ಭಾರತ ’ಎ’ ಹಾಗೂ ದಕ್ಷಿಣ ಆಫ್ರಿಕಾ ’ಎ’ ನಡುವಿನ ನಾಲ್ಕನೇ ಅನಧಿಕೃತ ಏಕದಿನ ಪಂದ್ಯ ಮಳೆಯಿಂದಾಗಿ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ. ಶಿಖರ್ ಧವನ್ ಅಜೇಯ 33 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ತಿರುವನಂತಪುರಂ(ಸೆ.05): ಭಾರತ ‘ಎ’ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ‘ಎ’ ನಡುವಿನ 4ನೇ ಅನಧಿಕೃತ ಏಕದಿನಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ಮೀಸಲು ದಿನವಾದ ಗುರುವಾರಕ್ಕೆ ಮುಂದೂಡಲಾಗಿದೆ.
ಮಳೆಯಿಂದಾಗಿ ಪಂದ್ಯವನ್ನು ತಲಾ 25 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ‘ಎ’ 25 ಓವರಲ್ಲಿ 1 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಿತು. ಆಫ್ರಿಕಾ ಪರ ರೀಝಾ ಹೆಂಡ್ರಿಕ್ಸ್ 60, ಮ್ಯಾಥ್ಯೂ ಬ್ರೀಸ್ಕೆ 25 ಹಾಗೂ ಹೆನ್ರಿಚ್ ಕ್ಲಾಸೆನ್ ಅಜೇಯ 21 ರನ್ ಗಳಿಸಿದರು.
undefined
ಅನಧಿಕೃತ ಏಕದಿನ: ಭಾರತ ‘ಎ’ಗೆ 2 ವಿಕೆಟ್ ಜಯ
ವಿಜೆಡಿ ನಿಯಮದನ್ವಯ ಭಾರತಕ್ಕೆ 25 ಓವರಲ್ಲಿ 193 ರನ್ ಗುರಿ ನೀಡಲಾಗಿದ್ದು, ಮಳೆಯಿಂದ ಆಟ ನಿಂತಾಗ ಭಾರತ 7.4 ಓವರಲ್ಲಿ 1 ವಿಕೆಟ್‌ಗೆ 56 ರನ್ ಗಳಿಸಿತ್ತು. ಶುಭ್’ಮನ್ ಗಿಲ್ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಭಾರತ ’ಎ’ ಪರ ಕಣಕ್ಕಿಳಿಯಲು ರೆಡಿಯಾದ ಶಿಖರ್ ಧವನ್
ಗುರುವಾರ 17.2 ಓವರಲ್ಲಿ ಭಾರತ ‘ಎ’ 137 ರನ್ ಗಳಿಸಬೇಕಿದೆ. ಶಿಖರ್ ಧವನ್ 33 ಹಾಗೂ ಪ್ರಶಾಂತ್ ಚೋಪ್ರಾ 6 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸರಣಿಯಲ್ಲಿ ಭಾರತ 3-0 ಮುನ್ನಡೆಯಲ್ಲಿದೆ.