ಭಾರತ ವಿರುದ್ಧ ಆಗಸ್ಟ್ 08ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಬಹುತೇಕ ತಮ್ಮ ವೃತ್ತಿಜೀವನದ ಕಟ್ಟಕಡೆಯ ಏಕದಿನ ಸರಣಿ ಆಡಲಿದ್ದಾರೆ. ಇದರ ಜತೆ ಕೆಲ ಅಪರೂಪದ ದಾಖಲೆಗಳನ್ನು ನಿರ್ಮಿಸಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ...
ಜಮೈಕಾ[ಜು.27]: ಭಾರತ ವಿರುದ್ಧ ಆ.8ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ವೆಸ್ಟ್‌ಇಂಡೀಸ್ ತಂಡ ಪ್ರಕಟಗೊಂಡಿದ್ದು, ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ತಂಡ ಕೂಡಿಕೊಂಡಿದ್ದಾರೆ.
ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಮೂರು ಕನ್ನಡಿಗರಿಗೆ ಸ್ಥಾನ
undefined
ಏಕದಿನ ವಿಶ್ವಕಪ್ ಬಳಿಕ ನಿವೃತ್ತಿ ಪಡೆಯುವುದಾಗಿ ಘೋಷಿಸಿ ಬಳಿಕ ಮನಸು ಬದಲಿಸಿದ ಕ್ರಿಸ್ ಗೇಲ್, 14 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ತಂಡವನ್ನು ಜೇಸನ್ ಹೋಲ್ಡರ್ ಮುನ್ನಡೆಸಲಿದ್ದಾರೆ. ಆ.8ಕ್ಕೆ ಮೊದಲ ಪಂದ್ಯ ನಡೆಯಲಿದ್ದು, ಆ.11, ಆ.14ಕ್ಕೆ ಕ್ರಮವಾಗಿ 2 ಹಾಗೂ 3ನೇ ಏಕದಿನ ನಡೆಯಲಿದೆ.
ಭಾರತ ಎದುರಿನ ಟಿ20 ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ
ಕೆಲ ಬದಲಾವಣೆ: ಸುನಿಲ್ ಆ್ಯಂಬ್ರಿಸ್, ಡ್ಯಾರನ್ ಬ್ರಾವೋ, ಶೆನಾನ್ ಗೇಬ್ರಿಯಲ್ ಹಾಗೂ ಆ್ಯಶ್ಲೆ ನರ್ಸ್’ಗೆ ವಿಶ್ರಾಂತಿ ನೀಡಲಾಗಿದ್ದು, ಇನ್ನುಳಿದಂತೆ ವಿಶ್ವಕಪ್ ತಂಡದಲ್ಲಿ ಆಡಿದ ಆಟಗಾರರೇ ಭಾರತ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ದಾಖಲೆಯ ಹೊಸ್ತಿಲಲ್ಲಿ ಗೇಲ್: ಕೆರಿಬಿಯನ್ ಸ್ಫೋಟಕ ಬ್ಯಾಟ್ಸ್’ಮನ್ ಗೇಲ್ ಪ್ರಸ್ತುತ ಏಕದಿನ ಕ್ರಿಕೆಟ್’ನಲ್ಲಿ 10,338 ರನ್ ಬಾರಿಸಿದ್ದು, ಇನ್ನು ಕೇವಲ 11 ರನ್ ಬಾರಿಸಿದರೆ, ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯನ್ ಲಾರಾ ದಾಖಲೆ ಬ್ರೇಕ್ ಮಾಡಲಿದ್ದಾರೆ. ವೆಸ್ಟ್ ಇಂಡೀಸ್ ಪರ ಗರಿಷ್ಠ ರನ್ ಬಾರಿಸಿದ ದಾಖಲೆ [10,348] ಲಾರಾ ಹೆಸರಿನಲ್ಲಿದೆ. ಈ ದಾಖಲೆ ಅಳಿಸಿಹಾಕುವ ಸನೀಹದಲ್ಲಿದ್ದಾರೆ ಕ್ರಿಸ್ಟೋಪರ್ ಹೆನ್ರಿ ಗೇಲ್.
ಇನ್ನು ಗೇಲ್ 13 ರನ್ ಬಾರಿಸಿದರೆ ಮತ್ತೆ ಬ್ರಿಯಾನ್ ಲಾರಾ ಅವರ ಮತ್ತೊಂದು ದಾಖಲೆ ಅಳಿಸಿ ಹಾಕಲಿದ್ದಾರೆ. ಹೌದು. ಒಟ್ಟಾರೆ ಏಕದಿನ ಕ್ರಿಕೆಟ್’ನಲ್ಲಿ ಗೇಲ್ 10,393 ರನ್ ಬಾರಿಸಿದ್ದು, ಇನ್ನು ಕೇವಲ 13 ರನ್ ಬಾರಿಸಿದರೆ, ಲಾರಾ[10,405] ಅವರನ್ನು ಹಿಂದಿಕ್ಕಿ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ವಿಂಡೀಸ್ ಬ್ಯಾಟ್ಸ್’ಮನ್ ಎನ್ನುವ ಶ್ರೇಯ ಗೇಲ್ ಪಾಲಾಗಲಿದೆ.
ತಂಡ: ಹೋಲ್ಡರ್ (ನಾಯಕ), ಗೇಲ್, ಕ್ಯಾಂಬೆಲ್, ಲೆವಿಸ್, ಹೆಟ್ಮೇಯರ್, ಪೂರನ್, ಚೇಸ್, ಆ್ಯಲನ್, ಬ್ರಾಥ್‌ವೇಟ್, ಪೌಲ್, ಕಾಟ್ರೆಲ್, ಥಾಮಸ್, ಹೋಪ್, ರೋಚ್.