
Stale Solbakken 7 minutes clinically dead: 2026ರ ವಿಶ್ವಕಪ್‌ನಲ್ಲಿ ನಾರ್ವೆ ಟೀಂ Dark horse ಹಂತದಿಂದ ದಾಟಿ, ಪ್ರಶಸ್ತಿಯನ್ನು ಗೆಲ್ಲುವ ಟೀಂನಲ್ಲಿ ಒಂದಾಗಿತ್ತು. 28 ವರ್ಷಗಳಿಂದ ಈ ಸ್ಟೇಜ್‌ನಿಂದ ದೂರವಿದ್ದ ಸ್ಕ್ಯಾಂಡಿನೇವಿಯನ್ ದೇಶವು ಇಟಲಿ ಒಳಗೊಂಡಿದ್ದ ಕ್ವಾಲಿಫೈಯರ್ ಟೀಂನಲ್ಲಿ ತನ್ನ ಎಲ್ಲ 8 ಪಂದ್ಯಗಳನ್ನೂ ಗೆದ್ದು ಬೀಗಿದೆ. ಇಡೀ ಯುರೋಪ್ ಖಂಡದಲ್ಲೇ ಅತಿ ಹೆಚ್ಚು ಅಂದರೆ 37 ಗೋಲುಗಳನ್ನು ಬಾರಿಸಿದೆ.
ಈ ತಂಡದಲ್ಲಿ ಅಪಾಯಕಾರಿ ಸ್ಟ್ರೈಕರ್ ಎನಿಸಿಕೊಂಡಿರುವ ಅರ್ಲಿಂಗ್ ಹಾಲೆಂಡ್ (Erling Haaland) ಇದ್ದಾರೆ. ಕ್ವಾಲಿಫೈಯರ್ ಹಂತದಲ್ಲಿ 16 ಗೋಲುಗಳನ್ನು ಬಾರಿಸಿದ್ದಾರೆ. ಈ ತಂಡಕ್ಕೆ Ståle Solbakken ಮುಖ್ಯ ತರಬೇತುದಾರರು. 2001ರಲ್ಲಿ 58 ವರ್ಷದ ಸೋಲ್‌ಬಾಕನ್ ಅವರು ಎಫ್‌ಸಿ ಕೋಪನ್‌ಹೇಗನ್ ಕ್ಲಬ್ ಪರ ಆಡುತ್ತಿದ್ದಾಗ 'ಸಾವಿನ ಅನುಭವ' ಪಡೆದಿದ್ದರು.
ಡ್ಯಾನಿಶ್ ಕ್ಲಬ್ ಪರ ತರಬೇತಿಯಲ್ಲಿದ್ದರು. ಆಗ ದಿಢೀರನೆ ಮೈದಾನದಲ್ಲಿ ಕುಸಿದು ಬಿದ್ದರು. ಅವರಿಗೆ ಆಗ ತೀವ್ರ ಹೃದಯಾಘಾತವಾಗಿತ್ತು. ಅವರ ಹೃದಯ ಬಡಿತ ಸಂಪೂರ್ಣವಾಗಿ ನಿಂತುಹೋಗಿತ್ತು. ಕ್ಲಬ್‌ನ ವೈದ್ಯ ಫ್ರಾಂಕ್ ಒಡ್ಗಾರ್ಡ್ ಅಲ್ಲೇ ಇದ್ದರು. ಆಮೇಲೆ ಸೋಲ್‌ಬಾಕನ್ ಅವರ ಮೆದುಳಿಗೆ ಆಮ್ಲಜನಕದ ಸರಬರಾಜು ನಿಲ್ಲದಂತೆ ಸಿಪಿಆರ್ (CPR) ಚಿಕಿತ್ಸೆ ನೀಡಿದ್ದರು. ಆಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋದರು, ಆಮೇಲೆ ಆಂಬುಲೆನ್ಸ್‌ನಲ್ಲಿ ಶಾಕ್ ನೀಡುವ ಮೂಲಕ ಹೃದಯ ಮತ್ತೆ ಬಡಿಯುವಂತೆ ಮಾಡುತ್ತಿದ್ದರು. ಒಟ್ಟಿನಲ್ಲಿ ವೈದ್ಯಕೀಯ ಭಾಷೆಯಲ್ಲಿ ಹೇಳುವಂತೆ ಅವರು 7 ನಿಮಿಷಗಳ ಕಾಲ ತೀರಿಕೊಂಡಿದ್ದರಂತೆ.
ನಂತರ ಸೋಲ್‌ಬಾಕನ್ ಅವರ ಹೃದಯಕ್ಕೆ ಪೇಸ್‌ಮೇಕರ್ (Pacemaker) ಅಳವಡಿಸಲಾಯಿತು. ಫುಟ್‌ಬಾಲ್ ಆಟ ಮುಂದುವರೆಸೋದು ಕಷ್ಟ ಎಂದು ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.