
ನವದೆಹಲಿ[ಸೆ.14]: ಮುಂದಿನ ವರ್ಷ ಭಾರತದಲ್ಲಿ ಫಿಫಾ ಅಂಡರ್-17 ಮಹಿಳಾ ಫುಟ್ಬಾಲ್ ವಿಶ್ವಕಪ್ ನಡೆಯಲಿದ್ದು, ಶುಕ್ರವಾರ ವೇಳಾಪಟ್ಟಿ ಪ್ರಕಟಗೊಂಡಿತು. ನ.2ರಿಂದ 21ರ ವರೆಗೂ ಟೂರ್ನಿ ನಡೆಯಲಿದೆ ಎಂದು ಫಿಫಾ ಘೋಷಿಸಿತು.
ಮಹಿಳಾ ಫಿಫಾ ವಿಶ್ವಕಪ್‌ಗೆ ಭಾರತ ಆತಿಥ್ಯ: 5 ನಗರಗಳಿಗೆ ಫಿಫಾ ನಿಯೋಗ ಭೇಟಿ
ದೇಶದ ನಾಲ್ಕು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಭುವನೇಶ್ವರ ಆತಿಥ್ಯ ವಹಿಸುವುದು ಬಹುತೇಕ ಖಚಿತವಾಗಿದ್ದು, ಕೋಲ್ಕತಾ, ನವಿ ಮುಂಬೈ, ಗೋವಾ ಹಾಗೂ ಅಹಮದಾಬಾದ್ ನಗರಗಳ ನಡುವೆ ಸ್ಪರ್ಧೆ ಇದೆ.
ಕತಾರ್ ಫಿಫಾ ವಿಶ್ವಕಪ್ 2022ರ ಲಾಂಛನ ಅನಾವರಣ!
ಕಳೆದ ವರ್ಷ ಮಾರ್ಚ್’ನಲ್ಲಿ ಭಾರತಕ್ಕೆ ಟೂರ್ನಿ ಆತಿಥ್ಯ ಸಿಕ್ಕಿತ್ತು. 2017ರಲ್ಲಿ ಪುರುಷರ ಅಂಡರ್-17 ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.