ಪ್ರಧಾನಿ ಮೋದಿ ಕನಸು; ಮೊಟೆರಾ ಕ್ರೀಡಾಂಗಣಕ್ಕೆ ಹೊಸ ರೂಪ!

By Web DeskFirst Published Aug 31, 2019, 3:54 PM IST
Highlights

ಗುಜರಾತ್‌ನ ಮೊಟೆರಾ ಕ್ರೀಡಾಂಗಣ ಇದೀಗ ನವೀಕರಣವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ನೂತನ ಕ್ರೀಡಾಂಗಣ ನವೀಕರಣಗೊಳ್ಳುತ್ತಿದೆ.  50 ಸಾವರಿ ಸಾಮರ್ಥ್ಯದಿಂದ ಇದೀಗ 1.10 ಲಕ್ಷ ಸಾಮರ್ಥ್ಯಕ್ಕೆ ಆಸನ ವ್ಯವಸ್ಥೆ ಹೆಚ್ಚಿಸಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ಅಹಮ್ಮದಾಬಾದ್(ಆ.31): ಗುಜರಾತ್‌ನಲ್ಲಿರುವ ಮೊಟೆರಾ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ನವೀಕರಣ ಕಾರ್ಯಗಳು ಭರದಿಂದ ಸಾಗಿದೆ. ಸುಸಜ್ಜಿತ ಕ್ರೀಡಾಂಗಣ ಡಿಸೆಂಬರ್ 2019 ಅಥವಾ 2020ರ ಆರಂಭದಲ್ಲಿ ಉದ್ಘಾಟನೆಗಳೊಳ್ಳಲಿದೆ. ವಿಶೇಷ ಅಂದರೆ ಈ ಕ್ರೀಡಾಂಗಣಕ್ಕೆ ಹೊಸ ರೂಪ ನೀಡಲು ಮಹತ್ವದ ಯೋಜನೆ ಸಿದ್ದಪಡಿಸಿದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸತತ ಪ್ರಯತ್ನವಿದೆ.

ಇದನ್ನೂ ಓದಿ: 1.10 ಲಕ್ಷ ಸಾಮರ್ಥ್ಯ,700 ಕೋಟಿ ವೆಚ್ಚ- ತಲೆ ಎತ್ತಲಿದೆ ವಿಶ್ವದ ಬೃಹತ್ ಕ್ರೀಡಾಂಗಣ

ಮೊಟೆರಾ ಕ್ರೀಡಾಂಗಣದ 50,000 ಆಸನ ವ್ಯವಸ್ಥೆ ಹೊಂದಿತ್ತು. ಇದೀಗ ವಿಶ್ವದ ಅತೀ ದೊಡ್ಡ ಕ್ರೀಡಾಂಗಣವಾಗಿ ಲೋಕಾಪರ್ಣೆಯಾಗಲಿದೆ. ನೂತನ ಕ್ರೀಡಾಂಗಮ 1. 10 ಲಕ್ಷ ಆಸನ ವ್ಯವಸ್ಥೆ ಹೊಂದಿದೆ. ಈ ಕ್ರೀಡಾಂಗಣದ ವಿನ್ಯಾಸ, ಸೌಲಭ್ಯ ಸೇರಿದಂತೆ ಎಲ್ಲಾ ಮುತುವರ್ಜಿಯನ್ನು ಮೋದಿ ನಿರ್ವಹಿಸಿದ್ದಾರೆ. ಇದು ಪ್ರಧಾನಿ ಮೋದಿ ಕನಸು ಎಂದು ಗೃಹ ಮಂತ್ರಿ ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: #FitIndia ಆಂದೋಲನ; ಮೋದಿ ಜೊತೆ ಕೈಜೋಡಿಸಿದ ಕ್ರಿಕೆಟರ್ಸ್, ಅಥ್ಲೆಟ್ಸ್!

ದಿಗ್ಗಜ ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿ ದಾಖಲೆ ಬರೆದ ಮೊಟೆರಾ ಕ್ರೀಡಾಂಗಣ, ಇನ್ಮುಂದೆ ಸರ್ದಾರ್ ವಲ್ಲಬಾಯ್ ಪಟೇಲ್ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗುವುದು. ಗುಜರಾತ್‌ನಲ್ಲಿ ವಿಶ್ವದರ್ಜೆಯ ಕ್ರಿಕೆಟ್ ಕ್ರೀಡಾಂಗಣ ತಯಾರಿಸುವುದು ಪ್ರಧಾನಿ ಮೋದಿ ಗುರಿಯಾಗಿತ್ತು. ಅದರಂತೆ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ ಕ್ರೀಡಾಂಗಣ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
 

click me!