ಚೆಪಾಕ್'ನಲ್ಲಿಂದು ಚೆನ್ನೈ-ಮುಂಬೈ ನಡುವೆ ಹೈವೋಲ್ಟೇಜ್ ಕದನ

By Web DeskFirst Published Apr 26, 2019, 1:32 PM IST
Highlights

ತಲಾ 3 ಬಾರಿಯ ಐಪಿಎಲ್ ಚಾಂಪಿಯನ್ಸ್’ಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ತಂಡಗಳು ಇಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ ಕ್ರಿಕೆಟ್ ಅಭಿಮಾನಿಗಳು...

ಚೆನ್ನೈ(ಏ.26): ಐಪಿಎಲ್‌ 12ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ಗೇರುವ ನೆಚ್ಚಿನ ತಂಡಗಳೆನಿಸಿಕೊಂಡಿರುವ 3 ಬಾರಿ ಚಾಂಪಿಯನ್‌ಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌, ಶುಕ್ರವಾರ ಇಲ್ಲಿನ ಚೇಪಾಕ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಚೆನ್ನೈ ಈಗಾಗಲೇ 16 ಅಂಕ ಗಳಿಸಿ ಪ್ಲೇ-ಆಫ್‌ನಲ್ಲಿ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಅಧಿಕೃತಗೊಳ್ಳಲಿದೆ. ಮುಂಬೈ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯಿಸಿದರೆ ಪ್ಲೇ-ಆಫ್‌ ಸನಿಹಕ್ಕೆ ತಲುಪಲಿದೆ.

ರಾಜಸ್ಥಾನಕ್ಕೆ ರೋಚಕ ಜಯ ತಂದಿತ್ತ ಆರ್ಚರ್

ಚೆನ್ನೈ ಡಬಲ್‌ ಹ್ಯಾಟ್ರಿಕ್‌?: ಹಾಲಿ ಚಾಂಪಿಯನ್‌ ಚೆನ್ನೆ ಸೂಪರ್‌ ಕಿಂಗ್ಸ್‌ ಈ ವರ್ಷ ತವರಿನಲ್ಲಿ ಆಡಿರುವ ಎಲ್ಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯವನ್ನೂ ಗೆದ್ದು ಡಬಲ್‌ ಹ್ಯಾಟ್ರಿಕ್‌ ಬಾರಿಸಲು ಧೋನಿ ಪಡೆ ಎದುರು ನೋಡುತ್ತಿದೆ. ತಂಡ ಎದುರಿಸುತ್ತಿದ್ದ ಅಗ್ರ ಕ್ರಮಾಂಕದ ಸಮಸ್ಯೆಯೂ ಬಗೆಹರಿದಂತೆ ಕಾಣುತ್ತಿದ್ದು, ಚೆನ್ನೈ ಗೆಲ್ಲುವ ಫೇವರಿಟ್‌ ಎನಿಸಿಕೊಳ್ಳುತ್ತಿದೆ.

ಮುಂಬೈ ಮಧ್ಯಮ ಕ್ರಮಾಂಕದ ಸಮಸ್ಯೆ ಎದುರಿಸುತ್ತಿದೆ. ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ಡಿ ಕಾಕ್‌ ಮೇಲೆ ಹೆಚ್ಚು ಒತ್ತಡ ಬೀಳುತ್ತಿದ್ದು, ಬೌಲರ್‌ಗಳಿಂದಲೂ ತಂಡ ಸುಧಾರಿತ ಪ್ರದರ್ಶನವನ್ನು ನಿರೀಕ್ಷೆ ಮಾಡುತ್ತಿದೆ.

ಪಿಚ್‌ ರಿಪೋರ್ಟ್‌

ಚೆಪಾಕ್‌ ಕ್ರೀಡಾಂಗಣದ ಪಿಚ್‌ ಸ್ಪಿನ್ನರ್‌ಗಳ ಸ್ವರ್ಗ ಎನಿಸಿದ್ದು, ಇಲ್ಲಿ ದೊಡ್ಡ ಮೊತ್ತ ಗಳಿಸುವುದು ಕಷ್ಟ. 5 ಪಂದ್ಯಗಳಲ್ಲಿ 3ರಲ್ಲಿ ಮೊದಲು ಫೀಲ್ಡ್‌ ಮಾಡಿದ ತಂಡ ಗೆಲುವು ಸಾಧಿಸಿದೆ. ಒಮ್ಮೆಯೂ 180ಕ್ಕಿಂತ ಹೆಚ್ಚಿನ ಮೊತ್ತ ದಾಖಲಾಗಿಲ್ಲ. ಟಾಸ್‌ ಪ್ರಮುಖವೆನಿಸಲಿದೆ.

ಒಟ್ಟು ಮುಖಾಮುಖಿ: 25

ಚೆನ್ನೈ: 11

ಮುಂಬೈ: 14

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ವಾಟ್ಸನ್‌, ಡುಪ್ಲೆಸಿ, ರೈನಾ, ರಾಯುಡು, ಕೇದಾರ್‌, ಬ್ರಾವೋ, ಧೋನಿ (ನಾಯಕ), ಜಡೇಜಾ, ದೀಪಕ್‌ ಚಾಹರ್‌, ಹರ್ಭಜನ್‌, ತಾಹಿರ್‌

ಮುಂಬೈ: ಡಿಕಾಕ್‌, ರೋಹಿತ್‌ (ನಾಯಕ), ಸೂರ್ಯ, ಹಾರ್ದಿಕ್‌, ಪೊಲ್ಲಾರ್ಡ್‌, ಕಟ್ಟಿಂಗ್‌, ಕೃನಾಲ್‌, ರಾಹುಲ್‌, ಮರ್ಕಂಡೆ, ಮಾಲಿಂಗ, ಬುಮ್ರಾ

ಸ್ಥಳ: ಚೆನ್ನೈ 

ಪಂದ್ಯ ಆರಂಭ: ರಾತ್ರಿ 8ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!