8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಆಲ್ರೌಂಡರ್ ಪವನ್ ದೇಶ್‌ಪಾಂಡೆ ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ಇನ್ನುಳಿದಂತೆ ಯಾವೆಲ್ಲಾ ಆಟಗಾರರು ಯಾವ ತಂಡ ಸೇರಿಕೊಂಡಿದ್ದಾರೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...
ಬೆಂಗಳೂರು[ಜು.27]: ಬಹುನಿರೀಕ್ಷಿತ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಗರದ ಖಾಸಗಿ ಹೊಟೆಲ್’ವೊಂದರಲ್ಲಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದಿದ್ದ ಆಲ್ರೌಂಡರ್ ಪವನ್ ದೇಶ್‌ಪಾಂಡೆಯನ್ನು 7.30 ಲಕ್ಷ ರುಪಾಯಿ ನೀಡಿ ಶಿವಮೊಗ್ಗ ಲಯನ್ಸ್ ಖರೀದಿಸಿದೆ. ಈ ಮೂಲಕ ಪವನ್ ದೇಶ್‌ಪಾಂಡೆ ಪ್ರಸಕ್ತ ಆವೃತ್ತಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರ ಎನಿಸಿದ್ದಾರೆ.
undefined
A ಪೂಲ್’ನಲ್ಲಿ ಸ್ಥಾನ ಪಡೆದಿದ್ದ ಯುವ ಆಲ್ರೌಂಡರ್ ಪವನ್ ದೇಶ್‌ಪಾಂಡೆ ಖರೀದಿಸಲು ಮೈಸೂರು ವಾರಿಯರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ನಡುವೆ ಸಾಕಷ್ಟು ಹೋರಾಟ ನಡೆಯಿತು. ಆದರೆ ಅಂತಿಮವಾಗಿ 7.30 ಲಕ್ಷ ರುಪಾಯಿ ನೀಡಿ ದೇಶ್‌ಪಾಂಡೆಯನ್ನು ಶಿವಮೊಗ್ಗ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಯಶಸ್ವಿಯಾಯಿತು. ಇನ್ನು ಕಳೆದ ಆವೃತ್ತಿಯಲ್ಲಿ 8.3 ಲಕ್ಷ ರುಪಾಯಿಗೆ ಶಿವಮೊಗ್ಗ ಪಾಲಾಗಿದ್ದ ಅಭಿಮನ್ಯು ಮಿಥುನ್ ಅವರನ್ನು RTM(ರೈಟ್ ಟು ಮ್ಯಾಚ್) ಬಳಸಿ ತನ್ನ ತಂಡದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
KPL 2019 ಟೂರ್ನಿ ವೇಳಾಪಟ್ಟಿ ಬಿಡುಗಡೆ-ಹರಾಜಿಗೆ ಕ್ಷಣಗಣನೆ!
ಇನ್ನುಳಿದಂತೆ ಪ್ರತೀಕ್ ಜೈನ್[4.50] ಬಿಜಾಪುರ ಬುಲ್ಸ್ ಪಾಲಾದರೆ, ರೋಹನ್ ಕದಂ 3.20 ಲಕ್ಷ ರು.ಗೆ ಬೆಂಗಳೂರು ಬ್ಲಾಸ್ಟರ್ ಖರೀದಿಸಿದೆ. ಆಲ್ರೌಂಡರ್ ಅಮಿತ್ ವರ್ಮಾ ಅವರನ್ನು 5.20 ಲಕ್ಷ ರು ಗೆ ಮೈಸೂರು ವಾರಿಯರ್ಸ್ ಖರೀದಿಸಿದೆ. ಇನ್ನು ಕಳೆದ ಆವೃತ್ತಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡವನ್ನು ಮುನ್ನಡೆಸಿದ್ದ ಅನಿರುದ್ದ್ ಜೋಶಿ ಅವರನ್ನು 7.10 ಲಕ್ಷ ನೀಡಿ ಮೈಸೂರು ತಂಡ ಖರೀದಿಸಿದೆ. ಈ ಬಾರಿಯೂ ಬಳ್ಳಾರಿ ಟಸ್ಕರ್ ಪರ CA ಕಾರ್ತಿಕ್ ಕಣಕ್ಕಿಳಿಯಲಿದ್ದು, RTM ಕಾರ್ಡ್ ಬಳಸಿ 4.70 ರುಪಾಯಿ ನೀಡಿ ತಮ್ಮ ತಂಡದಲ್ಲೇ ಉಳಿಸಿಕೊಂಡಿದೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ BR ಸಮರ್ಥ್ 2.40 ಲಕ್ಷ ರುಪಾಯಿಗೆ ಬೆಂಗಳೂರು ಬ್ಲಾಸ್ಟರ್ ತಂಡ ಖರೀದಿಸಿದೆ.
A ಪೂಲ್’ನಲ್ಲಿ ಹರಾಜಾದ ಆಟಗಾರರ ಪಟ್ಟಿ ಇಲ್ಲಿದೆ ನೋಡಿ
ಪವನ್ ದೇಶ್‌ಪಾಂಡೆ – Rs. 7.30 lakh (ಶಿವಮೊಗ್ಗ ಲಯನ್ಸ್)
ಅನಿರುದ್ಧ್ ಜೋಶಿ – Rs. 7.10 lakh (ಮೈಸೂರು ವಾರಿಯರ್ಸ್)
ಮೊಹಮ್ಮದ್ ತಾಹಾ – Rs. 5.70 lakh (ಹುಬ್ಬಳ್ಳಿ ಟೈಗರ್ಸ್)
ಅಮಿತ್ ವರ್ಮಾ – Rs. 5.20 lakh (ಮೈಸೂರು ವಾರಿಯರ್ಸ್)
CA ಕಾರ್ತಿಕ್ – Rs. 4.70 lakh (ಬಳ್ಳಾರಿ ಟಸ್ಕರ್ಸ್)
ಪ್ರತೀಕ್ ಜೈನ್ – Rs. 4.50 lakh (ಬಿಜಾಪುರ ಬುಲ್ಸ್)
ಅಭಿಮನ್ಯು ಮಿಥುನ್ – Rs. 3.60 lakh (ಶಿವಮೊಗ್ಗ ಲಯನ್ಸ್)
ನವೀನ್ MG – Rs. 3.50 lakh (ಬಿಜಾಪುರ ಬುಲ್ಸ್)
ರೋಹನ್ ಕದಂ – Rs. 3.20 lakh (ಬೆಂಗಳೂರು ಬ್ಲಾಸ್ಟರ್ಸ್)
ಆಧಿತ್ಯ ಸೋಮಣ್ಣ – Rs. 2.60 lakh (ಹುಬ್ಬಳ್ಳಿ ಟೈಗರ್ಸ್)
ಅಭಿಷೇಕ್ ರೆಡ್ಡಿ – Rs. 2.50 lakh (ಬಳ್ಳಾರಿ ಟಸ್ಕರ್ಸ್)
ಸಮರ್ಥ್ BR – Rs. 2.40 lakh (ಬೆಂಗಳೂರು ಬ್ಲಾಸ್ಟರ್ಸ್)
K. ಗೌತಮ್ – Rs. 1.90 lakh (ಬಳ್ಳಾರಿ ಟಸ್ಕರ್ಸ್)
ಶಿಶಿರ್ ಭಾವ್ನೆ – Rs. 1.80 lakh (ಹುಬ್ಬಳ್ಳಿ ಟೈಗರ್ಸ್)
ಸ್ಟಾಲಿನ್ ಹೋವರ್ – Rs. 1.10 lakh (ಬೆಳಗಾವಿ ಪ್ಯಾಂಥರ್ಸ್)
ದಿಕ್ಷಾಂಕ್ಷು ನೇಗಿ – Rs. 1 lakh (ಬೆಳಗಾವಿ ಪ್ಯಾಂಥರ್ಸ್)
KV ಸಿದ್ದಾರ್ಥ್ – Rs. 50, 000 (ಮೈಸೂರು ವಾರಿಯರ್ಸ್)
ಪ್ರದೀಪ್ T – Rs. 50, 000 (ಬಳ್ಳಾರಿ ಟಸ್ಕರ್ಸ್)