ಕೆಕೆಆರ್‌ ವಿರುದ್ಧ ತಿರುಗಿಬಿದ್ದ ಆ್ಯಂಡ್ರೆ ರಸೆಲ್‌..!

By Web DeskFirst Published Apr 29, 2019, 12:46 PM IST
Highlights

ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್’ರೈಡರ್ಸ್ ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಸತತ 6 ಸೋಲುಗಳ ಬಗ್ಗೆ ವೆಸ್ಟ್ ಇಂಡೀಸ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಕಿಡಿ ಕಾರಿದ್ದಾರೆ.

ಕೋಲ್ಕತಾ[ಏ.29]: 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಆರಂಭ ಪಡೆದರೂ ಸತತ ಸೋಲುಗಳಿಂದ ಕೋಲ್ಕತಾ ನೈಟ್‌ ರೈಡ​ರ್ಸ್ ಕಂಗೆಡಲು ತಂಡ ತೆಗೆದುಕೊಂಡ ಕೆಟ್ಟನಿರ್ಧಾರಗಳೇ ಕಾರಣ ಎಂದು ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌ ಕಿಡಿಕಾಡಿದ್ದಾರೆ. 

ವ್ಯರ್ಥವಾಯ್ತು ಪಾಂಡ್ಯ ಹೋರಾಟ- ಗೆಲುವಿನ ಸಿಹಿ ಕಂಡ KKR

‘ನಾವು ಉತ್ತಮ ತಂಡ ಹೊಂದಿದ್ದೇವೆ. ಆದರೆ ಕೆಟ್ಟನಿರ್ಧಾರಗಳಿಂದಾಗಿ ಸೋಲು ಕಾಣುತ್ತಿದ್ದೇವೆ. ಯಾವ ಸಮಯದಲ್ಲಿ ಯಾವ ಬೌಲರ್‌ಗೆ ಬೌಲಿಂಗ್‌ ನೀಡಬಾರದೋ, ಅದೇ ಬೌಲರ್‌ಗೆ ಚೆಂಡನ್ನು ನೀಡಲಾಗುತ್ತಿದೆ. ತಂಡದ ಕ್ಷೇತ್ರರಕ್ಷಣೆ ಎಲ್ಲಾ 8 ತಂಡಗಳ ಪೈಕಿ ಅತ್ಯಂತ ಕಳಪೆ. ತಂಡದ ಡ್ರೆಸ್ಸಿಂಗ್‌ ಕೋಣೆಯಲ್ಲಿ ಆರೋಗ್ಯಕರ ವಾತಾವರಣವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸೆಲ್‌ ಹೇಳಿಕೆಯಿಂದಾಗಿ ತಂಡದಲ್ಲಿ ಎಲ್ಲವೋ ಸರಿಯಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು, ಮುಂದಿನ ಆವೃತ್ತಿ ವೇಳೆಗೆ ತಂಡದಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಕೆಕೆಆರ್‌ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ರಸೆಲ್ ಅಸಮಾಧಾನ..?

ಸತತ ಆರು ಸೋಲು ಕಂಡಿದ್ದ ಕೋಲ್ಕತಾ ನೈಟ್’ರೈಡರ್ಸ್ ತಂಡವು ಈಡನ್ ಗಾರ್ಡನ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 34 ರನ್’ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಪ್ಲೇ ಆಫ್ ಕನಸನ್ನು ಕೆಕೆಆರ್ ತಂಡ ಜೀವಂತವಾಗಿರಿಸಿಕೊಂಡಿದೆ. ತವರಿನಲ್ಲೇ ಸತತ 4 ಸೋಲು ಕಂಡಿದ್ದ ಕೆಕೆಆರ್ ಬರೋಬ್ಬರಿ 4 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಜಯಕಂಡಿದೆ. ಅಂದಹಾಗಿ ಕೆಕೆಆರ್ ತಂಡ ಐಪಿಎಲ್’ನಲ್ಲಿ ನೂರನೇ ಗೆಲುವನ್ನು ಇದೇ ಪಂದ್ಯದಲ್ಲಿ ದಾಖಲಿಸಿದೆ. 
 

click me!