ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿ​ಯನ್‌

Published : Sep 05, 2019, 12:42 PM IST
ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿ​ಯನ್‌

ಸಾರಾಂಶ

73ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೋಪಾಲ್‌ನಲ್ಲಿ ನಡೆದ ಕೂಟದಲ್ಲಿ ಕರ್ನಾಟಕ ತಂಡ ಪುರುಷರ ವಿಭಾಗದಲ್ಲಿ 12 ಚಿನ್ನ, 3 ಬೆಳ್ಳಿ, 5 ಕಂಚು ಹಾಗೂ ಮಹಿಳಾ ವಿಭಾಗದಲ್ಲಿ 2 ಚಿನ್ನ, 9 ಬೆಳ್ಳಿ ಮತ್ತು 5 ಕಂಚು ಜಯಿಸಿದೆ.

ಭೋಪಾಲ್‌(ಸೆ.05): ತಾರಾ ಈಜುಪಟು ಶ್ರೀಹರಿ ನಟರಾಜ್‌, ಇಲ್ಲಿ ಬುಧವಾರ ಮುಕ್ತಾಯವಾದ 73ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನ 100 ಮೀ. ಬ್ಯಾಕ್‌ ಸ್ಟ್ರೋಕ್‌ನಲ್ಲಿ ಕೂಟ ದಾಖಲೆ ನಿರ್ಮಿಸಿದರು. ಕೂಟದಲ್ಲಿ ಶ್ರೀಹರಿ ಒಟ್ಟಾರೆ 3 ವೈಯಕ್ತಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. 

ಉಕ್ಕಿಹರಿಯುವ ಕೃಷ್ಣಾದಲ್ಲಿ ಯುವಕರಿಂದ ಈಜು ಸ್ಪರ್ಧೆ!

ಕರ್ನಾಟಕ ತಂಡ ಪುರುಷರ ವಿಭಾಗದಲ್ಲಿ 12 ಚಿನ್ನ, 3 ಬೆಳ್ಳಿ, 5 ಕಂಚು ಹಾಗೂ ಮಹಿಳಾ ವಿಭಾಗದಲ್ಲಿ 2 ಚಿನ್ನ, 9 ಬೆಳ್ಳಿ ಮತ್ತು 5 ಕಂಚು ಜಯಿಸಿದೆ. ಒಟ್ಟಾರೆ 14 ಚಿನ್ನ, 12 ಬೆಳ್ಳಿ, 10 ಕಂಚಿನೊಂದಿಗೆ 36 ಪದಕ ಗೆದ್ದ ರಾಜ್ಯ ತಂಡ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 27ನೇ ಬಾರಿ ಕರ್ನಾಟಕ ತಂಡ ಸಮಗ್ರ ಪ್ರಶಸ್ತಿ ಬಾಚಿಕೊಂಡು ದಾಖಲೆ ಬರೆ​ಯಿ​ತು.

ಏಷ್ಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್; ಬೆಂಗಳೂರಲ್ಲಿ ಲೋಗೋ ಅನಾವರಣ!

ಕೂಟದ ಕೊನೆ ದಿನವಾದ ಬುಧ​ವಾರ ಶ್ರೀಹರಿ ಪುರುಷರ 100 ಮೀ. ಬ್ಯಾಕ್‌ ಸ್ಟ್ರೋಕ್‌ನಲ್ಲಿ 55.63ಸೆ.ಗಳಲ್ಲಿ ಗುರಿ ತಲುಪಿ ಚಿನ್ನದೊಂದಿಗೆ ದಾಖಲೆ ನಿರ್ಮಿಸಿದರು. ರಕ್ಷಿತ್‌ ಶೆಟ್ಟಿ58.89 ಸೆ.ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು. 200 ಮೀ. ಬಟರ್‌ಫ್ಲೈನಲ್ಲಿ ತನೀಶ್‌ ಜಾಜ್‌ರ್‍ 2 ನಿಮಿಷ 04.23 ಸೆ.ಗಳಲ್ಲಿ ಗುರಿ ಮುಟ್ಟಿಕಂಚು ಗೆದ್ದರು. 100 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಲಿಖಿತ್‌ ಎಸ್‌.ಪಿ ಚಿನ್ನ ಗೆದ್ದರು. 

ಮಹಿಳೆಯರ 200 ಮೀ. ಬಟರ್‌ಫ್ಲೈನಲ್ಲಿ ಅನ್ವೇಷಾ ಗಿರೀಶ್‌ 2 ನಿಮಿಷ 25.43 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. 100 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ರಿದಿಮಾ 1 ನಿಮಿಷ 07.19 ಸೆ. ಹಾಗೂ ಸುವನಾ 1 ನಿಮಿಷ 07.22 ಸೆ.ಗಳಲ್ಲಿ ಗುರಿ ಮುಟ್ಟಿ ಕ್ರಮವಾಗಿ ಚಿನ್ನ, ಬೆಳ್ಳಿ ಜಯಿಸಿದರು. 100 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಸಲೋನಿ ದಲಾಲ್‌ ಬೆಳ್ಳಿ ಗೆದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯನ್ ಗೇಮ್ಸ್‌ 2026: ಭಾರತಕ್ಕೆ ಬೆಳ್ಳಿ-ಕಂಚಿನ ಹರಿವು, ಬಂಗಾರಕ್ಕೆ ಬರ..! ಐತಿಹಾಸಿಕ ಪದಕ ಗೆದ್ದ ಮೀರಾಬಾಯಿ ಚಾನು
Rowing Star Salman khan: ಅಂದು ಉಬರ್ ಕ್ಯಾಬ್ ಚಾಲಕ, ಇಂದು ಏಷ್ಯನ್ ಗೇಮ್ಸ್ ಪದಕ ವಿಜೇತ! ಯಾರು ಈ ಸಲ್ಮಾನ್ ಖಾನ್?