ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯವಾದ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಮಾಜಿ ನಾಯಕ ಎಂ.ಎಸ್. ಧೋನಿ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಸೆ.27]: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ತಮ್ಮ ಜೀವನಾಧಾರಿತ ಸಿನಿಮಾ ಸೂಪರ್ ಹಿಟ್ ಆದ ಬಳಿಕ, ಇದೀಗ ಸ್ವತಃ ತಾವೇ ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರಾ?. ಈ ರೀತಿಯ ಸುದ್ದಿಯೊಂದು ಹಬ್ಬಿದೆ.
ಧೋನಿ ಅಲಭ್ಯತೆಗೆ ಕಾರಣ ಬಹಿರಂಗ; ಆತಂಕದಲ್ಲಿ ಫ್ಯಾನ್ಸ್!
ಖ್ಯಾತ ನಟ ಸಂಜಯ್ ದತ್ ಅವರ ‘ಡಾಗ್‌ಹೌಸ್’ ಎನ್ನುವ ಚಿತ್ರದಲ್ಲಿ ಧೋನಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಡಾಗ್‌ಹೌಸ್ ಒಂದು ಬಹುತಾರಾ ಚಿತ್ರವಾಗಿದ್ದು, ಸುನಿಲ್ ಶೆಟ್ಟಿ, ಇಮ್ರಾನ್ ಹಾಶ್ಮಿ ಹಾಗೂ ಆರ್.ಮಾಧವನ್ ಸಹ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಧೋನಿ ಸಹ ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಕ್ಟೋಬರ್ ಕೊನೆ ವೇಳೆಗೆ ಚಿತ್ರದ ತಾರಾಂಗಣದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.
ವಿಶ್ವಕಪ್ ವೇಳೆ ಧೋನಿ ಗಾಯಾಳು: ವಿಶ್ರಾಂತಿ?
ಎಂ.ಎಸ್.ಧೋನಿ ನವೆಂಬರ್ ವರೆಗೂ ಆಯ್ಕೆಗೆ ಲಭ್ಯವಿರುವುದಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ. ಧೋನಿಗೆ ವಿಶ್ರಾಂತಿ ನೀಡಲಾಗಿದೆಯೇ, ಅವರನ್ನು ತಂಡದಿಂದ ಕೈಬಿಡಲಾಗಿದೆಯೇ ಎನ್ನುವುದರ ಕುರಿತು ಬಿಸಿಸಿಐ ಆಯ್ಕೆ ಸಮಿತಿ ಸ್ಪಷ್ಟನೆ ನೀಡಿಲ್ಲ.
ಕಾಡಿ ಬೇಡಿ ಓಪನರ್ ಆಗಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್..!
ಮೂಲಗಳ ಪ್ರಕಾರ, ಬೆನ್ನು ನೋವಿನ ಸಮಸ್ಯೆಯ ನಡುವೆಯೇ ಧೋನಿ ವಿಶ್ವಕಪ್ಗೆ ತೆರಳಿದರು. ಅಲ್ಲಿ ನೋವು ಹೆಚ್ಚಾಗಿದ್ದು, ಮೊಣಕೈ ಗಾಯಕ್ಕೂ ಅವರು ತುತ್ತಾದರು ಎಂದು ಮೂಲಗಳು ತಿಳಿಸಿವೆ. ಧೋನಿ ಸದ್ಯ ಚೇತರಿಕೆಯ ಹಾದಿಯಲ್ಲಿದ್ದು, ಡಿಸೆಂಬರ್ ಇಲ್ಲವೇ 2020ರ ಜನವರಿಯಲ್ಲಿ ತಂಡಕ್ಕೆ ವಾಪಸಾಗಬಹುದು ಎನ್ನಲಾಗಿದೆ.