IPL ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ CSK

By Web Desk  |  First Published Apr 29, 2019, 11:18 AM IST

ಸನ್‌ರೈಸ​ರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್‌ ಗೆಲುವು ಸಾಧಿಸಿದ ಪರಿಣಾಮವಾಗಿ ಚೆನ್ನೈಗೆ ಪ್ಲೇ-ಆಫ್‌ ಸ್ಥಾನ ಖಚಿತವಾಯಿತು. 12 ಪಂದ್ಯಗಳಿಂದ 16 ಅಂಕ ಗಳಿಸಿರುವ ಚೆನ್ನೈ, ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಈ ಮೂಲಕ ಧೋನಿ ಪಡೆ ಅಪರೂಪದ ದಾಖಲೆಯೊಂದನ್ನು ಬರೆದಿದೆ.


ಮುಂಬೈ[ಏ.29]: ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ 12ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಹಂತಕ್ಕೆ ಪ್ರವೇಶ ಪಡೆದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಷ್ಟೇ ಅಲ್ಲದೇ ಆಡಿದ ಎಲ್ಲಾ ಆವೃತ್ತಿಯಲ್ಲೂ ಪ್ಲೇ ಆಫ್ ಪ್ರವೇಶಿಸಿದ ಏಕೈಕ ತಂಡ ಎನ್ನುವ ಅಪರೂಪದ ದಾಖಲೆಯನ್ನು ಧೋನಿ ಪಡೆ ನಿರ್ಮಿಸಿದೆ.

ಡೆಲ್ಲಿ ವಿರುದ್ಧ ಮುಗ್ಗರಿಸಿದ ಕೊಹ್ಲಿ ಪಡೆ- RCB ಪ್ಲೇ ಆಫ್ ಕನಸಿಗೆ ಹಿನ್ನಡೆ!

Latest Videos

undefined

ಶನಿವಾರ ಸನ್‌ರೈಸ​ರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್‌ ಗೆಲುವು ಸಾಧಿಸಿದ ಪರಿಣಾಮವಾಗಿ ಚೆನ್ನೈಗೆ ಪ್ಲೇ-ಆಫ್‌ ಸ್ಥಾನ ಖಚಿತವಾಯಿತು. 12 ಪಂದ್ಯಗಳಿಂದ 16 ಅಂಕ ಗಳಿಸಿರುವ ಚೆನ್ನೈ, ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಬೆಟ್ಟಿಂಗ್‌ ವಿವಾದದಿಂದಾಗಿ ಐಪಿಎಲ್‌ನಿಂದ ದೂರವಿದ್ದ 2 ವರ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ 10 ಆವೃತ್ತಿಗಳಲ್ಲಿ ಚೆನ್ನೈ ಪ್ಲೇ-ಆಫ್‌ ಹಂತ ಪ್ರವೇಶಿಸಿದೆ. 5 ಬಾರಿ ಫೈನಲ್‌ನಲ್ಲಿ ಆಡಿರುವ ಚೆನ್ನೈ 3 ಬಾರಿ ಪ್ರಶಸ್ತಿ ಜಯಿಸಿದರೆ, 2 ಬಾರಿ ರನ್ನರ್‌ ಅಪ್‌ ಆಗಿತ್ತು.

ವ್ಯರ್ಥವಾಯ್ತು ಪಾಂಡ್ಯ ಹೋರಾಟ- ಗೆಲುವಿನ ಸಿಹಿ ಕಂಡ KKR

2016 ಮತ್ತು 2017ರಲ್ಲಿ ನಿಷೇಧಕ್ಕೆ ಗುರಿಯಾಗಿದ್ದ ಚೆನ್ನೈ ಸೂಪರ್’ಕಿಂಗ್ಸ್ ತಂಡ 2018ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಧೋನಿ ನೇತೃತ್ವದ CSK ಮತ್ತೊಂದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಇದೇ ವೇಳೆ ಭಾನುವಾರ ಫಿರೋಜ್ ಶಾ ಕೋಟ್ಲಾದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಗ್ಗರಿಸುವ ಮೂಲಕ ಪ್ಲೇ ಆಫ್ ಪ್ರವೇಶದ ಕನಸನ್ನು ಭಗ್ನಗೊಳಿಸಿಕೊಂಡಿದೆ.  

click me!