ವಿಶ್ವ ಅಥ್ಲೆಟಿಕ್ಸ್‌ ಕೂಟ: ಅನ್ನು ರಾಣಿ ಫೈನಲ್‌ಗೆ

Published : Oct 01, 2019, 10:56 AM IST
ವಿಶ್ವ ಅಥ್ಲೆಟಿಕ್ಸ್‌ ಕೂಟ: ಅನ್ನು ರಾಣಿ ಫೈನಲ್‌ಗೆ

ಸಾರಾಂಶ

ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ನಿರೀಕ್ಷೆ ಹೆಚ್ಚಾಗಿದೆ. ಜಾವಲಿನ್‌ನಲ್ಲಿ ಅನ್ನು ರಾಣಿ ಫೈನಲ್‍‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.  

ದೋಹಾ(ಕತಾರ್)ಅ.01):  ವಿಶ್ವ ಅಥ್ಲೆಟಿಕ್ಸ್‌ ಕೂಟದ ಮಹಿಳೆಯರ ಜಾವೆಲಿನ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಪಡೆದ ಅನ್ನು ರಾಣಿ ಫೈನಲ್‌ ಪ್ರವೇ​ಶಿ​ಸಿ​ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಜಾವೆಲಿನ್‌ ಪಟು ಎನ್ನುವ ಹೆಗ್ಗಳಿಕೆಗೆ ಅನ್ನು ರಾಣಿ ಪಾತ್ರರಾಗಿದ್ದಾರೆ. 

ಇದನ್ನೂ ಓದಿ: ಗುಡ್ ನ್ಯೂಸ್ ! 2020 ಒಲಿಂಪಿಕ್ಸ್‌ಗೆ ಭಾರತ ರಿಲೇ ತಂಡ!

62.43 ಮೀ. ದೂರ ಎಸೆಯುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿ​ದಿ​ದ್ದಾರೆ. ಮಹಿ​ಳೆ​ಯರ ಅರ್ಹತಾ ಸುತ್ತಿ​ನಲ್ಲಿ 62.43 ಮೀ. ದೂರ ಜಾವೆ​ಲಿನ್‌ ಎಸೆ​ದು ರಾಷ್ಟ್ರೀಯ ದಾಖಲೆ ಬರೆ​ದರು. ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಸೋಮ​ವಾರ ತಮ್ಮ 2ನೇ ಪ್ರಯ​ತ್ನ​ದಲ್ಲಿ ಅನ್ನು ದಾಖಲೆ ಬರೆ​ದಿ​ದ್ದರು. 

ಇದನ್ನೂ ಓದಿ: ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಓಡಲು ರೆಡಿಯಾದ ದ್ಯುತಿ ಚಾಂದ್‌

ಮೊದಲ ಯತ್ನ​ದಲ್ಲಿ 57.05 ಮೀ. ಎಸೆ​ದ​ರೆ, 2ನೇ ಯತ್ನ​ದಲ್ಲಿ ಸುಧಾ​ರಿ​ಸಿ​ದರು. 3ನೇ ಪ್ರಯ​ತ್ನ​ದಲ್ಲಿ ಮತ್ತೆ 60.5 ಮೀ. ದೂರ ಎಸೆ​ದಿ​ದ್ದ​ರು. ಈ ಹಿಂದಿನ ರಾಷ್ಟ್ರೀಯ ದಾಖ​ಲೆ​ 62.34 ಮೀ. ಆ​ಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ