ವಿಶಾಖಪಟ್ಟಣಂ(ಆ.31]: ರಾಷ್ಟ್ರೀಯ ಕ್ರೀಡಾ ದಿನದಂದು ವೈಎಸ್‌ಆರ್ ಪಕ್ಷ ನಗರದಲ್ಲಿ ಹಾಕಿದ ಪೋಸ್ಟರ್‌ವೊಂದರಲ್ಲಿ ಭಾರೀ ಎಡವಟ್ಟಾಗಿದೆ.
ಸ್ಥಳೀಯ ವಾಕ್ಥಾನ್ ಆಯೋಜನೆ ವೇಳೆ ಹಾಕಿದ ಪೋಸ್ಟರ್‌ನಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಫೋಟೋ ಕೆಳಗಡೆ ಮಾಜಿ ಓಟಗಾರ್ತಿ ಪಿ.ಟಿ ಉಷಾ ಹೆಸರು ಬರೆಯಲಾಗಿದೆ. ಎಡವಟ್ಟು ತಿಳಿದ ಆಯೋಜಕರು ಪೋಸ್ಟರ್ ತೆಗೆಸಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ವೈರಲ್ ಆಗಿದೆ.
ಭಾರತೀಯಳ ಕೈಹಿಡಿದ ಪಾಕ್ ಕ್ರಿಕೆಟಿಗನ ಕಾಲೆಳೆದ ಸಾನಿಯಾ!
ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಕ್ರೀಡಾಪಟುಗಳನ್ನು ಉತ್ತೇಜಿಸಲು ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಆಟಗಾರರಿಗೆ ನಗದು ಬಹುಮಾನ ನೀಡುವ ’ವೈಎಸ್ಆರ್ ಕ್ರೀಡಾ ಪ್ರೊತ್ಸಾಹಕಲು’ ಎನ್ನುವ ಯೋಜನೆಯನ್ನು ರಾಷ್ಟ್ರೀಯ ಕ್ರೀಡಾದಿನದಂದೇ ಘೋಷಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.