ದುರಾಡಳಿತ ವಿರುದ್ಧ ಬ್ಯಾಟ್ ಬೀಸಿ! ರಾಜಕೀಯ ಆಯ್ತು, ಕ್ರಿಕೆಟ್‌ಗೂ ಚುನಾವಣೆ ಬಿಸಿ

By Web DeskFirst Published Sep 30, 2019, 7:16 PM IST
Highlights

KSCA ಚುನಾವಣೆಗೆ ಇನ್ನೆರಡೇ ದಿನಗಳು ಬಾಕಿ ಉಳಿದಿವೆ. ಇದರ ಬೆನ್ನಲ್ಲೇ ಎಂ.ಎಂ ಹರೀಶ್ ಬಣ ಪ್ರಸ್ತುತ ಆಡಳಿತ ಮಂಡಳಿಯ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ. ಅಲ್ಲದೇ ತಮ್ಮ ನೇತೃತ್ವದ ಸಮಿತಿ ಆಯ್ಕೆಯಾದರೆ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ನೀಡುವ ಭರವಸೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹರೀಶ್ ಹೇಳಿದ್ದೇನು..? ಇಲ್ಲಿದೆ ವರದಿ... 

ವಾಯುಸೇನೆ ಮುಖ್ಯಸ್ಥರಾಗಿ ಬದೌರಿಯಾ, ಅನರ್ಹರಿಗೆ ಮಣೆ ಎಂದ BSY: ಸೆ.30ರ ಟಾಪ್ ಸುದ್ದಿ!

ಬೆಂಗಳೂರು[ಸೆ.30]: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣಾ ಕಣ ರಂಗೇರುತ್ತಿದ್ದು, ಅಕ್ಟೋಬರ್ 03ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ಯಾಪ್ಟನ್ ಎಂ.ಎಂ. ಹರೀಶ್ ಬಣ ಸ್ಪರ್ಧಿಸುತ್ತಿದೆ. 

ಪ್ರಸ್ತುತ ಆಡಳಿತ ಸಮಿತಿಯು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದಕ್ಕೆ ಪೂರ್ಣ ವಿರಾಮ ನೀಡುವ ವಿಶ್ವಾಸವಿದೆ ಎಂದು ಸ್ವಚ್ಚ ಕ್ರಿಕೆಟ್ ವೇದಿಕೆ ವಿಶ್ವಾಸ ವ್ಯಕ್ತಪಡಿಸಿದೆ.

KSCAಗೆ ಬಿನ್ನಿ ಅಧ್ಯಕ್ಷ..?

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಹರೀಶ್, ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಪ್ರಸ್ತುತ ಆಡಳಿತ ಸಮಿತಿ ತುಟಿ ಬಿಚ್ಚುತ್ತಿಲ್ಲ ಎಂದು ಟೀಕಿಸಿದರು.

ಇದಷ್ಟೇ ಅಲ್ಲದೇ ಕ್ರಿಕೆಟ್ ಅಭಿವೃದ್ದಿಗೆ ಬಳಸಬೇಕಾದ ಹಣವನ್ನು ಪ್ರಸ್ತುತ ಆಡಳಿತ ಸಮಿತಿ ದುರ್ಬಳಕೆ ಮಾಡಿದೆ ಎಂದು ಆರೋಪಿಸಿದ ಅವರು, ತಮ್ಮ ನೇತೃತ್ವದ ಬಣ ಅಧಿಕಾರದ ಚುಕ್ಕಾಣಿ ಹಿಡಿದರೆ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಆಶ್ವಾಸನೆ ನೀಡಿದರು.

BCCI ಚುನಾ​ವಣೆ: ಕೆಎಸ್‌ಸಿಎಗೆ ಮತ ಹಕ್ಕು

KSCA ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿರುವ ಹರೀಶ್, ಕೆಡುಕಿನ ಮೇಲೆ ಒಳಿತಿನ ದಿಗ್ವಿಜಯದ ಸಂಕೇತವೇ ದಸರಾ. ಮುಂಬರುವ ದಿನಗಳಲ್ಲಿ KSCAಯ ದುರಾಡಳಿತಕ್ಕೆ ಅಂತ್ಯ ಹಾಡಿ, ಸ್ವಚ್ಚ ಹಾಗೂ ಪಾರದರ್ಶಕ ದಿನಗಳು ಬರುವ ವಿಶ್ವಾಸ ವ್ಯಕ್ತಪಡಿಸಿದರು.
 
ಇನ್ನೊಂದು ಕಡೆ ಹರೀಶ್ ಪ್ರತಿಸ್ಫರ್ಧಿಯಾಗಿ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ, ಮಾಜಿ ಆಲ್ರೌಂಡರ್ ರೋಜರ್ ಬಿನ್ನಿ KSCA ಅಧ್ಯಕ್ಷ ಹುದ್ದೆಗೆ ಚುನಾವಣಾ ಕಣದಲ್ಲಿದ್ದಾರೆ. 

KSCA ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು (ಸೋಮವಾರ) ಮೂರು ಗಂಟೆವರೆಗೂ ಅವಕಾಶ ನೀಡಲಾಗಿತ್ತು. ಒಟ್ಟು 36 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರ ಹಿಂಪಡೆಯಲು ನಾಳೆ (ಮಂಗಳವಾರ) ಬೆಳಗ್ಗೆ 11ರಿಂದ 1 ಗಂಟೆವರೆಗೆ ಅವಕಾಶ ನೀಡಲಾಗಿದೆ.  ಮಧ್ಯಾಹ್ನ 1ಗಂಟೆಗೆ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ.

click me!