ಗೆಲುವಿಗೆ ಮರಳಿದ RCBಗೆ ನಿಜಕ್ಕೂ ನೋವಾಗಿದ್ದು ಎಲ್ಲಿ? ಕೊಹ್ಲಿ ಹೇಳಿದ್ರು ಸತ್ಯ!

By Web DeskFirst Published Apr 26, 2019, 3:35 PM IST
Highlights

ಸತತ ಸೋಲಿನಿಂದ ಕಂಗೆಟ್ಟಿದ್ದ RCB ಇದೀಗ ಸತತ ಗೆಲುವಿನ ಅಲೆಯಲ್ಲಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕೊಹ್ಲಿ ಇದೀಗ ತಂಡದ ಸೋಲು ಗೆಲುವಿನ ಕುರಿತು ಮಾತನಾಡಿದ್ದಾರೆ. ಕೊಹ್ಲಿ ಸುದ್ದಿಗೋಷ್ಠಿ ವಿವರ ಇಲ್ಲಿದೆ.

ಬೆಂಗಳೂರು(ಏ.26): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಕಷ್ಟದಿಂದ ಹೊರಬಂದಿದೆ. ಆರಂಭದಲ್ಲಿ ಸತತ 6 ಪಂದ್ಯ ಸೋತಿದ್ದ RCB ತೀವ್ರ ಮುಖಭಂಘ ಅನುಭವಿಸಿತ್ತು. ಆದರೆ ಸೋಲಿನಿಂದ ಗೆಲುವಿನ ಹಳಿಗೆ ಮರಳಿದೆ RCB ಇದೀಗ ಸತತ 3 ಪಂದ್ಯ ಗೆದ್ದು ಇದೀಗ ಪ್ಲೇ ಆಫ್ ಆಸೆ ಜೀವಂತವಾಗಿರಿಸೋ ಲೆಕ್ಕಾಚಾರದಲ್ಲಿದೆ. ಗೆಲುವಿನ ಅಲೆಯಲ್ಲಿರುವ RCB ನಾಯಕ ವಿರಾಟ್ ಕೊಹ್ಲಿ ತಂಡ ಸೋಲು ಗೆಲುವು ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: RCBಗೆ ಕೈಕೊಡಲು ರೆಡಿಯಾದ ಇಬ್ಬರು ಸ್ಟಾರ್ ಪ್ಲೇಯರ್ಸ್..!

ಕಿಂಗ್ಸ್ ಇಲವೆನ್ ಪಂಜಾಬ್ ಗೆಲುವಿನ ಬಳಿಕ ಕೊಹ್ಲಿ ತಂಡದ ಪ್ರದರ್ಶನ RCB ತಂಡದಲ್ಲಿ ಹೊಸ ಆತ್ಮವಿಶ್ವಾಸ ತುಂಬಿದೆ. ಸತತ 3 ಹಾಗೂ ಓಟ್ಟು 4 ಪಂದ್ಯ ಗೆದ್ದಿದ್ದೇವೆ. ಇದೀಗ ನಮ್ಮ ಪ್ಲೇ ಆಫ್ ಆಸೆ ಜೀವಂತವಾಗಿದೆ. ಆದರೆ ಟೂರ್ನಿ ಆರಂಭಿಕ ಹಂತದಲ್ಲಿನ ಸತತ ಸೋಲು ನಿಜಕ್ಕೂ ನೋವು ತರಿಸಿತ್ತು. ತಂಡದ ಯಾವ ಆಟಗಾರನಿಗೂ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ತಂಡ ಕೂಡಿಕೊಂಡ ರಹಾನೆ..!

ಸತತ 6 ಸೋಲಿನಿಂದ ನೋವಿನಲ್ಲಿದ್ದ ನಮಗೆ 7ನೇ ಪಂದ್ಯದ ಗೆಲುವು ಹೊಸ ಹುರುಪು ನೀಡಿತು. ತಂಡದ ಆತ್ಮವಿಶ್ವಾಸ ಹೆಚ್ಚಾಯಿತು. ಕಳೆದ 5 ಪಂದ್ಯದಲ್ಲಿ ನಾವು 4ರಲ್ಲಿ ಗೆಲುವು ಸಾಧಿಸಿದ್ದೇವೆ. ನಮ್ಮ ಹೇಗೇ ಆಡುತ್ತೇವೇ ಅನ್ನೋದು ಎಲ್ಲರಿಗೂ ತಿಳಿದಿದೆ. ನಾವೀಗ ಯಾವುದೇ ಒತ್ತಡದಲ್ಲಿ ಆಡುತ್ತಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣ ನಮ್ಮ ತಂಡದ ಸ್ಟ್ರೆಂಥ್‌ಗೆ ತಕ್ಕಂತೆ ಇದೆ. ಇಲ್ಲಿ ರನ್ ಮಳೆ ಸುರಿಯುತ್ತೆ. ಆದರೆ ಆರಂಭಿಕ ಹಂತದಲ್ಲಿ ತವರಿನ ಕ್ರೀಡಾಂಗಣ ಕೂಡ ನಮ್ಮ ಕೈಹಿಡಿಯಲಿಲ್ಲ. ಈಗ ಎಲ್ಲರ ಮುಖದಲ್ಲಿ ನಗು ಕಾಣುತ್ತಿದ್ದೇವೆ. ಅಭಿಮಾನಿಗಳು ಸಂತಸದಲ್ಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ. 

ಇದನ್ನೂ ಓದಿ: ಪಂಜಾಬ್ ವಿರುದ್ಧ ಅಪರೂಪದ ದಾಖಲೆ ಬರೆದ RCB..!

ಎಪ್ರಿಲ್ 28 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೋರಾಟ ನಡೆಸಲಿದೆ. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ, RCBಗೆ ಮಾಡು ಇಲ್ಲವೇ ಮಡಿ ಪಂದ್ಯ. ಪ್ಲೇ ಆಫ್ ಆಸೆ ಜೀವಂತವಾಗಿರಿಸಲು ಇನ್ನುಳಿದ ಎಲ್ಲಾ ಪಂದ್ಯ ಗೆಲ್ಲಲೇಬೇಕು.
 

click me!