
ಮುಂಬೈ(ಮೇ.17): ತಮ್ಮ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿಗೆ ಸಚಿನ್ ತೆಂಡುಲ್ಕರ್ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಮಾಷೆಯಾಗಿ ಪ್ರತಿಕ್ರಿಯಿಸಿತ್ತು.
ನೋ ಬಾಲ್ ಪಜೀತಿ- ಸಚಿನ್ ತೆಂಡುಲ್ಕರ್ ಕಾಲೆಳೆದ ಐಸಿಸಿ
‘ನಿಮ್ಮ ಹೆಜ್ಜೆ ನೋಡಿಕೊಳ್ಳಿ, ನೋಬಾಲ್ ಎಸೆದಿದ್ದೀರಿ’ ಎಂದು ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಫೋಟೋ ಹಾಕಿ ಐಸಿಸಿ ಸಚಿನ್ ಕಾಲೆಳೆದಿತ್ತು. ಇದಕ್ಕೆ ಉತ್ತರಿಸಿರುವ ಸಚಿನ್, ‘ಈ ಬಾರಿ ನಾನು ಬೌಲ್ ಮಾಡುತ್ತಿದ್ದೇನೆ, ಅಂಪೈರ್ ನಿರ್ಧಾರ ಯಾವಾಗಲೂ ಅಂತಿಮವೇ?’ ಎಂದಿದ್ದಾರೆ.'
24 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ತೆಂಡುಲ್ಕರ್ 34,357 ರನ್ ಬಾರಿಸಿದ್ದಾರೆ. ತಮ್ಮ 16 ವಯಸ್ಸಿನಲ್ಲಿ 1989 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದ ಸಚಿನ್ ಟೆಸ್ಟ್(15,921) ಹಾಗೂ ಏಕದಿನ()18,426 ಕ್ರಿಕೆಟ್'ನಲ್ಲಿ ಗರಿಷ್ಠ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.