ಅಕ್ಟೋಬರ್ 15ರಿಂದ ಬೆಂಗಳೂರಲ್ಲಿ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಟೂರ್ನಿ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟ
4 ದಿನಗಳ ಕಾಲ ನಡೆಯಲಿರುವ ಗೇಮ್ಸ್‌ನಲ್ಲಿ ಒಟ್ಟು 30 ತಂಡಗಳು ಸ್ಪರ್ಧಿಸಲಿವೆ
ಬೆಂಗಳೂರು(ಸೆ.28): 61ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಕ್ಟೋಬರ್ 15ಕ್ಕೆ ಚಾಲನೆ ಸಿಗಲಿದೆ ಎಂದು ಕ್ರೀಡಾಕೂಟದ ಮುಖ್ಯಸ್ಥ, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್‌ನಾರಾಯಣ್ ತಿಳಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.‘ಪ್ರತಿಷ್ಠಿತ ಕ್ರೀಡಾಕೂಟದ ಆಯೋಜನೆ ಆತಿಥ್ಯ ನಮ್ಮ ರಾಜ್ಯಕ್ಕೆ ಸಿಕ್ಕಿದ್ದು ಹೆಮ್ಮೆಯ ವಿಚಾರ. 3 ದಶಕಗಳ ಬಳಿಕ ನಮ್ಮಲ್ಲಿ ಕ್ರೀಡಾಕೂಟ ನಡೆಯುತ್ತಿದೆ. ಈ ಹಿಂದೆ ಮಂಗಳೂರಲ್ಲಿ ಕೂಟ ನಡೆದಿತ್ತು’ ಎಂದರು.
1200+ ಅಥ್ಲೀಟ್‌ಗಳು: 4 ದಿನಗಳ ಕಾಲ ನಡೆಯಲಿರುವ ಗೇಮ್ಸ್‌ನಲ್ಲಿ ಒಟ್ಟು 30 ತಂಡಗಳು ಸ್ಪರ್ಧಿಸಲಿವೆ. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಭಾರತೀಯ ರೈಲ್ವೇಸ್, ಎಲ್‌ಐಸಿ, ಒನ್‌ಜಿಸಿಯಂತಹ ಸಂಸ್ಥೆಗಳ ತಂಡಗಳು ಸಹ ಸ್ಪರ್ಧಿಸಲಿವೆ. 1200ಕ್ಕೂ ಹೆಚ್ಚು ಅಥ್ಲೀಟ್‌ಗಳು ಆಗಮಿಸಲಿದ್ದಾರೆ. ವೇಗದ ನಡಿಗೆ ಸೇರಿದಂತೆ 47 ಸ್ಪರ್ಧೆಗಳು ನಡೆಯಲಿವೆ. ಭಾರತ ಅಥ್ಲೆಟಿಕ್ಸ್ ಫೆಡರೇಶನ್ ನಿಗದಿಪಡಿಸಿದ ಅರ್ಹತಾ ಮಟ್ಟತಲುಪಿದ ಕ್ರೀಡಾಪಟುಗಳು ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ಬಾರಿ ತೆಲಂಗಾಣದ ವಾರಂಗಲ್‌ನಲ್ಲಿ ನಡೆಸಿದ್ದ ಕೂಟದಲ್ಲಿ ರೈಲ್ವೇಸ್ ತಂಡ ಸಮಗ್ರ ಚಾಂಪಿಯನ್ ಆಗಿತ್ತು ಎಂದು ಮಾಹಿತಿ ನೀಡಿದರು.
Took part in press meet held by Karnataka Athletics Association along with nation's athletic pride avaru on account of 61st Open Athlete Championship' 22.
Happy to share that 61st Open Athlete Championship-2022 will be held in from 15-19 Oct'22 pic.twitter.com/Vcg9vizQ6l
ಹೊಸ ಟ್ರ್ಯಾಕ್‌ನಲ್ಲಿ ಮೊದಲ ಕ್ರೀಡಾಕೂಟ
ಕಂಠೀರವ ಕ್ರೀಡಾಂಗಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಅಳವಡಿಸಿರುವ ನೂತನ ಸಿಂಥೆಟಿಕ್ ಟ್ರ್ಯಾಕ್ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ಗೆ ಆತಿಥ್ಯ ನೀಡಲಿದೆ. ಟ್ರ್ಯಾಕ್‌ನ ಗುಣಮಟ್ಟದ ಬಗ್ಗೆ ಅಂತಾರಾಷ್ಟ್ರೀಯ ಅಥ್ಲೀಟ್‌ಗಳಿಂದ ಪ್ರತಿಕ್ರಿಯೆ ಪಡೆಯಲು ಅವಕಾಶ ಸಿಗಲಿದೆ.
ರಾಷ್ಟ್ರೀಯ ಗೇಮ್ಸ್‌ಗೆ ರಾಜ್ಯದಿಂದ 421 ಮಂದಿ
ಬೆಂಗಳೂರು: ಸೆ.29ರಿಂದ ಗುಜರಾತ್‌ನಲ್ಲಿ ನಡೆಯಲಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ 421 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಸೋಮವಾರ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ(ಕೆಒಎ) ಯಾವ್ಯಾವ ಕ್ರೀಡೆಯಲ್ಲಿ ಎಷ್ಟೆಷ್ಟು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಿತು.
Roger Federer ಖುಷಿಗೆಂದು ಟೆನಿಸ್ ಆರಂಭಿಸಿದೆ, ಕ್ರೀಡೆ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ!
ಈಜು ಸ್ಪರ್ಧೆಯಲ್ಲಿ ಅತಿಹೆಚ್ಚು ಎಂದರೆ 68 ಮಂದಿ ಕಣಕ್ಕಿಳಿಯಲಿದ್ದು, ಅಥ್ಲೆಟಿಕ್ಸ್‌ನಲ್ಲಿ 44, ಹಾಕಿಯಲ್ಲಿ 36, ವಾಲಿಬಾಲ್‌ನಲ್ಲಿ 28 ಸ್ಪರ್ಧಿಗಳು ಇದ್ದಾರೆ. ಒಟ್ಟು 79 ಕೋಚ್ ಹಾಗೂ ಮ್ಯಾನೇಜರ್‌ಗಳು ಸೇರಿ 500 ಮಂದಿ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಅಂಚೆ ವಾಲಿಬಾಲ್ ಟೂರ್ನಿ: ರಾಜ್ಯ ತಂಡ ಶುಭಾರಂಭ
ಬೆಂಗಳೂರು: 35ನೇ ಆವೃತ್ತಿಯ ಅಖಿಲ ಭಾರತ ಅಂಚೆ ವಾಲಿಬಾಲ್ ಪಂದ್ಯಾವಳಿಗೆ ಮಂಗಳವಾರ ಚಾಲನೆ ದೊರೆತಿದ್ದು, ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ 3-0(25-9, 25-9, 25-6) ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿತು.
ಭಾರತ ತಂಡದ ನಾಯಕ ಎ.ಕಾರ್ತಿಕ್ ರಾಜ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಒಡಿಶಾ, ಕೇರಳ ತಂಡಗಳು ಸಹ ಗೆಲುವಿನ ಆರಂಭ ಪಡೆದವು. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಸ್ಪರ್ಧಿಸುತ್ತಿವೆ