IND vs ZIM : ಹೊಸ ಕೋಚ್ ನೇಮಕ.. ಪಂದ್ಯ ಸೋತರೆ ಗಂಭೀರ್‌ಗೆ ಬೈಯುವಂತಿಲ್ಲ!

Published : Jul 12, 2026, 01:47 PM IST
Team India

ಸಾರಾಂಶ

ಟೀಂ ಇಂಡಿಯಾಗೆ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಆದರೆ ತಂಡದ ಮುಖ್ಯಕೋಚ್ ಗೌತಮ್ ಗಂಭೀರ್ ಅವರು ಪ್ರವಾಸದ ಭಾಗವಾಗಿರುವುದಿಲ್ಲ. ಅವರ ಬದಲಿಗೆ ಬಿಸಿಸಿಐ ಬೇರೆ ಕೋಚ್ ರೆಡಿ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಸತತ ಸರಣಿ ಸೋಲುಗಳ ಮಧ್ಯೆ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸಕ್ಕೆ ರೆಡಿ ಆಗ್ತಿದೆ. ಈ ಪ್ರವಾಸದ ಆರಂಭಕ್ಕೂ ಮುನ್ನವೇ ತಂಡಕ್ಕೆ ದೊಡ್ಡ ಆಘಾತ ಆಗಿದೆ. ಗಾಯದ ಸಮಸ್ಯೆಯಿಂದ ಇಬ್ಬರು ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ.

ಹೊಸ ಕೋಚ್ ಸಾರಥ್ಯ

ಅಂದ್ಹಾಗೆ ಈ ಟಿ20 ಸರಣಿಗೆ ಟೀಂ ಇಂಡಿಯಾದ ಖಾಯಂ ಹೆಡ್‌ ಕೋಚ್ ಗೌತಮ್ ಗಂಭೀರ್ ಅವರು ಲಭ್ಯವಿರುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ (VVS Laxman) ತಂಡದ ತಾತ್ಕಾಲಿಕ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಒಂದು ವೇಳೆ ಜಿಂಬಾಬ್ವೆ ವಿರುದ್ಧ ಭಾರತ ತಂಡ ಸೋತರೂ ಅದರ ಹೊಣೆಗಾರಿಕೆಯನ್ನು ಗಂಭೀರ್ ಮೇಲೆ ಹಾಕುವಂತಿಲ್ಲ! ಇದು ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಯುವ ಪಡೆಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇರುವ ದೊಡ್ಡ ಸವಾಲಾಗಿದೆ.

ಇಬ್ಬರು ಆಟಗಾರರು ಔಟ್, ರವಿ ಬಿಷ್ಣೋಯಿಗೆ ಲಕ್ಕಿ ಚಾನ್ಸ್

ಮೊಣಕಾಲಿನ ಸ್ನಾಯು ಸೆಳೆತದ (Hamstring Injury) ಸಮಸ್ಯೆಯಿಂದಾಗಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗಿ ಹರ್ಷಿತ್ ರಾಣಾ ಈ ಸರಣಿಯಿಂದ ಹೊರಬಿದ್ದಿದ್ದಾರೆ. ವರುಣ್ ಚಕ್ರವರ್ತಿ ಅವರ ಸ್ಥಾನಕ್ಕೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ಆಯ್ಕೆ ಮಾಡಲಾಗಿದೆ. ಜುಲೈ 9 ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಬಿಸಿಸಿಐ ಈ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಒಂದು ಕಾಲದಲ್ಲಿ ಯುಜ್ವೇಂದ್ರ ಚಹಲ್‌ಗೆ ಪೈಪೋಟಿ ನೀಡುತ್ತಿದ್ದ ರವಿ ಬಿಷ್ಣೋಯಿ ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಳೆದುಕೊಂಡು ಪರದಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ಅವರು 4 ಓವರ್‌ಗಳಲ್ಲಿ ಬರೋಬ್ಬರಿ 60 ರನ್ ನೀಡಿ ದುಬಾರಿಯಾಗಿದ್ದರು. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಕುಲದೀಪ್ ಯಾದವ್ ಕೇವಲ ಏಕದಿನ ಕ್ರಿಕೆಟ್‌ಗೆ ಸೀಮಿತವಾಗಿರುವುದರಿಂದ, ಟಿ20ಯಲ್ಲಿ ವರುಣ್ ಚಕ್ರವರ್ತಿ ಅನುಪಸ್ಥಿತಿಯಲ್ಲಿ ಬಿಷ್ಣೋಯಿ ತಮಗೆ ಸಿಕ್ಕ ಈ ಅವಕಾಶವನ್ನು ಬಳಸಿಕೊಳ್ಳಲೇಬೇಕಿದೆ. ಇದು ಅವರ ಕೆರಿಯರ್ ಪಾಲಿಗೆ ಅತ್ಯಂತ ನಿರ್ಣಾಯಕ ಪ್ರವಾಸವಾಗಲಿದೆ.

ಟೀಂ ಇಂಡಿಯಾ: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೇಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮ, ಮಾಯಾಂಕ್ ಯಾದವ್, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್).

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಏನೂ ಹೇಳದೇ 'ಕ್ಯಾಪ್ಟನ್' ಟಿ-ಶರ್ಟ್ ಧರಿಸಿ ಅಗರ್ಕರ್-ಗಂಭೀರ್‌ರನ್ನು ಟ್ರೋಲ್ ಮಾಡಿದ ಸೂರ್ಯಕುಮಾರ್ ಯಾದವ್!
IND vs ENG 5th T20 Highlights: 0-4 ಅಂತರದ ಹೀನಾಯ ಸೋಲು, ಕೋಚ್ ಗಂಭೀರ್‌ಗೆ ಶಿಕ್ಷೆ ಯಾವಾಗ?