿಸಿತು.


ನಾನ್ಜಿಂಗ್ (ಚೀನಾ): ಸೋಮವಾರದಿಂದ ಆರಂಭಗೊಂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್'ನಲ್ಲಿ ಭಾರತೀಯರು ಶುಭಾರಂಭ ಮಾಡಿದ್ದಾರೆ. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ವಿಶ್ವ ನಂ.11 ಎಚ್.ಎಸ್.ಪ್ರಣಯ್ ನ್ಯೂಜಿಲೆಂಡ್‌ನ ಅಭಿನವ್ ಮನೊಟಾ ವಿರುದ್ಧ 21-12,21-11 ಗೇಮ್‌ಗಳಲ್ಲಿ ಗೆದ್ದು 2ನೇ ಸುತ್ತಿಗೆ ಪ್ರವೇಶಿಸಿದರು.

ಮತ್ತೊಬ್ಬ ತಾರಾ ಆಟಗಾರ ಸೌರಭ್ ವರ್ಮಾ ಫ್ರಾನ್ಸ್‌ನ ಲುಕಾಸ್ ಕೊರ್ವಿ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ 21-12, 21-10 ಗೇಮ್‌ಗಳಲ್ಲಿ ಜಯಿಸಿ 2ನೇ ಸುತ್ತಿಗೇರಿದರೆ, ಮಾಜಿ ನಂ.1 ದ.
ಕೊರಿಯಾದ ಸೊನ್ ವಾನ್ ಹೊ ಹಿಂದೆ ಸರಿದಿದ್ದರಿಂದ ಭಾರತದ ಬಿ.ಸಾಯಿಪ್ರಣೀತ್ 2ನೇ ಸುತ್ತಿಗೆ ವಾಕ್ ಓವರ್ ಪಡೆದಿದ್ದಾರೆ. ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಮನು ಅತ್ರಿ ಮತ್ತು ಸುಮಿತ್ ರೆಡ್ಡಿ ಜೋಡಿ, ಬಲ್ಗೇರಿಯಾದ ಡೇನಿಯಲ್ ನಿಕೊಲೊವ್ ಮತ್ತು ಇವಾನ್ ರುಸೆವ್ ಜೋಡಿ ವಿರುದ್ಧದ 21-13, 21-18 ಗೇಮ್‌ಗಳಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಮುಂದಿನ ಸುತ್ತು ಪ್ರವೇಶಿಸಿತು.

Tap to resize

Latest Videos

ಮಿಶ್ರ ಡಬಲ್ಸ್‌ನಲ್ಲಿ ಯಶಸ್ಸು:

ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ 4 ಜೋಡಿಗಳು 2ನೇ ಸುತ್ತಿಗೆ ಪ್ರವೇಶ ಪಡೆದಿವೆ. ಸಾತ್ವಿಕ್ ಸಾಯಿರಾಜ್-ಅಶ್ವಿನಿ ಪೊನ್ನಪ್ಪ ಜೋಡಿ 21-09, 22-20 ಗೇಮ್‌ಗಳಲ್ಲಿ ಡೆನ್ಮಾರ್ಕ್‌ನ ನಿಕ್ಲಸ್ ನೊಹ್ರ್- ಸಾರಾ ತ್ಯಗೆಸನ್ ಜೋಡಿ ಎದುರು ಗೆದ್ದರೆ, ಪ್ರಣವ್ ಚೋಪ್ರಾ-ಸಿಕ್ಕಿ ರೆಡ್ಡಿ, ಚೆಕ್ ಗಣರಾಜ್ಯದ ಜೇಕಬ್ ಬಿಟ್ಮನ್-ಅಲ್ಜ್ ಬೆಟಾ ಎದುರು 21-17, 21-15 ಗೇಮ್‌ಗಳಲ್ಲಿ ಜಯಿಸಿತು. ಸೌರಭ್ ಶರ್ಮಾ-ಅನುಷ್ಕಾ ಪರೀಖ್ ಜೋಡಿ, ನೈಜೀರಿಯಾದ ಪೀಸ್ ಒರ್ಜಿ-ಎನ್ಜೊ ಆಬ್ ಜೋಡಿ ವಿರುದ್ಧ 21-13, 21-12 ಗೇಮ್’ಗಳಲ್ಲಿ ಗೆಲುವು ಪಡೆದರೆ, 2 ದಿನಗಳ ಹಿಂದಷ್ಟೇ ರಷ್ಯಾ ಓಪನ್‌ನಲ್ಲಿ ರನ್ನರ್-ಅಪ್ ಆದ ರೋಹನ್ ಕಪೂರ್-ಖುಹೂ ಗರ್ಗ್ ಜೋಡಿ 21-19, 21-6 ಗೇಮ್‌ಗಳಲ್ಲಿ ಕೆನಡಾದ ರಚೆಲ್ ಹೊಂಡರಿಚ್- ಟೊಬಿ ಎನ್‌ಜಿ ಜೋಡಿ ವಿರುದ್ಧ ಗೆದ್ದು 2ನೇ ಸುತ್ತಿಗೆ ಪ್ರವೇಶಿಸಿತು.

click me!