ಫ್ಯಾನ್ಸ್ ಪ್ರಶ್ನೆಗೆ ರೋಹಿತ್ ಶರ್ಮಾ ಉತ್ತರ- ನಿಕ್ ನೇಮ್ ಸೀಕ್ರೆಟ್ ಬಹಿರಂಗ!

Published : May 17, 2019, 04:35 PM IST
ಫ್ಯಾನ್ಸ್ ಪ್ರಶ್ನೆಗೆ ರೋಹಿತ್ ಶರ್ಮಾ ಉತ್ತರ- ನಿಕ್ ನೇಮ್ ಸೀಕ್ರೆಟ್ ಬಹಿರಂಗ!

ಸಾರಾಂಶ

ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇದೀಗ ಅಭಿಮಾನಿಗಳ ಪ್ರಶ್ನೆಗೆ ವಿವರವಾದ ಉತ್ತರ ನೀಡಿ ಗಮನಸೆಳೆದಿದ್ದಾರೆ. ಈ ವೇಳೆ ರೋಹಿತ್ ಶರ್ಮಾ, ತಮ್ಮ ಹಿಟ್ ಮ್ಯಾಟ್ ಹೆಸರಿನ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ. 

ಮುಂಬೈ(ಮೇ.17): ಐಪಿಎಲ್ ಟೂರ್ನಿ ಮುಗಿಸಿರು ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ಇದೀಗ ವಿಶ್ವಕಪ್ ತಯಾರಿ ಆರಂಭಿಸಿದ್ದಾರೆ. ಇದರ ನಡುವೆ ರೋಹಿತ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಈ ವೇಳೆ ರೋಹಿತ್ ನೆಚ್ಚಿನ ತಿನಿಸು ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳುಕು ಚೆಲ್ಲಿದ್ದಾರೆ.

ಇದನ್ನೂ ಓದಿ: ನಿವೃತ್ತಿ ಸದ್ಯಕ್ಕಿಲ್ಲ, ಮುಂದಿನ IPLನಲ್ಲಿ ಕಣಕ್ಕೆ- CSK ಹಿರಿಯ ಕ್ರಿಕೆಟಿಗನ ಸ್ಪಷ್ಟನೆ!

ಅಭಿಯಾನಿ ಕೇಳಿದ ನಿಕ್ ನೇಮ್ ಪ್ರಶ್ನೆಗೆ ರೋಹಿತ್ ವಿವರವಾಗಿ ಉತ್ತರಿಸಿದ್ದಾರೆ. ಇಂಗ್ಲೀಷ್‌ನಲ್ಲಿ ರೋಹಿತ್ ಹೆಸರಿನ ಅಂತ್ಯದಲ್ಲಿ ಹಿಟ್ ಅನ್ನೋ ಸ್ಪೆಲ್ಲಿಂಗ್ ಹಿಟ್‌ಮ್ಯಾನ್ ಅನ್ನೋ ನಿಕ್ ನೇಮ್ ಬರಲು ಕಾರಣ ಎಂದಿದ್ದಾರೆ. 2013ರಲ್ಲಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಸಿಬ್ಬಂದಿ ಮೊದಲ ಬಾರಿಗೆ ಹಿಟ್‌ಮ್ಯಾನ್ ಎಂದು ಕರೆದಿದ್ದಾರೆ. ಬಳಿಕ ಎಲ್ಲಾ ವೀಕ್ಷಕ ವಿವರಣೆಗಾರರಿಂದ ಮಾಧ್ಯಮಗಳು ಹಿಟ್‌ಮ್ಯಾನ್ ಹೆಸರು ಪ್ರಖ್ಯಾತಿ ಪಡೆಯಿತು ಎಂದಿದ್ದಾರೆ.

 

 

ಇದನ್ನೂ ಓದಿ: CSK, ಧೋನಿ ಅಭಿಮಾನಿಗಳ ಪಾಲಿಗಿದು ಸಿಹಿಸುದ್ದಿ..!

ಇದೇ ವೇಳೆ ರೋಹಿತ್ ತಮಗೆ ತೆಲುಗು ಭಾಷೆ ಅರ್ಥವಾಗುತ್ತೆ. ಕೆಲ ಪದಗಳನ್ನು ಮಾತನಾಡುತ್ತೇನೆ ಎಂದಿದ್ದಾರೆ. ಕಾರಣ ರೋಹಿತ್ ತಾಯಿ ಪೂರ್ಣಿಮಾ ಶರ್ಮಾ ವಿಶಾಕಪಟ್ಟಣಂ ಮೂಲದವರಾಗಿದ್ದಾರೆ. ಅಭಿಮಾನಿಗಳ ಪ್ರಶ್ನೆಯಲ್ಲಿ ರೋಹಿತ್ ಹಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ಲುಕ್‌ನಲ್ಲಿ ವಿರಾಟ್ ಕೊಹ್ಲಿ, ಪಾಸ್ಟೆಲ್ ಹೇರ್‌ಸ್ಟೈಲ್‌ನಲ್ಲಿ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡ ಕ್ರಿಕೆಟರ್
ಮುಂಬೈನ ಅತ್ಯಂತ ದುಬಾರಿ ಏರಿಯಾದಲ್ಲಿ ಶ್ರೇಯಸ್ ಅಯ್ಯರ್ ಹೊಸ ಮನೆ: ತಿಂಗಳ ಬಾಡಿಗೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ